ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಶುಕ್ರವಾರ 10 ಮತ್ತು 12 ನೇ ತರಗತಿಗಳ ಪರೀಕ್ಷಾ ವೇಳಾಪಟ್ಟಿ ಇಂದು ಬಿಡುಗಡೆಯಾಗುವ ಸಂಭವವಿದೆ. ಈ ಹಿಂದೆ ಪರೀಕ್ಷಾ ವೇಳಾಪಟ್ಟಿ ಪ್ರಕಟಕ್ಕೆ ಸಂಬಂಧಿಸಿದಂತೆ ಜನವರಿ ಮೊದಲ ವಾರದಲ್ಲಿ ವೇಳಾಪಟ್ಟಿ ಘೋಷಿಸಲಾಗುವುದು ಎಂದು ಬೋರ್ಡ್ ಅಧಿಕಾರಿಗಳು ತಿಳಿಸಿದ್ದರು.


COMMERCIAL BREAK
SCROLL TO CONTINUE READING

ಇದುವರೆಗೂ ಪರೀಕ್ಷಾ ವೇಳಾಪಟ್ಟಿಯನ್ನು ಘೋಷಿಸದ ಹಿನ್ನೆಲೆಯಲ್ಲಿ ಮೊದಲಿಗೆ ಜನವರಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ಪ್ರಾರಂಭವಾಗಲಿದ್ದು, ಲಿಖಿತ ಪರೀಕ್ಷೆಯು ಮಾರ್ಚ್ನಲ್ಲಿ ನಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ.


ಎಲ್ಲಾ ಸಿಬಿಎಸ್ಇ-ಸಂಯೋಜಿತ ಶಾಲೆಗಳು ಪ್ರಾಯೋಗಿಕ ಪರೀಕ್ಷೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ, ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಫೆಬ್ರವರಿ 25,2018ರೊಳಗೆ ಸಿಬಿಎಸ್ಇ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲು ಮಂಡಳಿ ಈಗಾಗಲೇ ಸೂಚನೆ ನೀಡಿದೆ. 


ಮಂಡಳಿಯು ಪ್ರಕಟಿಸಿದ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್ಸೈಟ್ cbse.nic.in ನಲ್ಲಿ ಪರಿಶೀಲಿಸಬಹುದು.


ಮಾರ್ಚ್ 2ರ ಹೋಳಿ ಹಬ್ಬದ ನಂತರ 10 ಮತ್ತು 12ನೇ ತರಗತಿ ಪರೀಕ್ಷೆಗಳು ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.


ಈ ಹಿಂದೆ ಫೆಬ್ರವರಿಯಲ್ಲಿ ಸಿಬಿಎಸ್ ಸಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಸೆಪ್ಟೆಂಬರ್ 2017 ರಲ್ಲಿ ಮಂಡಳಿಯು ತಿಳಿಸಿತ್ತು. ಆದರೆ ಈ ವರದಿಗಳನ್ನು ವಜಾ ಮಾಡಿರುವ ಮಂಡಳಿಯು ಪರೀಕ್ಷೆಗಳು ಮಾರ್ಚ್ 2018ರಲ್ಲಿ ನಡೆಯಲಿದೆ ಎಂದು ದೃಢಪಡಿಸಿದೆ.