ನೀವು ವಿವಾಹಿತರಾಗಿದ್ರೆ ಈ ಸುದ್ದಿ ನಿಮಗೆ ತುಂಬಾ ಖುಷಿ ನೀಡುತ್ತದೆ. ಮದುವೆಯಾದ ಮಹಿಳೆಯರಿಗೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡುತ್ತಿದೆ. ವಿವಾಹಿತ ದಂಪತಿಗಳಿಗೆ ಕೇಂದ್ರ ಸರ್ಕಾರದಿಂದ 72,000 ರೂಪಾಯಿಗಳ ಆರ್ಥಿಕ ನೆರವನ್ನು ನೀಡುವ ಯೋಜನೆ ತರಲಾಗಿದೆ. ಈ ಹಣ ಪಡೆಯಲು ಎಲ್ಲಾ ವಿವಾಹಿತ ದಂಪತಿಗಳು ತಿಂಗಳಿಗೆ 200 ರೂ. ಠೇವಣಿ ಇಡಬೇಕಾಗುತ್ತೆ. ಮಹಿಳೆಯರನ್ನ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಈ ಕೊಡುಗೆ ನೀಡಿದೆ. ಈ ಯೋಜನೆಯಲ್ಲಿ ನೀವು ಸಹ ನೋಂದಾಯಿಸಿಕೊಳ್ಳಲು ಬ್ಯಾಂಕ್ ಖಾತೆ ಅಥವಾ ಜನ್ ಧನ್ ಖಾತೆ, ಆಧಾರ್ ಕಾರ್ಡ್ ಇದ್ದರೆ ಸಾಕು. ಕೆಲವೇ ಕೆಲವು ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ಮಹಿಳೆಯ ವಯಸ್ಸು 30 ವರ್ಷವಾಗಿದ್ರೆ, ಅವ್ರು ಈ ಯೋಜನೆಯಲ್ಲಿ ತಿಂಗಳಿಗೆ 100 ರೂಪಾಯಿ ಹೂಡಿಕೆ ಮಾಡಿದರೆ ಸಾಕು ಲಾಭ ಪಡೆಯಬಹುದು. ಅಂದರೆ ಒಂದು ವರ್ಷದಲ್ಲಿ 1200 ರೂಪಾಯಿ ಠೇವಣಿ ಮಾಡಬೇಕಾಗುತ್ತದೆ. ಈ ರೀತಿಯಾಗಿ, 60ನೇ ವಯಸ್ಸಿಗೆ, ನಿಮ್ಮ ಒಟ್ಟು ಮೊತ್ತ 36 ಸಾವಿರ ರೂಪಾಯಿಗಳನ್ನಹೂಡಿಕೆ ಮಾಡಿರುತ್ತೀರಿ. ಇದರ ಆಧಾರದ ಮೇಲೆ, ನೀವು ಪ್ರತಿ ತಿಂಗಳು 3000 ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತೀರಿ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Google Map : ಗೂಗಲ್ ಮ್ಯಾಪ್ ಅನುಸರಿಸುತ್ತ ಹೋಗಿ ಕಾಲುವೆಗೆ ಬಿದ್ದ ಕಾರು


ಈ ರೀತಿ ಹೂಡಿಕೆ ಮಾಡುವಾಗ ಠೇವಣಿಯಿಟ್ಟವರು ಮರಣ ಹೊಂದಿದರೆ, ನಾಮಿನಿಯಲ್ಲಿರವ ಸಂಗಾತಿಗೆ ಪ್ರತಿ ತಿಂಗಳು 3000 ಪಿಂಚಣಿಯಲ್ಲು ಅರ್ಧದಷ್ಟು ಅಂದ್ರೆ 1500 ರೂಪಾಯಿ ಯನ್ನು ಸರ್ಕಾರದಿಂದ ನೀಡಲಾಗುತ್ತೆ. ಪತಿ-ಪತ್ನಿ ಇಬ್ಬರೂ ಇದರ ಭಾಗವಾದರೆ ಇಬ್ಬರಿಗೂ ತಿಂಗಳಿಗೆ ಒಟ್ಟು 6,000 ರೂಪಾಯಿ ಪಿಂಚಣಿ ದೊರೆಯುತ್ತದೆ. ಇದರರ್ಥ ಗಂಡ ಹೆಂಡತಿ ಇಬ್ಬರೂ ಸೇರಿ ವರ್ಷಕ್ಕೆ 72,000 ರೂ. ಪಡೆಯಬಹುದು.


ಪ್ರತಿಯೊಬ್ಬರಿಗೂ ಭವಿಷ್ಯದ ಬಗ್ಗೆ ಕಾಳಜಿ ಇದೇ ಇರುತ್ತದೆ. ಹೀಗಾಗಿ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಕೇಂದ್ರ ಸರ್ಕಾರದ ಈ ಯೋಜನೆ ಹೇಳಿ ಮಾಡಿಸಿದಂತಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ನೀವು ಸಿದ್ಧರಿದ್ದರೆ, ಈ ಯೋಜನೆಯ ಲಾಭ ಪಡೆಯಲು, ನಿಮ್ಮ ವಯಸ್ಸು 18 ರಿಂದ 40 ವರ್ಷದೊಳಗಿರಬೇಕು. ನಿವೃತ್ತಿಯ ನಂತರ ಅಂದರೆ 60 ವರ್ಷದ ಮೇಲೆ ಎಲ್ಲಾ ಹೂಡಿಕೆದಾರರಿಗೆ ಪಿಂಚಣಿ ಮೊತ್ತ ದೊರೆಯಲು ಶುರುವಾಗತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆಯ ಮೂಲಕ, ಎಲ್ಲಾ ನಾಗರಿಕರು ನಿವೃತ್ತಿಯ ಬಳಿಕ ಸ್ವಾವಲಂಬಿಗಳಾಗುತ್ತಾರೆ.


ಇದನ್ನೂ ಓದಿ : ವಾಷಿಂಗ್‌ ಮಷಿನ್, ರೆಫ್ರಿಜರೇಟರ್‌, ಡಿಶ್‌ವಾಶರ್‌ ಮೇಲೆ ಭರ್ಜರಿ 60% ವರೆಗೆ ರಿಯಾಯಿತಿ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.