Animal Fat Used In Laddu Prasadam: ತಿರುಪತಿ ತಿಮ್ಮಪ್ಪನ ದೇವಾವಲಾಯ ಎಂದರೆ ಅಲ್ಲಿನ ಲಡ್ಡು ಪ್ರಸಾದಕ್ಕೆ ವಿಶೇಷ ಮನ್ನಣೆ ಇದೆ. ದೇವಾಲಯಕ್ಕೆ ದರ್ಶನಕ್ಕೆ ತೆರಳಿದ ಭಕ್ತರು ಲಡ್ಡು ಪ್ರಸಾದ ಇಲ್ಲದೆ ಹಿಂದಿರುಗುವುದೇ ಇಲ್ಲ.ಆದರೆ ಇದೀಗ ಆ ಲಡ್ಡು ಪ್ರಸಾದದ ಬಗ್ಗೆಯೇ ಬಹು ದೊಡ್ಡ ಆರೋಪ ಕೇಳಿ ಬಂದಿದೆ.ಇದು ತಿರುಪತಿ ತಿಮ್ಮಪ್ಪನ ಭಕ್ತರ ಭಾವನೆಗೆ ಘಾಸಿಯುಂಟು ಮಾಡಿದೆ. ಹೌದು, ಇದೀಗ ತಿರುಮಲ ದೇವಾಲಯದ ಲಡ್ಡು ಪ್ರಸಾದದಲ್ಲಿ ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬಿ ಬಳಕೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.ಅಷ್ಟಕ್ಕೂ ಈ ಆರೋಪ ಮಾಡಿದ್ದು ಬೇರೆ ಯಾರೂ ಅಲ್ಲ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು. 


COMMERCIAL BREAK
SCROLL TO CONTINUE READING

ಹಿಂದಿನ ಸರ್ಕಾರದ ವಿರುದ್ಧ ಚಂದ್ರಬಾಬು ನಾಯ್ಡು ದೊಡ್ಡ ಆರೋಪ ಮಾಡಿದ್ದಾರೆ.ಜಗತ್ಪ್ರಸಿದ್ಧ ತಿರುಪತಿ ದೇಗುಲದಲ್ಲಿ ಲಡ್ಡು ತಯಾರಿಕೆಯಲ್ಲಿ ರಾಜ್ಯದ ಜಗನ್ ಮೋಹನ್ ಅವರ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿತ್ತು ಎಂದು ನಾಯ್ಡು ಆಪಾದಿಸಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ನಾಯ್ಡು,ತಿರುಮಲ ಲಡ್ಡು ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸುತ್ತಿದ್ದರು ಎಂದು ಆರೋಪಿಸಿದ್ದಾರೆ.  


ಇದನ್ನೂ ಓದಿ : ಮದ್ಯ ಪ್ರಿಯರಿಗೆ ಸರ್ಕಾರದಿಂದ ಗುಡ್‌ ನ್ಯೂಸ್‌! ಫುಲ್‌ ಕಮ್ಮಿಯಾಯ್ತು ಎಣ್ಣೆ ರೇಟ್... ಇನ್ಮುಂದೆ ನೀರು ಸಿಕ್ಕಂಗೆ ಸಿಗುತ್ತೆ ಕಾಸ್ಲಿ ಬಿಯರ್-ವಿಸ್ಕಿ


ಕಳೆದ 5 ವರ್ಷಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರು ತಿರುಮಲದ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ. 'ಅನ್ನದಾನ'ದ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿದ್ದರು. ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬನ್ನು ಬಳಸಿ ಪವಿತ್ರ ತಿರುಮಲ ಲಡ್ಡುವನ್ನು ಕಲುಷಿತಗೊಳಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಚಂದ್ರ ಬಾಬು ನಾಯ್ಡು ಈ ಹೇಳಿಕೆ ಇದೀಗ ಸಂಚಲನ ಮೂಡಿಸಿದೆ. 


ವೈಎಸ್‌ಆರ್‌ ಕಾಂಗ್ರೆಸ್‌ನ ಪ್ರತಿದಾಳಿ:
 ಚಂದ್ರ ಬಾಬು ನಾಯ್ಡು  ಮಾಡಿರುವ ಆರೋಪಕ್ಕೆ ವೈಎಸ್‌ಆರ್‌ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿ ತಿರುಗೇಟು ನೀಡಿದ್ದಾರೆ.  'ರಾಜಕೀಯ ಲಾಭಕ್ಕಾಗಿ ಚಂದ್ರಬಾಬು ನಾಯ್ಡು ಯಾವ ಮಟ್ಟಕ್ಕೆ ಹೋಗಬಹುದು ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.ಭಕ್ತರ ನಂಬಿಕೆಯನ್ನು ಬಲಪಡಿಸಲು, ನಾನು ನನ್ನ ಕುಟುಂಬದೊಂದಿಗೆ ತಿರುಮಲ 'ಪ್ರಸಾದ' ಕುರಿತು ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಚಂದ್ರಬಾಬು ನಾಯ್ಡು ತಮ್ಮ ಕುಟುಂಬದೊಂದಿಗೆ ಅದೇ ರೀತಿ ಮಾಡಲು ಸಿದ್ಧರಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. 


ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲಡ್ಡುಗೆ ತಿರುಪತಿಯಲ್ಲಿ ಬಹಳ ಬೇಡಿಕೆಯಿದೆ. ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತಿರುಮಲದಲ್ಲಿರುವ ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಭಕ್ತರು ಲಡ್ಡು ಪ್ರಸಾದ ತೆಗೆದುಕೊಳ್ಳುತ್ತಾರೆ. 


ಇದನ್ನೂ ಓದಿ : ಕಾಂಗ್ರೆಸ್ ಪ್ರಣಾಳಿಕೆ: ಬಡವರಿಗೆ ಡಬಲ್‌ ಬೆಡ್‌ರೂಂ ಮನೆ, ಉಚಿತ ವಿದ್ಯುತ್‌ & 25 ಲಕ್ಷದವರೆಗೆ ಉಚಿತ ಚಿಕಿತ್ಸೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.