10 ಮತ್ತು 12 ನೇ ತರಗತಿ ಸಿಬಿಎಸ್‌ಇ ಪರೀಕ್ಷೆಯನ್ನು ಜುಲೈ 1 ರಿಂದ 15 ರವರೆಗೆ ನಡೆಸಲು ನಿರ್ಧಾರ
ಕರೋನವೈರಸ್ ಮಧ್ಯೆ ಮುಂದೂಡಲ್ಪಟ್ಟ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಅಂಗಸಂಸ್ಥೆ ಹೊಂದಿರುವ ಶಾಲೆಗಳಿಗೆ 10 ಮತ್ತು 12 ನೇ ತರಗತಿ ಪರೀಕ್ಷೆಗಳು ಜುಲೈ ಮೊದಲಾರ್ಧದಲ್ಲಿ ನಡೆಯಲಿದೆ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಶುಕ್ರವಾರ ತಿಳಿಸಿದ್ದಾರೆ.
ನವದೆಹಲಿ: ಕರೋನವೈರಸ್ ಮಧ್ಯೆ ಮುಂದೂಡಲ್ಪಟ್ಟ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಅಂಗಸಂಸ್ಥೆ ಹೊಂದಿರುವ ಶಾಲೆಗಳಿಗೆ 10 ಮತ್ತು 12 ನೇ ತರಗತಿ ಪರೀಕ್ಷೆಗಳು ಜುಲೈ ಮೊದಲಾರ್ಧದಲ್ಲಿ ನಡೆಯಲಿದೆ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಶುಕ್ರವಾರ ತಿಳಿಸಿದ್ದಾರೆ.
"ಬಾಕಿ ಇರುವ ಪರೀಕ್ಷೆಗಳ ವೇಳಾಪಟ್ಟಿಗಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಜುಲೈ 1 ರಿಂದ 15 ರವರೆಗೆ ಪರೀಕ್ಷೆಗಳನ್ನು ನಡೆಸಬೇಕೆಂದು ಇಂದು ನಿರ್ಧರಿಸಲಾಗಿದೆ" ಎಂದು ಅವರು ಹೇಳಿದರು. ಸಿಬಿಎಸ್‌ಇ ಪರೀಕ್ಷೆಯ ವಿವರವಾದ ವೇಳಾಪಟ್ಟಿಯನ್ನು ಸಂಜೆ ನಂತರ ಪ್ರಕಟಿಸಲಿದೆ ಎಂದರು.
COVID-19 ಹಿನ್ನಲೆಯಲ್ಲಿ ದೇಶಾದ್ಯಂತದ ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳನ್ನು ಮುಚ್ಚಲಾಯಿತು ತದನಂತರ ಪರೀಕ್ಷೆಗಳನ್ನು ಮಾರ್ಚ್ 16 ರಂದು ಮುಂದೂಡಲಾಯಿತು. ನಂತರ, ಮಾರ್ಚ್ 24 ರಂದು ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಲಾಯಿತು, ಅದನ್ನು ಈಗ ಮೇ 17 ರವರೆಗೆ ವಿಸ್ತರಿಸಲಾಗಿದೆ.