ಮತ್ತೆ ಕದನ ವಿರಾಮ ಉಲ್ಲಂಘನೆ; 3 ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಪೂಂಚ್ ಮತ್ತು ರಾಜೌರಿಯಲ್ಲಿ ಪಾಕಿಸ್ತಾನವು ಗಡಿಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಪಾಕಿಸ್ತಾನದ ಈ ಉದ್ಧಟತನಕ್ಕೆ ಭಾರತ ಸೂಕ್ತ ಉತ್ತರ ನೀಡಿದ್ದು, ಪ್ರತೀಕಾರವಾಗಿ ಭಾರತೀಯ ಮೂರು ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಪಾಕಿಸ್ತಾನ ಆಗಸ್ಟ್ 15 ರಂದು ಸಹ ಗಡಿಯಲ್ಲಿ ತನ್ನ ದುಷ್ಕೃತ್ಯವನ್ನು ಮುಂದುವರೆಸಿದೆ. ಪೂಂಚ್ ಮತ್ತು ರಾಜೌರಿಯಲ್ಲಿ ಪಾಕಿಸ್ತಾನವು ಗಡಿಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಪಾಕಿಸ್ತಾನದ ಈ ಉದ್ಧಟತನಕ್ಕೆ ಭಾರತ ಸೂಕ್ತ ಉತ್ತರ ನೀಡಿದ್ದು, ಪ್ರತೀಕಾರವಾಗಿ ಭಾರತೀಯ ಮೂರು ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿದೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ಸಂಜೆ 5: 30 ಕ್ಕೆ ಪಾಕಿಸ್ತಾನ ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿದೆ. ಪಾಕಿಸ್ತಾನದ ಪತ್ರಿಕೆ ಡಾನ್ ಕೂಡ ಭಾರತದ ಪರವಾಗಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಹೊಸದಲ್ಲ ಎಂದು ಒಪ್ಪಿಕೊಂಡಿದೆ. ಭಯೋತ್ಪಾದಕರನ್ನು ಭಾರತೀಯ ಗಡಿಗೆ ಕಳುಹಿಸಲು ಅವರು ಆಗಾಗ್ಗೆ ಗುಂಡಿನ ದಾಳಿ ನಡೆಸಿದ್ದಾರೆ. ಕಳೆದ ಹಲವಾರು ದಿನಗಳಿಂದ ಪಾಕಿಸ್ತಾನದ ಈ ಪ್ರಯತ್ನವನ್ನು ಭಾರತೀಯ ಸೇನೆ ತಡೆಯುತ್ತಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಮತ್ತು 35 ಎ ಕುರಿತು ಭಾರತದ ನಿರ್ಧಾರದ ನಂತರ ಪಾಕಿಸ್ತಾನ ಇನ್ನಷ್ಟು ಆಕ್ರೋಶಗೊಂಡಿದೆ. ಪಾಕಿಸ್ತಾನ ಸರ್ಕಾರ ಮತ್ತು ಸೇನೆ ನಿರಂತರವಾಗಿ ಭಾರತದ ಒಳನುಸುಳಿ ಪ್ರತೀಕಾರ ತೀರಿಸಿಕೊಳ್ಳಲು ಹೊಂಚು ಹಾಕುತ್ತಿದೆ. ಭಾರತದ ವಿರುದ್ಧ ಯುದ್ಧ ಮಾಡುವುದಾಗಿಯೂ ಬೆದರಿಕೆ ಹಾಕಲಾಗುತ್ತಿದೆ. ಆದಾಗ್ಯೂ, ಪಾಕಿಸ್ತಾನದ ಯಾವುದೇ ದುಷ್ಕೃತ್ಯಕ್ಕೆ ಸೇನೆಯು ಸ್ಪಂದಿಸುತ್ತದೆ ಎಂದು ಸೇನಾ ಮುಖ್ಯಸ್ಥ ವಿಪಿನ್ ರಾವತ್ ಈ ಹಿಂದೆ ಸ್ಪಷ್ಟವಾಗಿ ಹೇಳಿದ್ದರು.
ಮತ್ತೊಂದೆಡೆ, ಪಾಕಿಸ್ತಾನವು ಭಾರತೀಯ ಸೇನೆಯನ್ನು ಹಾನಿಗೊಳಿಸಿದೆ ಎಂದು ಹೇಳಿಕೊಂಡಿದೆ. ಪಾಕಿಸ್ತಾನದ ಈ ಹೇಳಿಕೆ ಸುಳ್ಳು ಎಂದು ಸೇನೆ ಇದನ್ನು ನಿರಾಕರಿಸಿದೆ.
ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್:
73 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದಲ್ಲಿನ ಸೇನಾ ಶಿಬಿರದಲ್ಲಿ ಸ್ವಾತಂತ್ರ್ಯೋತ್ಸವದ ಆಚರಣೆಗಳು ನಡೆದವು. ಸೇನೆಯ ಉತ್ತರ ಕಮಾಂಡ್‌ನ ಜಿಒಸಿ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ಧ್ವಜಾರೋಹಣ ಮಾಡಿದರು. ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್, 'ನಾವು ಯಾವುದೇ ಸಮಯದಲ್ಲಿ ಸಿದ್ಧರಾಗಿರಬೇಕು. ನೆರೆಯ ದೇಶ ಹೇಗೆ ಒಳನುಸುಳುವಿಕೆಯಲ್ಲಿ ತೊಡಗಿದೆ? ಹಾನಿ ಮಾಡುತ್ತಿದೆ ಎಂಬುದು ನಮಗೆ ತಿಳಿದಿದೆ. ನಾವೆಲ್ಲರೂ ನಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುವುದು ನಮಗೆ ಮುಖ್ಯವಾಗಿದೆ. ನಾವು ಗಂಭೀರ ಕ್ರಮ ಕೈಗೊಂಡಾಗಲೆಲ್ಲಾ ನಾವು ಸೂಕ್ತವಾದ ಉತ್ತರವನ್ನು ನೀಡಬಹುದು. ಇಲ್ಲಿಯವರೆಗೆ ನೀವು ಅದನ್ನು ಚೆನ್ನಾಗಿ ನಿಭಾಯಿಸಿದ್ದೀರಿ, ನಿಮ್ಮ ಸೈನ್ಯದ ಕಮಾಂಡರ್ ಆಗಿ, ನಾನು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ. ನಾವು ಎದುರಿಸುತ್ತಿರುವ ಯಾವುದೇ ಸವಾಲನ್ನು ಜಯಿಸಲು ನಮಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.