ಟ್ರೇಡ್ ಯೂನಿಯನ್ ಮುಷ್ಕರ: ಒಡಿಶಾದಲ್ಲಿ ಹಿಂಸಾತ್ಮಕ ರೂಪ ತಾಳಿದ ಪ್ರತಿಭಟನೆ
ಕಾರ್ಮಿಕ ಸಂಘಟನೆಗಳು ಟ್ರೇಡ್ ಯೂನಿಯನ್ ಆಕ್ಟ್ -1926 ರಲ್ಲಿ ಪ್ರಸ್ತಾವಿತ ತಿದ್ದುಪಡಿಗಳನ್ನು ವಿರೋಧಿಸಿವೆ.
ನವದೆಹಲಿ: ಕೇಂದ್ರ ಸರ್ಕಾರದ 'ಜನ ವಿರೋಧಿ' ನೀತಿ ಖಂಡಿಸಿ ರಾಷ್ಟ್ರವ್ಯಾಪಿ 48 ಗಂಟೆಗಳ ಬಂದ್ ಕೈಗೊಳ್ಳಲು ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಯ ವಿವಿಧ ಚಿತ್ರಗಳು ಹೊರಬರುತ್ತಿವೆ. ಹಲವೆಡೆ ಬಸ್ ಸೇವೆ ಅಡಚಣೆ ಉಂಟಾಗಿದೆ. ರೈಲುಗಳನ್ನು ತಡೆಹಿಡಿಯಲಾಗಿದೆ. ಏತನ್ಮಧ್ಯೆ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿನ ಅನೇಕ ಸ್ಥಳಗಳಲ್ಲಿ ಹಿಂಸಾತ್ಮಕ ವರದಿಗಳು ಹೊರಬಂದಿವೆ.
ಮೋಟಾರು ವಾಹನ ತಿದ್ದುಪಡಿ ಮಸೂದೆ -2017 ಹಿಂಪಡೆಯಲು, ಸಾರಿಗೆ ಉದ್ದಿಮೆಯನ್ನ ರಕ್ಷಿಸಲು ಮತ್ತು ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸಲು ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಎಲ್‍ಪಿಎಫ್ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳು ಇಂದು ಬಂದ್ಗೆ ಕರೆ ಕೊಟ್ಟಿವೆ.
ಕಾರ್ಮಿಕ ಸಂಘಗಳು ಟ್ರೇಡ್ ಯೂನಿಯನ್ ಆಕ್ಟ್ -1926 ರಲ್ಲಿ ಪ್ರಸ್ತಾವಿತ ತಿದ್ದುಪಡಿಗಳನ್ನು ವಿರೋಧಿಸಿವೆ. ಇಂದು ಬೆಳಿಗ್ಗೆಯಿಂದ ನಡೆಯುತ್ತಿರುವ ಈ ಮುಷ್ಕರವು ದೇಶದ ಹಲವು ರಾಜ್ಯಗಳಲ್ಲಿ ಪರಿಣಾಮ ಬೀರುತ್ತಿದೆ. ಒರಿಸ್ಸಾದ ಭುವನೇಶ್ವರದಲ್ಲಿ ರೈಲು ಒಕ್ಕೂಟಗಳ ಹಿಂಸಾತ್ಮಕ ಪ್ರತಿಭಟನೆ ನಡೆಯಿತು. ರಾಜಧಾನಿಯಲ್ಲಿನ ಅನೇಕ ಸ್ಥಳಗಳಲ್ಲಿ, ಪ್ರತಿಭಟನಾಕಾರರು ಕೋಲುಗಳೊಂದಿಗಿನ ರೈಲುಗಳನ್ನು ನಿಲ್ಲಿಸಿದರು ಮತ್ತು ಟೈರ್ ಅನ್ನು ಸುಟ್ಟು ಬಂದ್ ನಡೆಸುತ್ತಿದ್ದಾರೆ.
ಪಶ್ಚಿಮ ಬಂಗಾಳದ ಅಸನ್ಸೋಲ್ ನಲ್ಲಿ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಸಂದರ್ಭದಲ್ಲಿ ಸಿಪಿಎಂ ಮತ್ತು ಟಿಎಂಸಿ ಕಾರ್ಮಿಕರ ನಡುವಿನ ಘರ್ಷಣೆ ಉಂಟಾಗಿದೆ.
ದೇಶದ ವಾಣಿಜ್ಯ ನಗರಿ ಮುಂಬೈನಿಂದ ಇದೇ ರೀತಿಯ ಚಿತ್ರಗಳು ಕಾಣಿಸಿಕೊಂಡಿವೆ. ಅಲ್ಲಿ ಬೆಸ್ಟ್ ನ ಬಸ್ ಡಿಪೋದಲ್ಲಿ ಬಸ್ ಗಳು ನಿಂತಿದ್ದರೆ, ಮತ್ತೊಂದೆಡೆ ಜನರು ಬಸ್ ನಿಲ್ದಾಣಗಳಲ್ಲಿ ಕಾಯುತ್ತಿದ್ದಾರೆ.
ಅಸ್ಸಾಂನ ಗುವಾಹಾಟಿಯಿಂದ ಪ್ರದರ್ಶನದ ಫೋಟೋಗಳನ್ನು ಪ್ರದರ್ಶಿಸಲಾಗಿದ್ದು, ಟ್ರೇಡ್ ಯೂನಿಯನ್ ಕೆಲಸಗಾರರು ರೈಲು ತಡೆಹಿಡಿದು ಪ್ರತಿಭಟಿಸಿದರು.
ಪಶ್ಚಿಮ ಬಂಗಾಳದ ಹೌರಾದಲ್ಲಿ ಸಿಐಟಿಯುನ ಬ್ಯಾನರ್ನ ಹಿಡಿದು ರೈಲು ಒಕ್ಕೂಟಗಳು ರೈಲು ತಡೆಹಿಡಿದಿದ್ದಾರೆ.
ರಾಜಧಾನಿ ದೆಹಲಿಯ ಬೀದಿಗಳಲ್ಲಿ AICCTU ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ.
ಟ್ರೇಡ್ ಯೂನಿಯನ್ ಕಾರ್ಮಿಕರು ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ರೈಲು ತಡೆ ಹಿಡಿದು ಪ್ರತಿಭಟನೆ ನಡೆಸಿದರು.
10 ಪ್ರಮುಖ ಕಾರ್ಮಿಕ ಸಂಘಟನೆಗಳು ಈ ಬಂದ್ ಗೆ ಕರೆ ನೀಡಿವೆ. ಅದರಲ್ಲಿ ಇಂಟಕ್, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಎಲ್ಪಿಎಫ್, ಸೇವಾ ಪ್ರಮುಖ ಸಂಘಟನೆಗಳು ಇದರಲ್ಲಿ ಭಾಗವಹಿಸಲಿವೆ. ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮ್ರಜೀತ್ ಕೌರ್ ಪ್ರಕಾರ ಸುಮಾರು 10 ಕಾರ್ಮಿಕ ಸಂಘಟನೆಗಲು ಈ ಬಂದ್ ನಲ್ಲಿ ಭಾಗಿಯಾಗಲಿದ್ದು ಸುಮಾರು 20 ಕೋಟಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಸಂಘಟಿತ ಮತ್ತು ಅಸಂಘಟಿತ ವಲಯಗಳ ಕಾರ್ಮಿಕರು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.