ನವದೆಹಲಿ: ಎಸ್ಸಿ ಎಸ್ಟಿ ಸಮುದಾಯಗಳು ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಪಟ್ಟಿವೆ ಆದ್ದರಿಂದ ಶೇ 22.5 ಕ್ಕೆ ಬಡ್ತಿ ಹೆಚ್ಚಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಶುಕ್ರವಾರದಂದು ಸುಪ್ರಿಂಕೋರ್ಟ್ ಗೆ ತಿಳಿಸಿದರು. 


COMMERCIAL BREAK
SCROLL TO CONTINUE READING

ಶುಕ್ರವಾರಂದು ಬಡ್ತಿ ಮೀಸಲಾತಿ ವಿಚಾರವಾಗಿ ಸಂವಿಧಾನ ಪೀಠ ವಿಚಾರಣೆ ನಡೆಸಿತ್ತು. ಈ ವೇಳೆ ಸರ್ಕಾರ ಎಸ್ಸಿ ಎಸ್ಟಿ ಸಮುದಾಯಗಳಿಗೆ ಬಡ್ತಿ ಮಿಸಲಾತಿ ಕಡ್ಡಾಯ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿತು. ಈ ಹಿಂದೆ ಸುಪ್ರಿಂ ಕೋರ್ಟ್ 2006 ರ ತನ್ನ ತೀರ್ಪಿನಲ್ಲಿ ಸುಪ್ರಿಂ ಕೋರ್ಟ್ ಬಡ್ತಿ ಮೀಸಲಾತಿ ವಿರೋಧವಾಗಿ ತೀರ್ಪನ್ನು ನೀಡಿತ್ತು. 


ಸಂವಿಧಾನ ಪೀಠದ ವಿಚಾರಣೆ ವೇಳೆ ಸರ್ಕಾರದ ನಿಲುವು ಸ್ಪಷ್ಟಪಡಿದ ಆಟಾರ್ನಿ ಜನರಲ್ ವೇಣುಗೋಪಾಲ್ ಆರ್ಥಿಕ ಹಿಂದುಳಿದಿರುವಿಕೆಯು ಎಸ್ಸ್ಸಿಎಸ್ಟಿ ಸಮುದಾಯಗಳಿಗೆ ಅನ್ವಯಿಸುವುದಿಲ್ಲ ಎಂದು ವಾಧಿಸಿದರು. ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ  ಸುಪ್ರಿಂ ಕೋರ್ಟ್ ಗುರುವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.


ಈಗ ಸರ್ಕಾರ ಬಡ್ತಿ ಮೀಸಲಾತಿ ಪರ ನಿಲ್ಲಲು ಪ್ರಮುಖ ಕಾರಣವೆಂದರೆ ಇತ್ತೀಚಿಗೆ ಹಲವು ಪ್ರಭಾವಿ ದಲಿತ ಸಂಘಟನೆಗಳು ಈ ವಿಚಾರವಾಗಿ ಸರ್ಕಾರದ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದವು. ಬಿಜೆಪಿಯ ಮೈತ್ರಿ ಪಕ್ಷದ ಲೋಕ ಜನ ಶಕ್ತಿ ಪಕ್ಷದ ನಾಯಕ ರಾಮವಿಲಾಸ್ ಪಾಸ್ವಾನ್ ಹಾಗೂ ಮತ್ತು ರಾಮ್ ದಾಸ್ ಅಟವಾಲೆ ಬಹಿರಂಗವಾಗಿ ಈ ವಿಚಾರವಾಗಿ ಮಾತನಾಡಿದ್ದರು. ಈ ಹಿನ್ನಲೆಯಲ್ಲಿ ಸರ್ಕಾರ ಈಗ ಈಗ ಒತ್ತಡಕ್ಕೆ ಮಣಿದು ಬಡ್ತಿ ಮೀಸಲಾತಿಯ ಪರ ಬ್ಯಾಟಿಂಗ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.