ನವದೆಹಲಿ: ಬ್ಯಾಂಕ್ ಖಾತೆಗಳಿಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ಇದ್ದ ಗಡುವನ್ನು ಸರ್ಕಾರ ಅನಿರ್ಧಿಷ್ಟಾವಧಿಗೆ ವಿಸ್ತರಿಸಿದೆ. 


COMMERCIAL BREAK
SCROLL TO CONTINUE READING

ಕೇಂದ್ರ ಹಣಕಾಸು ಸಚಿವಾಲಯಕ್ಕೆ ಒಳಪಟ್ಟ ಕಂದಾಯ ಇಲಾಖೆ ನಿನ್ನೆ ಗಡುವು ವಿಸ್ತರಣೆ ಮಾಡಿ ಅಧಿಸೂಚನೆ ಹೊರಡಿಸಿದ್ದು, ಸದ್ಯದಲ್ಲೇ ಹೊಸ ದಿನಾಂಕವನ್ನು ಪ್ರಕಟಿಸುವುದಾಗಿ ತಿಳಿಸಿದೆ.


ಅಧಿಸೂಚನೆಯಲ್ಲಿ ಆಧಾರ್‌ ನಂಬರ್‌ ಮತ್ತು ಪಾನ್ ನಂಬರನ್ನು 2017ರ ಡಿಸೆಂಬರ್‌ 31ರ ಒಳಗೆ ಸಲ್ಲಿಸಿ ಎಂಬ ಪದಗಳನ್ನು ತೆಗೆದು ಆಧಾರ್‌ ನಂಬರ್‌, ಪ್ಯಾನ್‌ ಅಥವಾ ಫಾರ್ಮ್ ನಂಬರ್‌ 60ನ್ನು ಕೇಂದ್ರ ಸರ್ಕಾರವು ಸೂಚಿಸಲಿರುವ ದಿನಾಂಕದ ಒಳಗೆ ಸಲ್ಲಿಸಿ ಎಂಬ ಪದಗಳನ್ನು ಬಳಸಲಾಗಿದೆ.


ಈ ಹಿಂದೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ಡಿ.31 ಕಡೆಯ ದಿನ ಎಂದು ಸರ್ಕಾರ ಘೋಷಿಸಿತ್ತು. 


ಈ ಹಿಂದೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಬ್ಯಾಂಕ್ ಖಾತೆಗಳಿಗೆ ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ ಮಾಡಲು ಅಂತಿಮ ದಿನವನ್ನು ಮಾರ್ಚ್ 31 ರವರೆಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಗೆ ತಿಳಿಸಿತ್ತು.