ನವದೆಹಲಿ : ಡಿಸೆಂಬರ್ 8 ರಂದು ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಮುಖ್ಯ ರಕ್ಷಣಾ ಸಿಬ್ಬಂದಿ (CDS) ಜನರಲ್ ಬಿಪಿನ್ ರಾವತ್ ಅವರನ್ನು ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಮಾಡಲಾಯಿತು. ಅವರ ಪತ್ನಿ ಮಧುಲಿಕಾ ರಾವತ್ ಅವರೊಂದಿಗೆ ಅವರ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಯಿತು. 


COMMERCIAL BREAK
SCROLL TO CONTINUE READING

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಜನರಲ್ ಬಿಪಿನ್ ರಾವತ್ ಅವರ ಪುತ್ರಿಯರು ಶನಿವಾರ ಮಧ್ಯಾಹ್ನ ಹರಿದ್ವಾರದಲ್ಲಿ ತಮ್ಮ ಪೋಷಕರ ಚಿತಾಭಸ್ಮವನ್ನು ಗಂಗಾದಲ್ಲಿ ವಿಸರ್ಜನೆ ಮಾಡಿದರು.


ಇದನ್ನೂ ಓದಿ : CDS ಬಿಪಿನ್‌ ರಾವತ್‌ ಸಾವಿನ ಬಗ್ಗೆ ಕಾಮೆಂಟ್‌: ಬ್ಯಾಂಕ್‌ ಉದ್ಯೋಗಿ ಅಮಾನತು!


ಇಂದು ಬೆಳಗ್ಗೆ ಸಿಡಿಎಸ್ ಜನರಲ್ ರಾವತ್ ಅವರ ಪುತ್ರಿಯರಾದ(Bipin Rawat daughters) ಕೃತಿಕಾ ಮತ್ತು ತಾರಿಣಿ ಅವರು ದೆಹಲಿ ಕಂಟೋನ್ಮೆಂಟ್‌ನ ಬ್ರಾರ್ ಸ್ಕ್ವೇರ್ ಸ್ಮಶಾನದಿಂದ ತಮ್ಮ ಹೆತ್ತವರ ಚಿತಾಭಸ್ಮವನ್ನು ಸಂಗ್ರಹಿಸಿ ಹರಿದ್ವಾರಕ್ಕೆ ತಲುಪಿ ಗಂಗಾನದಿಯಲ್ಲಿ ಮುಳುಗಿಸಿದರು.


ಶುಕ್ರವಾರ ಇಬ್ಬರು ತಮ್ಮ ತಂದೆ ತಾಯಿಯ ಅಂತಿಮ ಸಂಸ್ಕಾರ(cremation) ನೆರವೇರಿಸಿದರು. ಡಿಸೆಂಬರ್ 8 ರಂದು ತಮಿಳುನಾಡಿನ ಕುನೂರ್ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ 13 ಜನರಲ್ಲಿ ಸಿಡಿಎಸ್ ಜನರಲ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಸೇರಿದ್ದಾರೆ.


ಇದನ್ನೂ ಓದಿ : Omicron : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಓಮಿಕ್ರಾನ್ ಎರಡನೇ ಪ್ರಕರಣ ಪತ್ತೆ..!


ಇದಕ್ಕೂ ಮುನ್ನ ಶುಕ್ರವಾರ ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್(Nirmala Sitharaman), ಮನ್ಸುಖ್ ಮಾಂಡವಿಯಾ, ಸ್ಮೃತಿ ಇರಾನಿ, ನರೇಂದ್ರ ಸಿಂಗ್ ತೋಮರ್ ಮತ್ತು ಸರ್ಬಾನಂದ ಸೋನೋವಾಲ್ ಅವರು ಅಂತಿಮ ನಮನ ಸಲ್ಲಿಸಲು ಜನರಲ್ ಬಿಪಿನ್ ರಾವತ್ ಅವರ ನಿವಾಸಕ್ಕೆ ಆಗಮಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಹರೀಶ್ ಸಿಂಗ್ ರಾವತ್, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಡಿಎಂಕೆ ನಾಯಕರಾದ ಎ ರಾಜಾ ಮತ್ತು ಕನಿಮೋಳಿ ಸೇರಿದಂತೆ ಹಲವಾರು ರಾಜಕೀಯ ನಾಯಕರು ಪಾರ್ಥೀವ ಶರೀರದ ಮೇಲೆ ಪುಷ್ಪ ನಮನ ಸಲ್ಲಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.