ನವದೆಹಲಿ: ಐಸಿಐಸಿಐ ಬ್ಯಾಂಕ್ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದಾ ಕೊಚಾರ್ ಮತ್ತು ವಿಡಿಯೊಕಾನ್ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್ ಅವರ ಮನೆಗಳು ಮತ್ತು ಕಚೇರಿಗಳನ್ನು ಐಸಿಐಸಿಐ ಬ್ಯಾಂಕ್ ಸಾಲ ಪ್ರಕರಣದ ವಿಚಾರವಾಗಿ ಇಂದು ಜಾರಿ ನಿರ್ದೇಶನಾಲಯ ಶೋಧ ನಡೆಸಿದೆ.


COMMERCIAL BREAK
SCROLL TO CONTINUE READING

ಕೇಂದ್ರೀಯ ತನಿಖಾ ದಳವು ಈಗಾಗಲೇ ಕೊಚಾರ್ ವಿರುದ್ಧ  ಪ್ರಕರಣ ದಾಖಲಿಸಿಕೊಂಡಿದ್ದು,  ಅವರ ಪತಿ ದೀಪಕ್ ಕೋಚಾರ್ ಮತ್ತು ಧೂತ್ ವಿರುದ್ಧದ ಪ್ರಕರಣಗಳನ್ನು ಪುನರುಜ್ಜೀವನಗೊಳಿಸಿದೆ. ತನಿಖಾ ಏಜೆನ್ಸಿಗಳ ವಿಚಾರಣೆ ಅಡಿಯಲ್ಲಿ ಅವರ ಚಲನೆ ಮೇಲೆ ನಿಗಾವಹಿಸಲು ವಿಮಾನ ನಿಲ್ದಾಣಗಳಂತಹ ಸಾರಿಗೆ ನೋಟಿಸ್ ಜಾರಿ ಮಾಡಿದೆ.


ಇದು ಐಸಿಐಸಿಐ ಬ್ಯಾಂಕಿನಿಂದ ವೀಡಿಯೊಕಾನ್ ಗೆ ಸಾಲ ನೀಡಿರುವ ಪ್ರಕರಣವಾಗಿದ್ದು. ಪ್ರಮುಖವಾಗಿ ಚಂದಾ ಕೊಚಾರ್ ಬ್ಯಾಂಕಿನ ಮುಖ್ಯಸ್ಥೆಯಾಗಿದ್ದಾಗ ಈ ಸಂಗತಿ ನಡೆದಿದ್ದು,ಇದರಲ್ಲಿ ಚಂದಾ ಕೊಚಾರ್ ಪತಿ ಮತ್ತು ವಿಡಿಯೋಕಾನ್ ನ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್  ಅವರ ನಡುವಿನ ವ್ಯವಹಾರವಿದೆ.ಈ ಹಿನ್ನಲೆಯಲ್ಲಿ ಈಗ ಈ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ