ನವದೆಹಲಿ: ಕರೋನಾ ವೈರಸ್ ಪ್ರಕೋಪದ ಹಿನ್ನೆಲೆ ಕೇಂದ್ರ ಸರ್ಕಾರವು ಫಿಟ್‌ನೆಸ್, ಆರ್‌ಸಿ, ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್ ಮುಂತಾದ ದಾಖಲೆಗಳ ನವೀಕರಿಸುವ ತಿಥಿಯನ್ನು 2020 ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ. ಇಂತಹ ಸಂದರ್ಭದಲ್ಲಿ, ಒಂದು ವೇಳೆ ನಿಮ್ಮ ಚಾಲನಾ ಪರವಾನಗಿ, ಪರವಾನಗಿ ಇತ್ಯಾದಿಗಳ ಅವಧಿ ಮುಗಿದಿದ್ದರೆ, ನಿಮಗೆ ಈ ಕೆಲಸ ಪೂರ್ಣಗೊಳಿಸಲು ಡಿಸೆಂಬರ್ 31 ರವರೆಗೆ ಅನುಮತಿ ನೀಡಲಾಗಿದೆ. ಈ ಮೊದಲು ಈ ಗಡುವು ಸೆಪ್ಟೆಂಬರ್ ವರೆಗೆ ಮಾತ್ರ ಇತ್ತು.


COMMERCIAL BREAK
SCROLL TO CONTINUE READING

ಕರೋನಾ ಲಾಕ್‌ಡೌನ್ ನಡುವೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಅವಧಿ ಮೀರಿದ ಚಾಲನಾ ಪರವಾನಗಿ, ಆರ್‌ಸಿ, ಫಿಟ್‌ನೆಸ್ ಪ್ರಮಾಣಪತ್ರ, ಎಲ್ಲಾ ರೀತಿಯ ಪರವಾನಗಿಗಳು ಮತ್ತು ಇತರ ಸಂಬಂಧಿತ ದಾಖಲೆಗಳ ಮಾನ್ಯತೆಯನ್ನು 2020 ಜೂನ್ 30 ರವರೆಗೆ ವಿಸ್ತರಿಸಿ ಎಂದು ಆದೇಶ ಹೊರಡಿಸಿತ್ತು. ಇದರ ನಂತರ, ಸರ್ಕಾರವು ಈ ಗಡುವನ್ನು ಸೆಪ್ಟೆಂಬರ್ ವರೆಗೆ ಮತ್ತು ಇದೀಗ ಡಿಸೆಂಬರ್ ವರೆಗೆ ವಿಸ್ತರಿಸಿದೆ.


ಕರೋನಾ ವೈರಸ್ ಪ್ರಕೋಪವನ್ನು ಗಮನದಲ್ಲಿಟ್ಟುಕೊಂಡು, ಇವುಗಳಿಗೆ ಸಂಬಂಧಪಟ್ಟ ಕಚೇರಿಗಳಲ್ಲಿ ಕನಿಷ್ಠ ಜನಸಂದಣಿಯನ್ನು ಕಾಯುವಂತೆ  ಸೂಚನೆಗಳನ್ನು ನೀಡಲಾಗಿದೆ. ಲಾಕ್‌ಡೌನ್ ಮತ್ತು ಸೆಕ್ಷನ್ 144 ಇನ್ನೂ ಅನೇಕ ಸ್ಥಳಗಳಲ್ಲಿ ಜಾರಿಯಲ್ಲಿದೆ, ಇದರಿಂದ ದಾಖಲೆಗಳ ನವೀಕರಣದ ಕೆಲಸದ ಮೇಲೆ ಪ್ರಭಾವ ಉಂಟಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತನ್ನ ನವೀಕರಣದ ಕೊನೆಯ ದಿನಾಂಕವನ್ನು ವಿಸ್ತರಿಸಲು ನಿರ್ಧರಿಸಿದೆ.