ಶ್ರೀಹರಿಕೋಟ: ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ -2 ಉಡಾವಣೆಯನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಿದೆ. 


COMMERCIAL BREAK
SCROLL TO CONTINUE READING

ಆಂಧ್ರಪ್ರದೇಶದ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ  2:51 ಕ್ಕೆ ಚಂದ್ರಯಾನ -2 ಆರಂಭವಾಗಬೇಕಿತ್ತು. ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಚಂದ್ರಯನ -2 ಉಡಾವಣೆ ರದ್ದುಗೊಳಿಸಲಾಗಿದೆ.



ಇಸ್ರೋ ವತಿಯಿಂದ 2 ಗಂಟೆ 51 ನಿಮಿಷಕ್ಕೆ ಉಡಾವಣೆಗೆ ಸಮಯ ನಿಗದಿಗೊಳಿಸಲಾಗಿತ್ತು. ಉಡಾವಣೆಗೆ ಇನ್ನೂ  56 ನಿಮಿಷ 24 ಸೆಕೆಂಡ್ ಗಳು ಇರುವಾಗಲೇ ತಾಂತ್ರಿಕ ದೋಷದಿನ ಉಡಾವಣೆ ರದ್ದುಗೊಳಿಸಲಾಗಿದೆ ಎಂದು ಇಸ್ರೋ ಪ್ರಕಟಿಸಿತು. 


ಉಡಾವಣೆಯಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಚಂದ್ರಯಾನ -2 ಉಡಾವಣೆ ರದ್ದು ಮಾಡಲಾಗಿದೆ. ಶೀಘ್ರವೇ ಉಡಾವಣೆ ಸಮಯ ಘೋಷಣೆ ಮಾಡಲಾಗುವುದು ಎಂದು ಬಾಹ್ಯಾಕಾಶ ಕೇಂದ್ರದಲ್ಲಿ ಇಸ್ರೋ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.


44 ಮೀಟರ್ ಉದ್ದ ಮತ್ತು 640 ಟನ್ ಜಿಯೋ ಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್-ಮಾರ್ಕ್ III (ಜಿಎಸ್​ಎಲ್​ವಿ ಎಂಕೆ-3) ನಿಂದ ಚಂದ್ರಯಾನ್ -2 ಅನ್ನು ಉಡಾಯಿಸಬೇಕಿತ್ತು. ಭೂಮಿ ಮತ್ತು ಚಂದ್ರನ ನಡುವಿನ ಅಂತರ ಸುಮಾರು 3.844 ಕಿಲೋಮೀಟರ್.