ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ಒಂದು ತಿಂಗಳೊಳಗೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.


COMMERCIAL BREAK
SCROLL TO CONTINUE READING

ಅಖಿಲ ಭಾರತ ಆಧಾರದ ಮೇಲೆ ಪ್ರಿಯಾಂಕಾ ಅವರಿಗೆ ಸಿಆರ್‌ಪಿಎಫ್ ಕವರ್‌ನೊಂದಿಗೆ + ಡ್ + ಭದ್ರತೆಯನ್ನು ನಿಗದಿಪಡಿಸಲಾಗಿದೆ ಎಂದು ಗೃಹ ವ್ಯವಹಾರ ಸಚಿವಾಲಯ (ಎಂಎಚ್‌ಎ) ಜೂನ್ 30 ರಂದು ತಿಳಿಸಿದೆ. ಇದರ ಅಡಿಯಲ್ಲಿ ಸರ್ಕಾರಿ ವಸತಿ ಸೌಕರ್ಯಗಳನ್ನು ಹಂಚಿಕೊಳ್ಳಲು ಅಥವಾ ಉಳಿಸಿಕೊಳ್ಳಲು ಯಾವುದೇ ಅವಕಾಶವಿಲ್ಲ.  ಈಗ ಅವರು ಎಸ್‌ಪಿಜಿ ರಕ್ಷಣೆ ಅಡಿಯಲ್ಲಿ ಬರುವುದಿಲ್ಲ.


ಇದನ್ನೂ ಓದಿ: ಎಸ್‌ಪಿಜಿ ರಕ್ಷಣೆ ಹಿಂತೆಗೆದುಕೊಂಡಿರುವುದು ರಾಜಕೀಯ ನಿರ್ಧಾರದ ಭಾಗವಾಗಿದೆ-ಪ್ರಿಯಾಂಕಾ ಗಾಂಧಿ


Z + ಸೆಕ್ಯುರಿಟಿ ಕವರ್ ಹೊಂದಿರುವ ವ್ಯಕ್ತಿಗಳಿಗೆ ಸರ್ಕಾರಿ ವಸತಿ ಸೌಲಭ್ಯವಿಲ್ಲ. ಆದಾಗ್ಯೂ, ಎಂಎಚ್‌ಎ ಅವರ ಶಿಫಾರಸಿನ ಮೇರೆಗೆ ಭದ್ರತಾ ಗ್ರಹಿಕೆ ಮೌಲ್ಯಮಾಪನದ ಆಧಾರದ ಮೇಲೆ ವಸತಿಗಾಗಿ ಕ್ಯಾಬಿನೆಟ್ ಸಮಿತಿ (ಸಿಸಿಎ) ಮಾತ್ರ ವಿನಾಯಿತಿಗಳನ್ನು ನೀಡಬಹುದು. "ಈ ದೃಷ್ಟಿಯಿಂದ, ಅವರು ಇನ್ನು ಮುಂದೆ ಸರ್ಕಾರಿ ವಸತಿ ಸೌಕರ್ಯಗಳಿಗೆ ಅರ್ಹರಲ್ಲ ಮತ್ತು ಒಂದು ತಿಂಗಳೊಳಗೆ ಮನೆ ಖಾಲಿ ಮಾಡುವ ನಿರ್ದೇಶನದೊಂದಿಗೆ ಅವರ ಹಂಚಿಕೆಯನ್ನು 01.07.2020 ರಂದು ಎಸ್ಟೇಟ್ ನಿರ್ದೇಶನಾಲಯವು ರದ್ದುಗೊಳಿಸಿದೆ" ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.


ಇದನ್ನು ಓದಿ: ಕೆಲವರಿಗೆ ಮಾತ್ರ ಇಂತಹ ಧೈರ್ಯವಿರುತ್ತೆ: ರಾಹುಲ್ ನಿರ್ಧಾರಕ್ಕೆ ಪ್ರಿಯಾಂಕ ಮೆಚ್ಚುಗೆ


ದಾಖಲೆಗಳ ಪ್ರಕಾರ, ಅವರು ಜೂನ್ 30 ರ ವೇಳೆಗೆ 3,46,677 ರೂ. ಬಾಕಿಗಳನ್ನು ಉಳಿಸಿಕೊಂಡಿದ್ದಾರೆ, ಇದನ್ನು ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಪಾವತಿಸಬೇಕು ಎಂದು ಸೂಚಿಸಲಾಗಿದೆ.


ಎಸ್‌ಪಿಜಿ ಭದ್ರತಾ ನೆಲೆಯಲ್ಲಿ 1997 ರ ಫೆಬ್ರವರಿ 21 ರಂದು ಬಂಗಲೋ ಸಂಖ್ಯೆ 35, ಲೋಧಿ ಎಸ್ಟೇಟ್ ಅನ್ನು ಪ್ರಿಯಾಂಕಾ ಗಾಂಧಿ ಅವರಿಗೆನೀಡಲಾಯಿತು. ಡಿಸೆಂಬರ್ 7, 2000 ರಂದು ನಡೆದ ಸಿಸಿಎ ತನ್ನ ಸಭೆಯಲ್ಲಿ, ಭದ್ರತಾ ನೆಲೆಯಲ್ಲಿ ಸರ್ಕಾರಿ ವಸತಿ ಸೌಕರ್ಯಗಳ ಹಂಚಿಕೆಯ ಮಾರ್ಗಸೂಚಿಗಳನ್ನು ಪರಿಶೀಲಿಸಿತು ಮತ್ತು ಭವಿಷ್ಯದಲ್ಲಿ ಎಸ್‌ಪಿಜಿ ರಕ್ಷಕರಲ್ಲದೆ ಬೇರೆ ಯಾವುದೇ ಖಾಸಗಿ ವ್ಯಕ್ತಿಗೆ ಭದ್ರತಾ ನೆಲೆಯಲ್ಲಿ ಸರ್ಕಾರಿ ವಸತಿ ನೀಡಲಾಗುವುದಿಲ್ಲ ಎಂದು ನಿರ್ಧರಿಸಿತು.