ನವದೆಹಲಿ: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಗುರುವಾರ ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯಲ್ಲಿ ಯಾವುದೇ ವಲಯವಾರು ಬೆಳವಣಿಗೆಯ ಪ್ರಸ್ತಾಪವಿಲ್ಲ ಮತ್ತು ಸರ್ಕಾರವೇ ಆರ್ಥಿಕತೆಯ ಬಗ್ಗೆ ನಿರಾಶಾವಾದಿಯಾಗಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

2018-19ರ ಆರ್ಥಿಕ ಸಮೀಕ್ಷೆಯ ಆವಿಷ್ಕಾರಗಳು ಸಕಾರಾತ್ಮಕ ಅಥವಾ ಉತ್ತೇಜನಕಾರಿಯಲ್ಲ ಎಂದ ಚಿದಂಬರಂ "ಆರ್ಥಿಕ ಸಮೀಕ್ಷೆಯ ಮೂಲಕ ಸರ್ಕಾರವು ಆರ್ಥಿಕತೆಯ ಬಗ್ಗೆ ನಿರಾಶಾವಾದಿಯಾಗಿದೆ ಎಂದು ನನಗೆ ತೋರುತ್ತದೆ" ಎಂದು ಹೇಳಿದರು. "ನಾನು 2019-20 ರ ಆರ್ಥಿಕ ಸಮೀಕ್ಷೆಯನ್ನು ನೋಡಿದೆ. 2019-20ರಲ್ಲಿ ಆರ್ಥಿಕತೆಯ ಬೆಳವಣಿಗೆಯು ಶೇಕಡಾ 7 ರಷ್ಟಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಇದರ ಬಗ್ಗೆ ನಿಖರವಾಗಿ ವಲಯವಾರು ಮಾಹಿತಿ ಇಲ್ಲವೆಂದು ಚಿದಂಬರಂ ಹೇಳಿದರು. 


2019-20ರ ದೃಷ್ಟಿಕೋನವನ್ನು ವಿವರಿಸುವ ಮಾಹಿತಿ ಸಂಪುಟ -2, ಅಧ್ಯಾಯ 02 ರಲ್ಲಿ ಕಾಣಬಹುದು ಎಂದ ಚಿದಂಬರಂ, ಆರ್ಥಿಕ ಸಮೀಕ್ಷೆಗಳ ಅಂಶಗಳನ್ನು ಪ್ರಸ್ತಾಪಿಸುತ್ತಾ  (1) ನಿಧಾನಗತಿಯ ಬೆಳವಣಿಗೆ, (2) ಆದಾಯದ ಕೊರತೆ, (3) ಹಣಕಾಸಿನ ಕೊರತೆಯ ಗುರಿಯನ್ನು ರಾಜಿ ಮಾಡಿಕೊಳ್ಳದೆ ಸಂಪನ್ಮೂಲಗಳನ್ನು ಹುಡುಕುವುದು (4) ಚಾಲ್ತಿ ಖಾತೆಯ ಮೇಲೆ ತೈಲ ಬೆಲೆಗಳ ಪ್ರಭಾವ (5) ಹದಿನೈದನೇ ಹಣಕಾಸು ಶಿಫಾರಸುಗಳು ಇವುಗಳಲ್ಲಿ ಯಾವುದೂ ಸಕಾರಾತ್ಮಕ ಅಥವಾ ಉತ್ತೇಜನಕಾರಿಯಲ್ಲ "ಎಂದು ಅವರು ಹೇಳಿದರು.