ಪ್ರಾಣಿಗಳಿಗೂ ಬಂತು ಲಸಿಕೆ: ನಿಮ್ಮ ಮನೆ ಜೀವಿಗಳನ್ನೂ ಕೊರೊನಾದಿಂದ ಕಾಪಾಡಿ
ಲಸಿಕೆಯು ಕೋವಿಡ್ ಡೆಲ್ಟಾ ಪ್ರತಿಜನಕವನ್ನು ಹೊಂದಿದ್ದು, ಅಲ್ಹೈಡ್ರೋಜೆಲ್ ಸಹಾಯಕವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಈ ಲಸಿಕೆಯನ್ನು ನಾಯಿ, ಸಿಂಹ, ಚಿರತೆ, ಇಲಿ ಮತ್ತು ಮೊಲಗಳಿಗೆ ನೀಡಬಹುದಾಗಿದೆ. ಇದು ವಿಶೇಷವಾದ ನ್ಯೂಕ್ಲಿಯೊಕ್ಯಾಪ್ಸಿಡ್ ಪ್ರೋಟೀನ್ ಆಧಾರಿತ ಪರೋಕ್ಷ ELISA ಕಿಟ್ ಆಗಿದೆ. ಈ ಕಿಟ್ ಅನ್ನು ಭಾರತದಲ್ಲಿ ತಯಾರಿಸಲಾಗಿದ್ದು, ಇದಕ್ಕಾಗಿ ಪೇಟೆಂಟ್ ಸಲ್ಲಿಸಲಾಗಿದೆ.
ಮನುಷ್ಯರ ಬಳಿಕ ಪ್ರಾಣಿಗಳಿಗೂ ಸಹ ಇದೀಗ ಕೊರೊನಾ ಲಸಿಕೆಯನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪ್ರಾಣಿಗಳಿಗಾಗಿ ಅಭಿವೃದ್ಧಿಪಡಿಸಿದ ದೇಶದ ಮೊದಲ ಕೋವಿಡ್ ಲಸಿಕೆ 'ಅನೋಕೊವಾಕ್ಸ್' ಅನ್ನು ಗುರುವಾರ ಬಿಡುಗಡೆ ಮಾಡಿದ್ದಾರೆ. ಈ ಲಸಿಕೆಯನ್ನು ಹರಿಯಾಣ ಮೂಲದ ಐಸಿಎಆರ್-ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಎಕ್ವಿನ್ಸ್ (ಎನ್‌ಆರ್‌ಸಿ) ಅಭಿವೃದ್ಧಿಪಡಿಸಿದೆ.
ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಿಗಳ ಮೇಲೆ ಪರಿಣಾಮ ಬೀರುವ ಅನೋಕೋವಾಕ್ಸ್, ಪ್ರಾಣಿಗಳಿಗೆ ಕೋವಿಡ್-19 ಲಸಿಕೆಯಾಗಿದೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಹೇಳಿಕೆಯಲ್ಲಿ ತಿಳಿಸಿದೆ. ಕೋವಿಡ್-19 ನ ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳ ವಿರುದ್ಧ ಹೋರಾಡಲು ಅನ್ಕೋವಾಕ್ಸ್ ಪರಿಣಾಮಕಾರಿ ಎಂದು ಹೇಳಲಾಗಿದೆ.
ಇದನ್ನೂ ಓದಿ: Davanagere: ಕೋಳಿ ಸಾಂಬಾರ್ ಮಾಡಿಲ್ಲ ಎಂದು ಪತ್ನಿ ಕೊಲೆ..!
ಲಸಿಕೆಯು ಕೋವಿಡ್ ಡೆಲ್ಟಾ ಪ್ರತಿಜನಕವನ್ನು ಹೊಂದಿದ್ದು, ಅಲ್ಹೈಡ್ರೋಜೆಲ್ ಸಹಾಯಕವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಈ ಲಸಿಕೆಯನ್ನು ನಾಯಿ, ಸಿಂಹ, ಚಿರತೆ, ಇಲಿ ಮತ್ತು ಮೊಲಗಳಿಗೆ ನೀಡಬಹುದಾಗಿದೆ. ಇದು ವಿಶೇಷವಾದ ನ್ಯೂಕ್ಲಿಯೊಕ್ಯಾಪ್ಸಿಡ್ ಪ್ರೋಟೀನ್ ಆಧಾರಿತ ಪರೋಕ್ಷ ELISA ಕಿಟ್ ಆಗಿದೆ. ಈ ಕಿಟ್ ಅನ್ನು ಭಾರತದಲ್ಲಿ ತಯಾರಿಸಲಾಗಿದ್ದು, ಇದಕ್ಕಾಗಿ ಪೇಟೆಂಟ್ ಸಲ್ಲಿಸಲಾಗಿದೆ.
ಇದನ್ನೂ ಓದಿ: Aadhaar Card: ಆಧಾರ್ ಕಾರ್ಡ್ ದುರ್ಬಳಕೆ ತಡೆಯಲು ಸಿಂಪಲ್ ಟಿಪ್ಸ್
ಕೃಷಿ ಸಚಿವ ನರೇಂದ್ರ ಸಿಂಧ್ ತೋಮರ್, ಐಸಿಎಆರ್-ಎನ್‌ಆರ್‌ಸಿ ಪ್ರಾಣಿಗಳಿಗೆ ಅಭಿವೃದ್ಧಿಪಡಿಸಿದ ಲಸಿಕೆ ಮತ್ತು ರೋಗನಿರ್ಣಯದ ಕಿಟ್ ಅನ್ನು ವರ್ಚ್ಯುವಲ್ ಮೂಲಕ ಬಿಡುಗಡೆ ಮಾಡಿದರು. ಆ ಬಳಿಕ ಮಾತನಾಡಿದ ಅವರು, 'ವಿಜ್ಞಾನಿಗಳ ದಣಿವರಿಯದ ಕೊಡುಗೆಯಿಂದಾಗಿ, ದೇಶವು ಆಮದು ಮಾಡಿಕೊಳ್ಳುವ ಬದಲು ತನ್ನದೇ ಆದ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಸ್ವಾವಲಂಬಿಯಾಗಿದೆ. ಇದು ನಿಜಕ್ಕೂ ದೊಡ್ಡ ಸಾಧನೆ. ICAR ಕೇಂದ್ರ ಕೃಷಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ದೇಶದ ಪ್ರಧಾನ ಕೃಷಿ ಸಂಶೋಧನಾ ಸಂಸ್ಥೆಯಾಗಿದೆ" ಎಂದು ಹೇಳಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.