ನವದೆಹಲಿ: ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಎರಡು ವರ್ಷಗಳ ಹಿಂದೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ನ ಮತ್ತೆರಡು ವಿಡಿಯೋಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಇದೇ ಸೆಪ್ಟೆಂಬರ್ 29ಕ್ಕೆ ಸರ್ಜಿಕಲ್ ಸ್ಟ್ರೈಕ್ ನಡೆದು ಎರಡು ವರ್ಷಗಳು ಪೂರ್ಣಗೊಳ್ಳುತ್ತಿದೆ. ಕಳೆದ ವರ್ಷವೂ ಕೇಂದ್ರ ಸರ್ಕಾರ ಸರ್ಜಿಕಲ್ ಸ್ಟ್ರೈಕ್'ನ ಮೊದಲ ವೀಡಿಯೋ ಬಿಡುಗಡೆ ಮಾಡಿತ್ತು. ಈ ಸಂದರ್ಭದಲ್ಲಿ ಸರ್ಜಿಕಲ್ ಸ್ಟ್ರೈಕ್ ಎಂಬುದೆಲ್ಲಾ ಸುಳ್ಳು. ಒಂದು ವೇಳೆ ನಡೆದಿದ್ದರೂ ಅದು ಸೈನಿಕರ ಪರಿಶ್ರಮವೇ ಹೊರತು ಕೇಂದ್ರ ಸರ್ಕಾರದ ಪಾತ್ರವಿಲ್ಲ. ಬಿಜೆಪಿ ಅದರ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಟೀಕೆ ಮಾಡಿದ್ದವು. ಅದಕ್ಕೆ ಉತ್ತರವಾಗಿ ಇದೀಗ ಕೇಂದ್ರ ಸರ್ಕಾರ ಮತ್ತೆರಡು ವೀಡಿಯೋ ಬಿಡುಗಡೆ ಮಾಡಿದೆ. 


ವೀಡಿಯೋದಲ್ಲಿ ಸೈನಿಕರ ಮೊದಲ ಟಾರ್ಗೆಟ್ ಆಗಿದ್ದ ಉಗ್ರಗಾಮಿಗಳ ಕ್ಯಾಪ್‍ಗಳು ಸೆರೆಯಾಗಿದ್ದು, ಬಳಿಕ ಯೋಧರು ಅವುಗಳ ಮೇಲೆ ದಾಳಿ ನಡೆಸುವ ಸಂದರ್ಭದ ದೃಶ್ಯಗಳು ಲಭಿಸಿತ್ತು. ಬೆಳಗ್ಗೆ 6.16 ಸಮಯಕ್ಕೆ ಎರಡನೇ ಟಾರ್ಗೆಟ್ ಮೇಲೆ ದಾಳಿ ನಡೆಸಲಾಗಿದೆ. ಮೂರನೇ ಟಾರ್ಗೆಟ್ ಬಂಕರ್ ಆಗಿದ್ದು, ಕೊನೆಯ ಫ್ರೇಮ್ ನಲ್ಲಿ ಉಗ್ರರ ಬಂಕರ್ ನಾಶವಾಗುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.


2016 ಸೆ.29 ರಂದು ಪಾಕಿಸ್ತಾನದ ಸೇನೆ ಗಡಿ ರೇಖೆ ದಾಟಿ ಸರ್ಜಿಕಲ್ ದಾಳಿ ನಡೆಸಿತ್ತು. ಜಮ್ಮು ಕಾಶ್ಮೀರದ ಉರಿ ದಾಳಿಯ ಪ್ರತಿಕಾರವಾಗಿ ಭಾರತೀಯ ಸೇನೆ ಈ ದಾಳಿ ನಡೆಸಿತ್ತು. ಅಲ್ಲದೇ ಈ ದಾಳಿಯಲ್ಲಿ 20 ಉಗ್ರರನ್ನು ಹತ್ಯೆ ಮಾಡಿದ್ದಾಗಿ ಮಾಹಿತಿ ನೀಡಲಾಗಿತ್ತು.