BRO ಸಾಧನೆಗೆ ಗಡ್ಕರಿ ಮೆಚ್ಚುಗೆ: ಈಗ ಇನ್ನೂ ಸುಲಭವಾಗಲಿದೆ ಚಾರ್ಧಮ್ ಯಾತ್ರೆ
ಚಾರ್ಧಮ್ ರಸ್ತೆ ಯೋಜನೆ ಭಾರಿ ಯಶಸ್ಸನ್ನು ಕಂಡಿದೆ.
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಪ್ರಾಜೆಕ್ಟ್ ಚಾರ್ಧಮ್ (Chardham) ರಸ್ತೆ ಯೋಜನೆ ದೊಡ್ಡ ಯಶಸ್ಸನ್ನು ಕಂಡಿದೆ. ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಅತ್ಯಂತ ಕಾರ್ಯನಿರತ ಚಂಬಾ ಟೌನ್ ಅಡಿಯಲ್ಲಿ ಹೆದ್ದಾರಿಯಲ್ಲಿ 440 ಮೀಟರ್ ಉದ್ದದ ಸುರಂಗವನ್ನು ಅಗೆಯುವಲ್ಲಿ ಯಶಸ್ವಿಯಾಗಿದೆ. ಬಿಆರ್‌ಒದ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಬಿಆರ್‌ಒಗೆ ಅಭಿನಂದನೆ ಸಲ್ಲಿಸಿದರು.
ಈ ಕುರಿತಂತೆ ಮಂಗಳವಾರ ಟ್ವೀಟ್ ಮಾಡಿರುವ ಕೇಂದ್ರ ಸಚಿವರು ನಿತಿನ್ ಗಡ್ಕರಿ ನಮ್ಮ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ತಂಡವು ಚಾರ್ಧಮ್ ಯೋಜನೆಯಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಿದೆ ಎಂದು ಘೋಷಿಸಲು ಸಂತೋಷವಾಗಿದೆ. ರಿಷಿಕೇಶ-ಧರಸು ರಸ್ತೆ ಹೆದ್ದಾರಿಯಲ್ಲಿ (ಎನ್‌ಎಚ್ 94) ಕಾರ್ಯನಿರತ ಚಂಬಾ ಟೌನ್ ಅಡಿಯಲ್ಲಿ 440 ಮೀಟರ್ ಉದ್ದದ ಸುರಂಗವನ್ನು ಯಶಸ್ವಿಯಾಗಿ ಅಗೆದಿದ್ದಾರೆ ಎಂದು ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಭವಿಷ್ಯದಲ್ಲಿ, ಚಂಬಲ್ ನಗರದ ರಸ್ತೆಗಳ ಸಂಚಾರ ಮತ್ತು ಅಭಿವೃದ್ಧಿ ಮತ್ತು ಈ ಪ್ರದೇಶಗಳಲ್ಲಿನ ರಸ್ತೆಗಳ ಅಭಿವೃದ್ಧಿಯು ಚಾರ್ಧಮ್ ಯಾತ್ರೆಯಲ್ಲಿ ಯಾತ್ರಿಗಳ ಚಲನೆಯನ್ನು ಸರಾಗಗೊಳಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಆರ್ಥಿಕ ಸಮೃದ್ಧಿಯನ್ನು ತರುತ್ತದೆ. ಈ ಜಾಗತಿಕ ಸಾಂಕ್ರಾಮಿಕದ ಮಧ್ಯೆ ರಾಷ್ಟ್ರ ನಿರ್ಮಾಣದಲ್ಲಿ ಅವರ ಅಸಾಧಾರಣ ಶಕ್ತಿಗಾಗಿ ಇಡೀ ಬಿಆರ್‌ಒ ತಂಡವನ್ನು ನಾನು ಅಭಿನಂದಿಸುತ್ತೇನೆ ಎಂದವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2016ರ ಡಿಸೆಂಬರ್‌ನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದರು. ಒಟ್ಟು 11,700 ಕೋಟಿ ಮೌಲ್ಯದ ಈ ಯೋಜನೆಯ ಮೂಲಕ ಸನಾತನ ಧರ್ಮದ ನಾಲ್ಕು ಧಾಮ್‌ಗಳನ್ನು ರಸ್ತೆ ಮೂಲಕ ಸಂಪರ್ಕಿಸಲಾಗುವುದು.