ರಿಸರ್ವ್ ಬ್ಯಾಂಕಿನ 9 ಲಕ್ಷ ಕೋಟಿ ರೂ ನಿಯಂತ್ರಣಕ್ಕೆ ಕೇಂದ್ರದ ಯತ್ನ- ಚಿದಂಬರಂ ಆರೋಪ
ಆರ್ಬಿಐ ಬೋರ್ಡ್ ಸಭೆಗೂ ಮೊದಲು ಕೇಂದ್ರ ಸರ್ಕಾರವು ರಿಸರ್ವ್ ಬ್ಯಾಂಕಿನ 9 ಲಕ್ಷ ಕೋಟಿ ರೂಗಳನ್ನು ನಿಯಂತ್ರಿಸುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿ: ಆರ್ಬಿಐ ಬೋರ್ಡ್ ಸಭೆಗೂ ಮೊದಲು ಕೇಂದ್ರ ಸರ್ಕಾರವು ರಿಸರ್ವ್ ಬ್ಯಾಂಕಿನ 9 ಲಕ್ಷ ಕೋಟಿ ರೂಗಳನ್ನು ನಿಯಂತ್ರಿಸುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಸೋಮವಾರದಂದು ನಡೆಯಲಿರುವ ಆರ್ಬಿಐ ಮಂಡಳಿಯ ಸಭೆಯಲ್ಲಿ ಸರ್ಕಾರ ಮತ್ತು ಬ್ಯಾಂಕ್ ಮುಖಾಮುಖಿಯಾಗಲಿವೆ ಎಂದು ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಬ್ಯಾಂಕ್ ಣ ರಿಸರ್ವ್ ಹಣದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ.ಆದ್ದರಿಂದ ಬ್ಯಾಂಕ್ ಮತ್ತು ಸರ್ಕಾರದ ನಡುವಿರುವ ಭಿನ್ನಾಭಿಪ್ರಾಯಗಳು ಕೇವಲ ಧೂಮಪಟವಷ್ಟೇ ಎಂದು ಅವರು ತಿಳಿಸಿದ್ದಾರೆ.
ಜಗತ್ತಿನ ಯಾವ ಭಾಗದಲ್ಲಿಯೂ ಕೂಡ ರಿಸರ್ವ್ ಬ್ಯಾಂಕ್ ಬೋರ್ಡ್ ಮೂಲಕ ನಿರ್ವಹಿಸುವ ಕಂಪನಿಯಾಗಿಲ್ಲ. ಖಾಸಗಿ ಉದ್ಯಮಿಯು ಬ್ಯಾಂಕ್ ಗವರ್ನರ್ ಗೆ ಸಲಹೆ ನೀಡುವುದು ಒಂದು ರೀತಿಯ ಪ್ರೇರಿತ ಕಲ್ಪನೆ ಎನ್ನಬಹುದು ಎಂದು ಚಿದಂಬರ ಕಿಡಿಕಾರಿದ್ದಾರೆ. ಇನ್ನು ಮುಂದುವರೆದು ನವಂಬರ್ 19 ರಿಸರ್ವ್ ಬ್ಯಾಂಕ್ ನ ಸ್ವಾಯತ್ತತೆ ಮತ್ತು ಭಾರತದ ಅರ್ಥ ವ್ಯವಸ್ಥೆಯನ್ನು ಲೆಕ್ಕ ಹಾಕುವ ದಿನವಾಗಿರುತ್ತದೆ ಎಂದು ಅವರು ತಿಳಿಸಿದರು.
ಆರ್ಬಿಐ ಭಾರೀ ರೂ 9.59 ಲಕ್ಷ ಕೋಟಿ ಮೀಸಲು ಹೊಂದಿದೆ ಅದರಲ್ಲಿ ಸರ್ಕಾರವು ಆ ನಿಧಿಯ ಮೂರನೆಯ ಭಾಗವಾಗಲು ಬಯಸಿದೆ ಎಂದು ಚಿದಂಬರಂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ.