ನವದೆಹಲಿ: ವೀಡಿಯೋಕಾನ್ ಸಾಲದ ವಿಚಾರದಲ್ಲಿನ ಆಂತರಿಕ ತನಿಖೆ ಮುಗಿಯುವವರೆಗೂ ಚಂದಾ ಕೊಚ್ಚರ್ ರಜೆಯನ್ನು ಮತ್ತೆ ಮುಂದೂಡಲಾಗಿದೆ. 


COMMERCIAL BREAK
SCROLL TO CONTINUE READING

ಈ ಹಿನ್ನಲೆಯಲ್ಲಿ ಈಗ  ಸಂದೀಪ್ ಬಕ್ಷಿ  ಅವರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಿರುವುದಾಗಿ ಐಸಿಐಸಿಐ ಬ್ಯಾಂಕ್ ಸೋಮವಾರ ಪ್ರಕಟಿಸಿದೆ.


ಪ್ರಸ್ತುತ ಬಕ್ಷಿಯವರುಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ನ ಎಂ.ಡಿ. ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತ ಮತ್ತು ಸಾಂಸ್ಥಿಕ ಮಾನದಂಡಗಳ ಪಾಲಿಸುವ ನಿಟ್ಟಿನಲ್ಲಿ ಕೊಚ್ಚರ್ ಅವರು ಮೇ 30, 2018 ರಂದು  ವಿಚಾರಣೆಯ ಪೂರ್ಣಗೊಳ್ಳುವವರೆಗೆ ರಜೆ ತೆರಳಲು ನಿರ್ಧರಿಸಿದ್ದರು ಈಗ ಆ ರಜೆಯನ್ನು ಮತ್ತೆ ಮುಂದೂಡಲಾಗಿದೆ. 


ಕೊಚಾರ್ ಮತ್ತು ಅವರ ಕುಟುಂಬದ ಸದಸ್ಯರು ವೀಡಿಯೊಕಾನ್ ಗ್ರೂಪ್ ಗೆ ಸಾಲ ನೀಡಿರುವ ವಿಚಾರದಲ್ಲಿ ಆರೋಪವನ್ನು ಎದುರಿಸುತ್ತಿದ್ದಾರೆ. ಕಳೆದ ತಿಂಗಳು ಬ್ಯಾಂಕ್ ವಿಚಾರಣೆ ನಡೆಸಿದ ಬಳಿಕ ಕೋಚಾರ್ ವಿರುದ್ಧದ ಆರೋಪಗಳ ಬಗ್ಗೆ ಸ್ವತಂತ್ರ ವಿಚಾರಣೆ ನಡೆಸಲು ತಿರ್ಮಾನಿಸಿದೆ.


ಇದೇ ವೇಳೆ ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ಕಂಪೆನಿಯ ಎಂ.ಡಿ ಮತ್ತು ಸಿಇಒ ಆಗಿ ಎನ್ ಎಸ್ ಕಣ್ಣನ್ ಅವರನ್ನು ನೇಮಕ ಮಾಡಿದೆ.