CBSE 12 ನೇ ತರಗತಿಯ ಪ್ರಮುಖ ವಿಷಯಗಳಿಗೆ ಮಾತ್ರ ನಡೆಯಲಿದೆಯೇ ಪರೀಕ್ಷೆ?
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಎಲ್ಲಾ ವಿಷಯಗಳಲ್ಲೂ 12 ನೇ ತರಗತಿ ಪರೀಕ್ಷೆಯನ್ನು ಪ್ರಮುಖ ವಿಷಯಗಳಿಗೆ ಮಾತ್ರ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಎಲ್ಲಾ ವಿಷಯಗಳಲ್ಲೂ 12 ನೇ ತರಗತಿ ಪರೀಕ್ಷೆಯನ್ನು ಪ್ರಮುಖ ವಿಷಯಗಳಿಗೆ ಮಾತ್ರ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : Sundarlal Bahuguna : ಚಿಪ್ಕೋ ಚಳುವಳಿಯ ರೂವಾರಿ 'ಸುಂದರ್ ಲಾಲ್ ಬಹುಗುಣ' ಬಲಿ ಪಡೆದ ಕೊರೋನಾ!
ಸಿಬಿಎಸ್ಇ (CBSE) ಮಂಡಳಿ 12 ನೇ ತರಗತಿ ವಿದ್ಯಾರ್ಥಿಗಳಿಗೆ 174 ವಿಷಯಗಳನ್ನು ನೀಡುತ್ತದೆ, ಅದರಲ್ಲಿ ಸರಿಸುಮಾರು 20 ವಿಷಯಗಳನ್ನು ಸಿಬಿಎಸ್‌ಇ ಪ್ರಮುಖ ವಿಷಯಗಳೆಂದು ಪರಿಗಣಿಸುತ್ತದೆ.
ಇವುಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಇತಿಹಾಸ, ರಾಜಕೀಯ ವಿಜ್ಞಾನ, ವ್ಯವಹಾರ ಅಧ್ಯಯನ, ಅಕೌಂಟನ್ಸಿ, ಭೌಗೋಳಿಕತೆ, ಅರ್ಥಶಾಸ್ತ್ರ ಮತ್ತು ಇಂಗ್ಲಿಷ್ ಸೇರಿವೆ. ಸಿಬಿಎಸ್‌ಇ ವಿದ್ಯಾರ್ಥಿ ಕನಿಷ್ಠ ಐದು ಮತ್ತು ಗರಿಷ್ಠ ಆರು ವಿಷಯಗಳನ್ನು ತೆಗೆದುಕೊಳ್ಳುತ್ತಾನೆ. ಇವುಗಳಲ್ಲಿ, ಸಾಮಾನ್ಯವಾಗಿ, ನಾಲ್ಕು ಪ್ರಮುಖ ವಿಷಯಗಳಾಗಿವೆ.
ಇದನ್ನೂ ಓದಿ : Madhya Pradesh Govt : 'ಕೊರೋನಾದಿಂದ ಮೃತಪಟ್ಟ ಕುಟುಂಬಸ್ಥರಿಗೆ 1 ಲಕ್ಷ ರೂ. ಪರಿಹಾರ'
ಮೂಲಗಳ ಪ್ರಕಾರ, ಪ್ರಮುಖ ವಿಷಯಗಳಿಗೆ ಮಂಡಳಿಯ ಪರೀಕ್ಷೆಗಳನ್ನು ನಡೆಸಲು ಸಿಬಿಎಸ್‌ಇ ಶಿಕ್ಷಣ ಸಚಿವಾಲಯಕ್ಕೆ ಎರಡು ಆಯ್ಕೆಗಳನ್ನು ಪ್ರಸ್ತಾಪಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಲಿರುವ ರಾಜ್ಯ ಶಿಕ್ಷಣ ಸಚಿವರು ಮತ್ತು ರಾಜ್ಯ ಶಿಕ್ಷಣ ಕಾರ್ಯದರ್ಶಿಗಳ ಸಭೆಯಲ್ಲಿ ಇವುಗಳ ಬಗ್ಗೆ ಚರ್ಚಿಸಲು ಸಜ್ಜಾಗಿದೆ.
ಈ ಸಭೆಯಲ್ಲಿ ಶಿಕ್ಷಣ ಸಚಿವ ರಮೇಶ್ ಪೊಹ್ಕ್ರಿಯಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ ಕೂಡ ಭಾಗವಹಿಸಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.