ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಆರ್ಎಸ್ಪುರಾ ಮತ್ತು ಅಖ್ನೂರ್ ಕ್ಷೇತ್ರಗಳಲ್ಲಿ ಪಾಕಿಸ್ತಾನದ ಸೇನೆಯು ಶನಿವಾರ ಮತ್ತೊಮ್ಮೆ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದೆ.


COMMERCIAL BREAK
SCROLL TO CONTINUE READING

ಇದಕ್ಕೆ ಭಾರತೀಯ ಸೇನೆಯು ಪ್ರತೀಕಾರವಾಗಿ ಗುಂಡಿನ ದಾಳಿ ನಡೆಸುತ್ತಿದೆ.ಪಾಕಿಸ್ತಾನವು ಸತತವಾಗಿ ಮೂರನೆಯ ದಿನ ರೇಂಜರ್ಸ್ ನಾಗರೀಕ ಪ್ರದೇಶಗಳನ್ನು ಮತ್ತು ಗಡಿ ಹೊರವಲಯಗಳಲ್ಲಿ ದಾಳಿ ಮಾಡಿದೆ.


ನಿನ್ನೆಯ ಪಾಕಿಸ್ತಾನದ  LoC ನಲ್ಲಿ ಕದನ ವಿರಾಮವನ್ನು ಉಲ್ಲಂಘನೆಯಲ್ಲಿ  ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಕನಿಷ್ಠ 11 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ರಾಮಗಢ ಸೆಕ್ಟರ್ನಲ್ಲಿನ ಕತುವಾದಲ್ಲಿನ ಹಿರನಗರ್ ವಲಯದಲ್ಲಿ ಐದು ಮತ್ತು ಕಣಿವೆಯಲ್ಲಿ ಆರ್ಎಸ್ ಪುರಾ ಸೆಕ್ಟರ್ನಲ್ಲಿ ನಾಲ್ಕು ನಾಗರಿಕರು ಗಾಯಗೊಂಡಿದ್ದಾರೆ.ಇದಕ್ಕೆ ಬಿಎಸ್ಎಫ್ ಸಿಬ್ಬಂದಿ ಕೂಡ ಭಾರಿ ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.