7th Pay Commission: ಕೇಂದ್ರ ನೌಕರರಿಗೆ ಶೀಘ್ರದಲ್ಲೇ ಸಿಗಲಿದೆ DA ಹಣ; ಖಾತೆಗೆ ಜಮಾ ಆಗಲಿದೆ ಅರಿಯರ್ಸ್!
ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತಮ್ಮ ಭತ್ಯೆಯ ಹೆಚ್ಚಳ ಘೋಷಣೆಗಾಗಿ ಕಾಯುತ್ತಿದ್ದಾರೆ
ನವದೆಹಲಿ: ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತಮ್ಮ ಭತ್ಯೆಯ ಹೆಚ್ಚಳ ಘೋಷಣೆಗಾಗಿ ಕಾಯುತ್ತಿದ್ದಾರೆ, ಇದರಿಂದ ಅವರ ಸಂಬಳ ಕೂಡ ಹೆಚ್ಚಳವಾಗಲಿದೆ. ಕೆಲವು ವಾರಗಳ ಹಿಂದೆ, ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳ ಸಂಬಳ ಹೆಚ್ಚಿಸಲು ಯೋಚಿಸುತ್ತಿದೆ ಎಂದು ಹೇಳಲಾಗಿತ್ತು, ಇದನ್ನು ಹೋಳಿಯ ಮೊದಲು ಘೋಷಿಸಬೇಕಿತ್ತು, ಆದರೆ ಮೋದಿ ಸರ್ಕಾರ ಅಂತಹ ಯಾವುದೇ ಘೋಷಣೆ ಮಾಡಿಲ್ಲ.
ಇದನ್ನೂ ಓದಿ : ಎಫ್‌ಬಿಐನಿಂದ ಅಮೆರಿಕದ ನಟ ಜಾಕ್ ಅವೆರಿ ಬಂಧನ
DA ಹೆಚ್ಚಳಕ್ಕಾಗಿ ಕಾಯುತ್ತಿರುವ ನೌಕರರು: ಸಾಂಕ್ರಾಮಿಕ ರೋಗ ಕರೋನಾ(Coronavirus)ದಿಂದಾಗಿ ಕೇಂದ್ರ ನೌಕರರ ಮೂರು ಕಂತುಗಳ DA ಮತ್ತು ಪಿಂಚಣಿದಾರರ DR 2020 ರ ಜನವರಿ 1, ಜುಲೈ 1, 2020 ಮತ್ತು ಜನವರಿ 1, 2021 ರ ಸ್ಥಗಿತಗೊಂಡಿತು. DA ಯನ್ನ ಶೇಕಡಾ 4 ರಷ್ಟು ಹೆಚ್ಚಿಸಲು ಮೋದಿ ಸರ್ಕಾರ ನಿರ್ಧರಿಸಿದರೆ, ಅದು DA ಶೇಕಡಾ 28 ಆಗುತ್ತದೆ. ಪ್ರಸ್ತುತ, ನೌಕರರು ಶೇಕಡಾ 17 DA ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಎಪ್ರಿಲ್ 15 ರ ವರೆಗೆ ಈ ರಾಜ್ಯದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಸ್ಥಗಿತ
ಜನವರಿಯಿಂದ ಜೂನ್‌ವರೆಗಿನ DA ಹೆಚ್ಚಾಗುತ್ತಾ? ಕೇಂದ್ರ ನೌಕರ(Central Govt Employees)ರ DA ಶೇ.೪ ರಷ್ಟು ಹೆಚ್ಚಾದರೆ, ಅವರ ಸಂಬಳ ಗಮನಾರ್ಹವಾಗಿ ಹೆಚ್ಚಾಗುತ್ತದೆ. DA ಜನವರಿಯಿಂದ ಜೂನ್ 2021 ರವರೆಗೆ ಹೆಚ್ಚಳವಾಗುತ್ತದೆ. ಅಂದರೆ ಕೇಂದ್ರ ನೌಕರರಿಗೆ ಅರಿಯರ್ಸ್ ಕೂಡ ಸಿಗುತ್ತದೆ ಎಂದು ಮೂಲಗಳು ತಿಳಿಸಿವೆ.DA, HRA, TA, ವೈದ್ಯಕೀಯ ಭತ್ಯೆ ಹೆಚ್ಚಳಕ್ಕೆ DA ನೇರವಾಗಿ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : Best Prepaid Plan: 100 ರೂ.ಗಿಂತ ಕಡಿಮೆ ಬೆಲೆಗೆ Airtel, Jio, Vi ರೀಚಾರ್ಜ್ ಕೂಪನ್ಸ್
DA ಜುಲೈನಲ್ಲಿ ಬಿಡುಗಡೆಯಾಗುವುದೇ? ಕೇಂದ್ರ ರಾಜ್ಯ ಹಣಕಾಸು ಸಚಿವ ಅನುರಾಗ್ ಠಾಕೂರ್(Anurag Thakur) ಕೆಲವು ದಿನಗಳ ಹಿಂದೆ, ನೌಕರರ ಬಾಕಿ ಇರುವ ಮೂರು ಕಂತುಗಳ ಅರಿಯರ್ಸ್ ಸರ್ಕಾರವು ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಬಹುದು. 2021 ರ ಜುಲೈ 1 ರಂದು ಬಿಡುಗಡೆಯಾಗಲಿರುವ DA ಜೊತೆಗೆ, ಕಳೆದ ವರ್ಷದ ಬಾಕಿ ಇರುವ ಎರಡು ಕಂತುಗಳನ್ನು ಸಹ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಸರ್ಕಾರದ ಈ ನಡೆಯಿಂದ ಸರ್ಕಾರಿ ನೌಕರರಿಗೆ ಬಹಳ ದೊಡ್ಡ ಪರಿಹಾರ ನೀಡಿದಂತಾಗುತ್ತದೆ. ಈ ಮೂರು ಕಂತುಗಳನ್ನು ಏಳನೇ ವೇತನ ಆಯೋಗದಡಿ ಹೊಸ ದರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಹಣಕಾಸು ಸಚಿವರು ಘೋಷಿಸಿದ್ದರು.
ಇದನ್ನೂ ಓದಿ : Coronavirus: 24 ಗಂಟೆಯಲ್ಲಿ 1.26 ಲಕ್ಷ ಪ್ರಕರಣ ವರದಿ, 685 ಮಂದಿ ಸಾವು
ನೌಕರರ ಕುಟುಂಬ ಪಿಂಚಣಿ ಹೆಚ್ಚಳ: ಕೆಲವು ದಿನಗಳ ಹಿಂದೆ, ಪಿಂಚಣಿದಾರರಿಗೆ ಕುಟುಂಬ ಪಿಂಚಣಿ(Pension)ಯ ಗರಿಷ್ಠ ಮಿತಿಯನ್ನು ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಕೇಂದ್ರ ಸರ್ಕಾರವು ಕುಟುಂಬ ಪಿಂಚಣಿಯ ಗರಿಷ್ಠ ಮಿತಿಯನ್ನು ಸುಮಾರು ಎರಡೂವರೆ ಪಟ್ಟು ಹೆಚ್ಚಿಸಿದೆ. ಇಲ್ಲಿಯವರೆಗೆ ಕುಟುಂಬ ಪಿಂಚಣಿಯ ಗರಿಷ್ಠ ಮಿತಿ ತಿಂಗಳಿಗೆ 45,000 ರೂ. ಈಗ ಇದನ್ನು ತಿಂಗಳಿಗೆ 1.25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ : Corona Vaccine : ಕರೋನ ಲಸಿಕೆಯ ಎರಡನೇ ಡೋಸ್ ಪಡೆದ ಪ್ರಧಾನಿ ಮೋದಿ
PF ಕೂಡ ಹೆಚ್ಚಾಗುತ್ತದೆ: DA ಹೆಚ್ಚಳದ ನಂತರ, ಕೇಂದ್ರ ನೌಕರರ ಭವಿಷ್ಯ ನಿಧಿ (PF) ಕೂಡ ಹೆಚ್ಚಾಗುತ್ತದೆ. ಕೇಂದ್ರ ನೌಕರರ ಪಿಎಫ್ ಕೊಡುಗೆಯ ಲೆಕ್ಕಾಚಾರವನ್ನು ಮೂಲ ವೇತನ ಮತ್ತು ಡಿಎ ಸೂತ್ರದಿಂದ ಮಾಡಲಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.ತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.