ನವದೆಹಲಿ: ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಶನ್ (ಐಆರ್ಟಿಟಿಸಿ) ಇ-ಬುಕಿಂಗ್‌ ಮತ್ತು ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯದ ದೃಷ್ಟಿಯಿಂದ ರೈಲ್ವೆ ಇಲಾಖೆ ಈ ಬದಲಾವಣೆಗಳನ್ನು ಮಾಡಿದೆ. ಹೊಸ ನಿಯಮಗಳ ಪ್ರಕಾರ ಪ್ರಯಾಣಿಕರು 120 ದಿನಗಳ ಮುಂಚಿತವಾಗಿ ತಮ್ಮ ಪ್ರಯಾಣದ ಟಿಕೆಟ್ಗಳನ್ನು ಬುಕ್ ಮಾಡಬಹುದಾಗಿದೆ.


COMMERCIAL BREAK
SCROLL TO CONTINUE READING

ಆನ್ಲೈನ್ ಬುಕಿಂಗ್ನಲ್ಲಿ ಮಾಡಲಾದ ಬದಲಾವಣೆಗಳ ಅಡಿಯಲ್ಲಿ, ಒಂದು ಬಳಕೆದಾರ IDಯಿಂದ ಇದೀಗ ತಿಂಗಳಲ್ಲಿ ಆರು ಟಿಕೆಟ್ಗಳನ್ನು ಮಾತ್ರ ಬುಕ್ ಮಾಡಲು ಸಾಧ್ಯವಾಗುತ್ತದೆ. ಬಳಕೆದಾರನು ತನ್ನ ಆಧಾರ್ ಸಂಖ್ಯೆಯನ್ನು ಐಆರ್ಸಿಟಿಯೊಂದಿಗೆ ನೋಂದಾಯಿಸಿದ್ದರೆ, ಅವರು ತಿಂಗಳಿಗೆ 12 ಟಿಕೆಟ್ಗಳನ್ನು ಬುಕ್ ಮಾಡಬಹುದಾಗಿದೆ. ಬೆಳಿಗ್ಗೆ 8 ಮತ್ತು 10 ರ ನಡುವೆ ಕೇವಲ ಎರಡು ಟಿಕೆಟ್ಗಳನ್ನು ಮಾತ್ರ ಬುಕ್ ಮಾಡಬಹುದು. ಇದಲ್ಲದೆ, ಈ ಸಮಯದಲ್ಲಿ ಯಾವುದೇ ಸಿಂಗಲ್ ಪೇಜ್ ಅಥವಾ ತ್ವರಿತ ಬುಕಿಂಗ್ ಸಾಧ್ಯವಿಲ್ಲ.


ಒಂದು ಐಡಿಯಿಂದ ಆರು ಟಿಕೆಟ್
ಒಂದು ಬಳಕೆದಾರ ID ಅನ್ನು ಒಮ್ಮೆ ಒಂದೇ ಸ್ಥಳದಲ್ಲಿ ಮಾತ್ರ ಬಳಸಬಹುದು ಎಂಬುದು ಒಂದು ಬದಲಾವಣೆಯಾಗಿದೆ. ಈ ಹಿಂದೆ ಒಂದೇ ID ಯ ಮೂಲಕ ಒಂದೇ ಸಮಯದಲ್ಲಿ ಹಲವಾರು ಸ್ಥಳಗಳಲ್ಲಿ ಟಿಕೆಟ್ಗಳನ್ನು ಬುಕ್ ಮಾಡಲಾಗುತ್ತಿತ್ತು. ಆದರೆ ಇದೀಗ ಹಾಗೆ ಮಾಡಲು ಸಾಧ್ಯವಿಲ್ಲ. ಇದಲ್ಲದೆ, ಬಳಕೆದಾರರು ಆನ್ಲೈನ್ನಲ್ಲಿ ಬಂದಾಗ ಅವರು ವೈಯಕ್ತಿಕ ಮಾಹಿತಿಯನ್ನು ತುಂಬಬೇಕಾಗುತ್ತದೆ. ಬುಕಿಂಗ್ ಏಜೆಂಟ್ ಅವರು ಈಗ 8 ರಿಂದ 8.30 ರವರೆಗೆ ಬೆಳಗ್ಗೆ 10 ರಿಂದ 10.30 ರವರೆಗೆ ಮತ್ತು 11 ರಿಂದ 11.30 ರವರೆಗೆ ಟಿಕೆಟ್ಗಳನ್ನು ಬುಕ್ ಮಾಡಲು ಸಾಧ್ಯವಾಗುವ ವ್ಯವಸ್ಥೆ ಮಾಡಿದ್ದಾರೆ. ಅಂದರೆ, ಅವರು ಟಿಕೆಟ್ ಬುಕ್ ಮಾಡಲು ಕೇವಲ ಅರ್ಧ ಘಂಟೆಯ ಮಾತ್ರ ಸಮಯ ಪಡೆಯುತ್ತಾರೆ.


ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳಿಗೆ IRCTC ಕೆಲವು ಬದಲಾವಣೆಗಳನ್ನು ಮಾಡಿದೆ. ತತ್ಕಾಲ್ ಬುಕಿಂಗ್ ಪ್ರಾರಂಭವಾಗುವ ಮೊದಲು ಅರ್ಧ ಗಂಟೆಯವರೆಗೆ ಏಜೆಂಟರಿಗೆ ಬುಕಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಒಂದು ದಿನ ಮೊದಲು ತತ್ಕಾಲ್ ಬುಕಿಂಗ್ ಮಾಡಲು ಅವಕಾಶವಿದ್ದು, 10 ಗಂಟೆಯಿಂದ ಈ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಅಲ್ಲದ AC ಮೀಸಲಾತಿಗಾಗಿ 11 ಗಂಟೆಯಿಂದ ಬುಕಿಂಗ್ ಪ್ರಾರಂಭವಾಗುತ್ತದೆ. IRCTCಯಿಂದ ಪಡೆದ ಮಾಹಿತಿಯ ಪ್ರಕಾರ, ರೈಲು ನಿಗದಿತ ಸಮಯಕ್ಕಿಂತ ಮೂರು ಗಂಟೆಗಳಷ್ಟು ತಡವಾಗಿ ಬಂದರೆ ಪ್ರಯಾಣಿಕನು ಸಂಪೂರ್ಣ ಪಾವತಿಗೆ ಬೇಡಿಕೆ ಸಲ್ಲಿಸಬಹುದು. ಜೊತೆಗೆ ರೈಲು ಮಾರ್ಗವನ್ನು ಬದಲಿಸುವ ಮೂಲಕ, ಪ್ರಯಾಣಿಕರಿಗೆ ತಮ್ಮ ಹಣವನ್ನು ಹಿಂತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.


ಇದಲ್ಲದೆ, ತತ್ಕಾಲ್ ಬುಕಿಂಗ್ನಲ್ಲಿ ಪ್ರಯಾಣಿಕರಿಗೆ ಗೊತ್ತುಪಡಿಸಿದ ಕೋಚ್ ದೊರೆಯದಿದ್ದರೆ, ಆ ಸಂದರ್ಭದಲ್ಲಿ ಅವರ ಪೂರ್ಣ ಹಣವನ್ನು ಹಿಂತೆಗೆದುಕೊಳ್ಳುವ ಅಧಿಕಾರವೂ ಸಹ ಇದೆ.


ಆನ್ಲೈನ್ ಟಿಕೆಟ್ ಬುಕ್ ಮಾಡಲು ಬಳಕೆದಾರರಿಗೆ ನಿರ್ದಿಷ್ಟ ಸಮಯ ಸಿಗುತ್ತದೆ. ಪ್ರಯಾಣ ಮತ್ತು ಪ್ರಯಾಣಿಕರಿಗೆ 25 ಸೆಕೆಂಡುಗಳು. ಪಾವತಿ 10 ಸೆಕೆಂಡುಗಳೊಳಗೆ ಮಾಡಬೇಕು ಮತ್ತು ನೆಟ್ಬ್ಯಾಂಕಿಂಗ್ ಸಮಯದಲ್ಲಿ ಟಿಕೆಟ್ ಪಾವತಿಗಾಗಿ OTP ಕಡ್ಡಾಯವಾಗಿ ತುಂಬಬೇಕಾಗುತ್ತದೆ.


ಟಿಕೆಟ್ ಬುಕಿಂಗ್ನಲ್ಲಿ ಪಾರದರ್ಶಕತೆ ತರಲು ಈ ಬದಲಾವಣೆಗಳನ್ನು ತರಲಾಗಿದೆ ಎಂದು IRCTC ತಿಳಿಸಿದೆ.