ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚೀನಾವನ್ನು ಟೆಲಿಕಾಂ, ರೈಲ್ವೆ ಮತ್ತು ವಾಯುಯಾನ ಕ್ಷೇತ್ರಗಳಿಗೆ ಪ್ರವೇಶಿಸದಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ, ಆದರೆ ಗಾಲ್ವಾನ್ ಕಣಿವೆಯಲ್ಲಿ ತನ್ನ ಸೈನಿಕರೊಂದಿಗೆ ಹಿಂಸಾತ್ಮಕ ಮುಖಾಮುಖಿಯಾದ ನಂತರ ಬೀಜಿಂಗ್ ಜೊತೆ ವ್ಯವಹರಿಸುವಾಗ ನರೇಂದ್ರ ಮೋದಿ ಸರ್ಕಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತ-ಚೀನಾ ಬಿಕ್ಕಟ್ಟು: ಹಲವು ವಿಷಯಗಳಲ್ಲಿ ನಾವಿನ್ನೂ ಕತ್ತಲೆಯಲ್ಲಿದ್ದೇವೆ-ಸೋನಿಯಾ ಗಾಂಧಿ


ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜೀ, 'ಚೀನಾವನ್ನು ಟೆಲಿಕಾಂ, ರೈಲ್ವೆ ಮತ್ತು ವಾಯುಯಾನ ಕ್ಷೇತ್ರಗಳಿಗೆ ಪ್ರವೇಶಿಸಲು ಬಿಡಬೇಡಿ. ನಾವು ಕೆಲವು ಸಮಸ್ಯೆಗಳನ್ನು ಎದುರಿಸುತ್ತೇವೆ ಆದರೆ ಚೀನಿಯರಿಗೆ ದೇಶವನ್ನು ಪ್ರವೇಶಿಸಲು ನಾವು ಅನುಮತಿಸುವುದಿಲ್ಲ' ಎಂದು ಹೇಳಿದರು.


ನಮ್ಮ ಒಂದು ಇಂಚು ಭೂಮಿಯತ್ತ ಕಣ್ಣು ಕೂಡ ಹಾಯಿಸುವ ಹಾಗಿಲ್ಲ-  ಪ್ರಧಾನಿ ಮೋದಿ


'ಚೀನಾ ಪ್ರಜಾಪ್ರಭುತ್ವವಲ್ಲ. ಅವರದ್ದು  ಸರ್ವಾಧಿಕಾರ. ಅವರು ಭಾವಿಸಿದಂತೆ ಮಾಡಬಹುದು. ನಾವು ಮತ್ತೊಂದೆಡೆ ಒಟ್ಟಾಗಿ ಕೆಲಸ ಮಾಡಬೇಕು ಆಗ ಭಾರತ ಗೆಲ್ಲುತ್ತದೆ, ಚೀನಾ ಸೋಲುತ್ತದೆ. ಏಕತೆಯಿಂದ ಮಾತನಾಡಿ. ಏಕತೆಯಿಂದ ಯೋಚಿಸಿ. ಏಕತೆಯಿಂದ ಕೆಲಸ ಮಾಡಿ. ನಾವು ಸರ್ಕಾರದೊಂದಿಗೆ ದೃಢವಾಗಿ ಇರುತ್ತೇವೆ 'ಎಂದು ಪಹೇಳಿದ್ದಾರೆಂದು ಮೂಲಗಳು ಹೇಳಿವೆ.