ಐದು ವರ್ಷಗಳಲ್ಲಿ 3.96 ಲಕ್ಷ ಕಂಪನಿಗಳನ್ನು ಮುಚ್ಚಿಸಿದ ಕೇಂದ್ರ ಸರ್ಕಾರ, ನಿರ್ಧಾರದ ಹಿಂದಿನ ಕಾರಣ ಇದು
ಕಂಪನಿಗಳ ಕಾಯಿದೆಯಡಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿದ 3.96 ಲಕ್ಷ ಕಂಪನಿಗಳನ್ನು ಕಳೆದ ಐದು ಹಣಕಾಸು ವರ್ಷಗಳಲ್ಲಿ ಸರ್ಕಾರಿ ದಾಖಲೆಗಳಿಂದ ತೆಗೆದುಹಾಕಲಾಗಿದೆ.
ನವದೆಹಲಿ : ಕಳೆದ 5 ವರ್ಷಗಳಲ್ಲಿ ಕೇಂದ್ರದ ಮೋದಿ ಸರ್ಕಾರ (Central government) ಲಕ್ಷಾಂತರ ಕಂಪನಿಗಳನ್ನು ಸರ್ಕಾರಿ ದಾಖಲೆಗಳಿಂದ ತೆಗೆದುಹಾಕಿದೆ. ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಹಲವು ಕಂಪನಿಗಳು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದ ಹಿನ್ನೆಲೆಯಲ್ಲಿ ಅವುಗಳನ್ನು ಮುಚ್ಚಲಾಗಿದೆ. ರಾಜ್ಯಸಭೆ (rajyasabha) ಸದನದ ಕಲಾಪದಲ್ಲಿ ಸರ್ಕಾರ ಈ ಮಾಹಿತಿ ನೀಡಿದೆ.
3.96 ಲಕ್ಷ ಕಂಪನಿಗಳು ದಾಖಲೆಯಿಂದ ಹೊರಕ್ಕೆ :
ಕಂಪನಿಗಳ ಕಾಯಿದೆಯ (Company law) ಅಡಿಯಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿದ ಕಾರಣ, ರ ಕಳೆದ ಐದು ಹಣಕಾಸು ವರ್ಷಗಳಲ್ಲಿ 3.96 ಲಕ್ಷಕ್ಕೂ ಹೆಚ್ಚು ಕಂಪನಿಗಳನ್ನು ಸರ್ಕಾರಿ ದಾಖಲೆಗಳಿಂದ (Government records) ತೆಗೆದುಹಾಕಲಾಗಿದೆ. ಈ ಮಾಹಿತಿಯನ್ನು ಅಧಿಕೃತ ಅಂಕಿಅಂಶಗಳಲ್ಲಿ ನೀಡಲಾಗಿದೆ. ಕಂಪನಿಗಳ ಕಾಯಿದೆ, 2013 ಅನ್ನು ಜಾರಿಗೊಳಿಸಿದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಕಳೆದ ಹಣಕಾಸು ವರ್ಷದಲ್ಲಿ 12,892 ಕಂಪನಿಗಳನ್ನು ಸರ್ಕಾರಿ ದಾಖಲೆಗಳಿಂದ ತೆಗೆದುಹಾಕಿದೆ.
ಇದನ್ನೂ ಓದಿ : LPG Cylinder: ಅಡುಗೆ ಅನಿಲ ಸಿಲಿಂಡರ್ ತೂಕ ಕಡಿಮೆ ಮಾಡಲಿರುವ ಸರ್ಕಾರ
ಸದನದಲ್ಲಿ ಕೇಳಲಾದ ಪ್ರಶ್ನೆ :
ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ರಾವ್ ಇಂದರ್‌ಜಿತ್ ಸಿಂಗ್ (Inderjit Singh) ಅವರು ರಾಜ್ಯಸಭೆಯ (Rajyasabha Session) ಅಧಿವೇಶನದಲ್ಲಿ ಲಿಖಿತ ಉತ್ತರದಲ್ಲಿ ಈ ಡೇಟಾವನ್ನು ನೀಡಿದ್ದಾರೆ. ಕಳೆದ ಐದು ಹಣಕಾಸು ವರ್ಷಗಳಲ್ಲಿ ಒಟ್ಟು 3,96,585 ಕಂಪನಿಗಳನ್ನು ಕಂಪನಿಗಳ ರಿಜಿಸ್ಟ್ರಾರ್‌ನಿಂದ ತೆಗೆದುಹಾಕಲಾಗಿದೆ ಎಂದು ಈ ಅಂಕಿಅಂಶಗಳು ತೋರಿಸುತ್ತವೆ. 2017-18ನೇ ಸಾಲಿನಲ್ಲಿ 2,34,371 ಮತ್ತು 2018-19ನೇ ಸಾಲಿನಲ್ಲಿ 1,38,446 ಮತ್ತು 2016-17ನೇ ಸಾಲಿನಲ್ಲಿ 7,943 ಕಂಪನಿಗಳನ್ನು ರಿಜಿಸ್ಟರ್‌ನಿಂದ ತೆಗೆದುಹಾಕಲಾಗಿದೆ.
ರಾಜ್ಯ ಸಚಿವರು ನೀಡಿರುವ ಮಾಹಿತಿ :
ಅನುಸರಣೆಯ ಕೊರತೆಯಿಂದಾಗಿ ಅನೇಕ ಕಂಪನಿಗಳನ್ನು ಮುಚ್ಚಲಾಗಿದೆಯೇ ಎಂದು ಕೇಳಿದಾಗ, ಸಚಿವರು 'ಹೌದು' ಎಂದು ಉತ್ತರಿಸಿದ್ದಾರೆ. ಸಿಎಸ್‌ಆರ್ (CSR)ಚೌಕಟ್ಟು ಬಹಿರಂಗಪಡಿಸುವಿಕೆ ಆಧಾರಿತವಾಗಿದೆ ಮತ್ತು ಸಿಎಸ್‌ಆರ್ ಅಡಿಯಲ್ಲಿ ಒಳಗೊಂಡಿರುವ ಕಂಪನಿಗಳು ವಾರ್ಷಿಕ ಆಧಾರದ ಮೇಲೆ ಎಂಸಿಎ 21 ರಿಜಿಸ್ಟ್ರಿಯಲ್ಲಿ ಅಂತಹ ಚಟುವಟಿಕೆಗಳ ವಿವರಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಪ್ರತ್ಯೇಕ ಲಿಖಿತ ಉತ್ತರದಲ್ಲಿ ಸಚಿವ ರಾವ್ ಇಂದರ್‌ಜಿತ್ ಸಿಂಗ್, ತಿಳಿಸಿದ್ದಾರೆ.
ಇದನ್ನೂ ಓದಿ : Work From Home ಮಾಡುವವರಿಗೊಂದು ಸಂತಸದ ಸುದ್ದಿ! ಸರ್ಕಾರ ಶೀಘ್ರದಲ್ಲಿಯೇ ಜಾರಿಗೆ ತರಲಿದೆ ಈ ಕಾನೂನು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ