ನವದೆಹಲಿ: ಮುಂದಿನ 100 ರಿಂದ 125 ದಿನಗಳು ನಿರ್ಣಾಯಕವಾಗಿವೆ ಮತ್ತು COVID-19 ನಿಯಮಗಳನ್ನು ಅನುಸರಿಸುವಲ್ಲಿ ಸಡಿಲಿಕೆ ತೋರುವಂತಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಎಚ್ಚರಿಸಿದೆ.


COMMERCIAL BREAK
SCROLL TO CONTINUE READING

ನವದೆಹಲಿಯ ಪತ್ರಿಕಾಗೋಷ್ಠಿಯಲ್ಲಿ ನೀತಿ ಆಯೋಗದ (ಆರೋಗ್ಯ) ಸದಸ್ಯ ವಿ.ಕೆ.ಪೌಲ್ ಅವರು, COVID-19 ಸಾಂಕ್ರಾಮಿಕ ರೋಗದ ಎರಡನೇ  ಅಲೆಯು ಇನ್ನೂ ಮುಂದುವರಿಯುತ್ತಿದೆ ಮತ್ತು ಕೊರೊನಾವೈರಸ್ ಸೋಂಕಿನ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆ ಕಾಣುತ್ತಿರುವುದರಿಂದ ಅವರು ಆತಂಕ ವ್ಯಕ್ತಪಡಿಸಿದ್ದಾರೆ.


ಜಾಗತಿಕವಾಗಿ COVID-19 ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ನೀಡಿದ ಎಚ್ಚರಿಕೆ ಕುರಿತು ಮಾತನಾಡಿದ ಅವರು, ಭಾರತದ ನೆರೆಯ ರಾಷ್ಟ್ರಗಳೂ ಸಹ COVID-19 ಪ್ರಕರಣಗಳಲ್ಲಿ ಹೆಚ್ಚಳ ಕಂಡಿದೆ.


ಇದನ್ನೂ ಓದಿ: Coronavirus Latest Update: Corona ಮೂರನೇ ಅಲೆ , ಎರಡನೇ ಅಲೆಗಿಂತ ಹೆಚ್ಚು ವ್ಯಾಪಕವಾಗುವ ಸಾಧ್ಯತೆ, AIIMS ನಿರ್ದೇಶಕರ ಗಂಭೀರ ಎಚ್ಚರಿಕೆ


"ಡಬ್ಲ್ಯುಎಚ್‌ಒದ ಉತ್ತರ ಮತ್ತು ದಕ್ಷಿಣ ಅಮೆರಿಕಾದ ಪ್ರದೇಶಗಳನ್ನು ಬಿಟ್ಟು, ಇತರ ಎಲ್ಲ ಡಬ್ಲ್ಯುಎಚ್‌ಒ ಪ್ರದೇಶಗಳುಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಜಗತ್ತು ಮೂರನೇ  ಅಲೆಯತ್ತ ಸಾಗುತ್ತಿರುವುದು ಸತ್ಯ" ಎಂದು ಅವರು ಹೇಳಿದರು.ಇನ್ನೊಂದೆಡೆಗೆ ಪ್ರಧಾನಿ ನರೇಂದ್ರ ಮೋದಿಯವರು ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಮೂರನೇ ಅಲೆಯನ್ನು ತಡೆಯಲು ಯೋಜನೆಗಳು ಮತ್ತು ಕಾರ್ಯತಂತ್ರಗಳನ್ನು ರೂಪಿಸಲು ಸಮಿತಿಯನ್ನು ಕೇಳಿಕೊಂಡಿದ್ದಾರೆ.


COVID-19 ಸೋಂಕುಗಳ ಏರಿಕೆಯನ್ನು ಎದುರಿಸಲು ಏಕೈಕ ಮಾರ್ಗವೆಂದರೆ ಲಸಿಕೆಯನ್ನು ಹಾಕುವುದಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 41.10 ಕೋಟಿ ಕೋವಿಡ್ -19 ಲಸಿಕೆ ಪ್ರಮಾಣವನ್ನು ನೀಡಲಾಗಿದ್ದು, ಅವರೊಂದಿಗೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 2.51 ಕೋಟಿಗೂ ಹೆಚ್ಚು ಲಸಿಕೆಗಳು ಲಭ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.


ಇದನ್ನೂ ಓದಿ: Most Common Exercise Mistakes: ಪ್ರತಿದಿನ ವ್ಯಾಯಾಮ ಮಾಡುವಾಗ ಈ ರೀತಿಯ ತಪ್ಪುಗಳಾಗದಂತೆ ನಿಗಾವಹಿಸಿ


ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಮತ್ತು ಕೇರಳದ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದರು, ಕಳೆದ ವಾರ ಹೊಸ ಕೋವಿಡ್ ಪ್ರಕರಣಗಳಲ್ಲಿ ಶೇ 80 ರಷ್ಟು ಈ ರಾಜ್ಯಗಳಿಂದ ಬಂದಿದೆ ಎಂದು ಹೇಳಿದರು.


ಮೂರನೇ ಅಲೆಯನ್ನು ತಡೆಗಟ್ಟಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ರಾಜ್ಯಗಳನ್ನು ಒತ್ತಾಯಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.