ನವದೆಹಲಿ: ಬಿಜೆಪಿ ಸಂಸದ ಉದಯ ಪ್ರತಾಪ್ ಸಿಂಗ್ ಗುರುವಾರಂದು ಕೇಂದ್ರ ಸರ್ಕಾರವು ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ ಹಾಗೆ ಚೀನಾ ದೇಶದ ರೀತಿಯಲ್ಲಿ ಕಾನೂನು ಜಾರಿಗೆ ತರಬೇಕು ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಮಧ್ಯಪ್ರದೇಶ ಹೋಷಂಗಾಬಾದ್ ಜಿಲ್ಲೆಯನ್ನು ಪ್ರತಿನಿಧಿಸುವ ಉದಯ ಪ್ರತಾಪ್ ಸಿಂಗ್ ಸದನದಲ್ಲಿ ಮಾತನಾಡುತ್ತಾ "ಚೀನಾ 1979 ರಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ಒಂದೇ ಮಗು ಕಾನೂನನ್ನು ಜಾರಿಗೆಗೊಳಿಸಿತ್ತು. ಈಗ ಭಾರತವು ಕೂಡ ಅದೇ ರೀತಿಯ ಕಾನೂನನ್ನು ಜಾರಿಗೆ ತಂದು ಪ್ರತಿ ಕುಟುಂಬವು ಕೇವಲ ಇಬ್ಬರು ಮಕ್ಕಳನ್ನು ಹೊಂದುವ ಅವಕಾಶವನ್ನು ನೀಡಬೇಕು" ಎಂದು ತಿಳಿಸಿದರು.


ಶೂನ್ಯವೇಳೆಯಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಿದ ಸಂಸದ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಭಾರತದಲ್ಲಿ ಉದ್ಯೋಗ ವಲಯದಲ್ಲಿ ಸಾಕಷ್ಟು ಸಮಸ್ಯೆಯನ್ನು ಸೃಷ್ಟಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. ಜಿಎಸ್ಟಿಯನ್ನು ಜಾರಿಗೆ ತಂದಂತಹ ಸರ್ಕಾರವು ಇಂತಹ ಕಾನೂನನ್ನು ತರಬಹುದು ಮತ್ತು ಅದನ್ನು ಜಾರಿಗೊಳಿಸಬಹುದು ಎಂದು ಅವರು ತಿಳಿಸಿದರು.