ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ಮುಂದಿನ ಯೋಜನೆಗಳೆಲ್ಲವೂ ಕೂಡ ದೇಶದ ರಕ್ಷಣೆಗಾಗಿ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಎನ್ಸಿಪಿಯ ಶರದ್ ಪವಾರ್ ಮತ್ತು ನ್ಯಾಷನಲ್ ಕನ್ಫೆರನ್ಸ್ ಫಾರೂಕ್ ಅಬ್ದುಲ್ಲಾ ಜೊತೆ ಮಾತುಕತೆ ನಡೆಸಿದ ನಂತರ ಮಾತನಾಡಿದ ಚಂದ್ರಬಾಬು ನಾಯ್ಡು "ನಾವು ದೆಹಲಿಯಲ್ಲಿ  ಮುಂದಿನ ದಿನಗಳಲ್ಲಿ ದೇಶದ ರಕ್ಷಣೆಗೆ ಯೋಜನೆ ರೂಪಿಸುವ ನಿಟ್ಟಿನಲ್ಲಿ ಸೇರುತ್ತಿದ್ದೇವೆ" ಎಂದು ತಿಳಿಸಿದರು.


ಮುಂಬರುವ ತೆಲಂಗಾಣದ ಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಮೈತ್ರಿ ವಿಚಾರವಾಗಿ ಕಾಂಗ್ರೆಸ್ ಸಹಿತ ಇತರ ರಾಷ್ಟ್ರೀಯ ಪಕ್ಷಗಳ ಜೊತೆ ಚಂದ್ರಬಾಬು ನಾಯ್ಡು  ಮಾತುಕತೆ ನಡೆಸಿದ್ದಾರೆ. ಕಳೆದ ಒಂದು ವಾರದಲ್ಲಿ ಎರಡನೇ ಬಾರಿಗೆ ದೆಹಲಿಗೆ ಆಗಮಿಸಿರುವ ನಾಯ್ಡು ಎಲ್ಲ ವಿರೋಧಪಕ್ಷಗಳನ್ನು ಸಾಮನ್ಯವೇದಿಕೆ ಅಡಿಯಲ್ಲಿ ತರುವ ಯತ್ನವನ್ನು ನಡೆಸಿದ್ದಾರೆ.


ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ತಾವು ಈಗ ಎಲ್ಲ ಪಕ್ಷಗಳನ್ನು ಒಂದುಗೂಡಿಸುತ್ತಿರುವುದಾಗಿ ನಾಯಡು ತಿಳಿಸಿದ್ದಾರೆ.