Ajit Doval : NSA ಅಜಿತ್ ದೋವಲ್ ಭದ್ರತಾ ಲೋಪ : ಮೂವರು CISF ಕಮಾಂಡೋಗಳು ವಜಾ!
ಭದ್ರತಾ ವಿಭಾಗದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಅಧಿಕಾರಿಗಳು ಬುಧವಾರ ಈ ಮಾಹಿತಿ ನೀಡಿದ್ದಾರೆ.
Ajit Doval Security : ಈ ವರ್ಷದ ಆರಂಭದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರ ನಿವಾಸದಲ್ಲಿ ಭದ್ರತಾ ಲೋಪಕ್ಕೆ ಸಂಭಂದಿಸಿದಂತೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಮೂವರು ಕಮಾಂಡೋಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಭದ್ರತಾ ವಿಭಾಗದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಅಧಿಕಾರಿಗಳು ಬುಧವಾರ ಈ ಮಾಹಿತಿ ನೀಡಿದ್ದಾರೆ.
ಫೆಬ್ರವರಿ 16 ರಂದು ನಡೆದ ಘಟನೆ
ದೋವಲ್ ಅವರಿಗೆ ಕೇಂದ್ರದ ವಿಐಪಿ ಭದ್ರತಾ ಪಟ್ಟಿಯ ಅಡಿಯಲ್ಲಿ 'Z+' ವರ್ಗದ ಭದ್ರತೆಯನ್ನು ಹೊಂದಿದ್ದಾರೆ. ಅವರಿಗೆ ಸಿಐಎಸ್‌ಎಫ್‌ನ ವಿಶೇಷ ರಕ್ಷಣಾ ಗುಂಪು (ಎಸ್‌ಎಸ್‌ಜಿ) ಘಟಕದಿಂದ ಭದ್ರತೆ ಒದಗಿಸಲಾಗಿದೆ. ಈ ಭದ್ರತಾ ಲೋಪದ ಘಟನೆ ಫೆಬ್ರವರಿ 16 ರಂದು ಸಂಭವಿಸಿದೆ. ಸಿಐಎಸ್ಎಫ್ ನಡೆಸಿದ ತನಿಖೆಯಲ್ಲಿ ವಿವಿಧ ಆರೋಪಗಳ ಮೇಲೆ ಐವರು ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದಿದೆ. ಹೀಗಾಗಿ ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ ನಂತರ ದಂಡನಾತ್ಮಕ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ : BJP : ಬಿಜೆಪಿ ಚುನಾವಣಾ ಪ್ಲಾನ್ ಶುರು : ಪಕ್ಷದಲ್ಲಿ ಹೆಚ್ಚಿದ ಈ 6 ನಾಯಕರ ವರ್ಚಸ್ಸು!
ಎಸ್‌ಎಸ್‌ಜಿಯ ಮೂವರು ಕಮಾಂಡೋಗಳನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಭದ್ರತಾ ಘಟಕದ ಮುಖ್ಯಸ್ಥರಾಗಿರುವ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ (ಡಿಐಜಿ) ಮತ್ತು ಅವರ ಶ್ರೇಣಿಗಿಂತ ಕೆಳಗಿನ ಕಮಾಂಡೆಂಟ್ ಶ್ರೇಣಿಯ ಹಿರಿಯ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಜಾಗೊಂಡಿರುವ ಮೂವರು ಕಮಾಂಡೋಗಳು ಅಂದು ಅಜಿತ್ ದೋವಲ್ ನಿವಾಸದಲ್ಲಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಭದ್ರತೆಯನ್ನು ಉಲ್ಲಂಘಿಸಿದ ವ್ಯಕ್ತಿಯನ್ನು ದೋವಲ್ ಅವರ ನಿವಾಸದ ಹೊರಗೆ ಹಿಡಿದು ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ : Breaking News : ಬಿಜೆಪಿ ಸಂಸದೀಯ ಮಂಡಳಿಯನ್ನು ಘೋಷಿಸಿದ ನಡ್ಡಾ : ಸಚಿವ ಗಡ್ಕರಿ ಔಟ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.