ನವದೆಹಲಿ: ನೀವು ಸರ್ಕಾರಿ ಕೆಲಸವನ್ನು ಹುಡುಕುತ್ತಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಮತ್ತೊಮ್ಮೆ, ಕೇಂದ್ರೀಯ ರೈಲ್ವೇಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ರೈಲ್ವೆ ನೇಮಕಾತಿ ಇಲಾಖೆ ಖಾಲಿಯಿರುವ 2573 ಹುದ್ದೆಗಳ ಬಗ್ಗೆ ಪ್ರಕಟಣೆ ನೀಡಿದ್ದು, ಈ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಅರ್ಜಿ ಸಲ್ಲಿಸಲು ಜುಲೈ 25 ಕೊನೆ ದಿನವಾಗಿದೆ. ನೀವು ರೈಲ್ವೆಯ ಅಧಿಕೃತ ವೆಬ್ಸೈಟ್ ಮೂಲಕ ಈ ಪೋಸ್ಟ್ ಗಳಿಗೆ ಅರ್ಜಿ ಸಲ್ಲಿಸಬಹುದು.  


COMMERCIAL BREAK
SCROLL TO CONTINUE READING

ಎಲ್ಲಿ, ಎಷ್ಟು ಹುದ್ದೆಗಳು ಖಾಲಿ ಇವೆ?


ಮುಂಬೈ ಕ್ಲಸ್ಟರ್- 1799 ಪೋಸ್ಟ್ ಗಳು
ಭುಸಾವಲ್ ಕ್ಲಸ್ಟರ್- 421 ಪೋಸ್ಟ್ ಗಳು
ಪುಣೆ ಕ್ಲಸ್ಟರ್- 152 ಪೋಸ್ಟ್ ಗಳು
ನಾಗಪುರ್ ಕ್ಲಸ್ಟರ್- 107 ಪೋಸ್ಟ್ ಗಳು
ಸೋಲಾಪುರ ಕ್ಲಸ್ಟರ್- 94 ಪೋಸ್ಟ್ ಗಳು


ಟ್ರೇಡ್: ಫಿಟ್ಟರ್ / ಕಾರ್ಪೆಂಟರ್ / ಮೆಷಿನಿಸ್ಟ್ / ಮೆಕ್ಯಾನಿಕಲ್ ಡೀಸೆಲ್ / ಪೇಂಟರ್ / ವೆಲ್ಡರ್ / ಎಲೆಕ್ಟ್ರಿಸಿಟಿ / ಪ್ರೊಗ್ರಾಮಿಂಗ್ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಷನ್ / ಇನ್ಫರ್ಮೇಷನ್ ಟೆಕ್ನಾಲಜಿ / ಮೆಕ್ಯಾನಿಕಲ್ ಮೆಷಿನ್ ಟೂಲ್ ನಿರ್ವಹಣೆ / ಶೀಟ್ ಮೆಟಲ್ ವರ್ಕರ್ / ಟರ್ನರ್ / ಟೇಲರ್ / ಲ್ಯಾಬೊರೇಟರಿ ಅಸಿಸ್ಟೆಂಟ್


ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ-
ಸಮಾನ ವಿಭಾಗಗಳಲ್ಲಿ 50% ಅಂಕಗಳನ್ನು ಹೊಂದಿರುವ ಡಿಪ್ಲೋಮಾ + ರಾಷ್ಟ್ರೀಯ ವಾಣಿಜ್ಯ ಪ್ರಮಾಣಪತ್ರ


ವಯೋಮಿತಿ: 15-24 ವಯೋಮಿತಿವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನಿಯಮಾನುಸಾರ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಇರಲಿದೆ.


ಶುಲ್ಕ: ಸಾಮಾನ್ಯ, ಒಬಿಸಿ ವರ್ಗದವರಿಗೆ 100 ರೂಪಾಯಿ ಶುಲ್ಕ. ಉಳಿದವರಿಗೆ ಯಾವುದೇ ಶುಲ್ಕವಿಲ್ಲ. ಶುಲ್ಕವನ್ನು ಆನ್ಲೈನ್ ನಲ್ಲಿ ಪಾವತಿಸಬೇಕು.


ಅರ್ಜಿ ಸಲ್ಲಿಸುವುದು ಹೇಗೆ?
ವೆಬ್ಸೈಟ್ನ ಮುಖಪುಟವನ್ನು ಭೇಟಿ ಮಾಡಿ. ಆನ್ಲೈನ್ ಅಪ್ಲಿಕೇಶನ್ನ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಿ.