ನವದೆಹಲಿ:ಚಾರ್ಲ್ಸ್ ಡಾರ್ವಿನ್ನ ಮಾನವರ ವಿಕಾಸದ ಸಿದ್ಧಾಂತವನ್ನು ಪ್ರಶ್ನಿಸಿಸುತ್ತಾ , ಇದು ವೈಜ್ಞಾನಿಕವಾಗಿ ತಪ್ಪು ಆದ್ದರಿಂದ ಇದನ್ನು  ಶಾಲೆ ಮತ್ತು ಕಾಲೇಜು ಪಠ್ಯಕ್ರಮದಲ್ಲಿ ಬದಲಾಯಿಸಬೇಕಾಗಿದೆ, ಎಂದು ಕೇಂದ್ರ ಸಚಿವ ಹಾಗೂ ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಸತ್ಯಪಾಲ್ ಸಿಂಗ್  ಶುಕ್ರವಾರ ಔರಂಗಾಬಾದ್ ನ  ಅಖಿಲ ಭಾರತ ವೈದ್ಯ ಸಮ್ಮೇಳನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ  ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  


COMMERCIAL BREAK
SCROLL TO CONTINUE READING

ನಮ್ಮ ಪೂರ್ವಜರು ಯಾರೊಬ್ಬರೂ ಕೂಡಾ ಲಿಖಿತವಾಗಿ ಅಥವಾ ಮೌಖಿಕವಾಗಿ ಕಾಡಿನಲ್ಲಿ ಅಥವಾ ಪಟ್ಟಣಕ್ಕೆ ಹೋದಾಗ, ಮಂಗನು ಮಾನವನಾಗಿರುವುದನ್ನು ಪ್ರಸ್ತಾಪಿಸಿಲ್ಲ. ನಮ್ಮ ಬಾಲ್ಯದಿಂದಲೂ ನಾವು ಓದಿದ್ದ ಪುಸ್ತಕಗಳು ಇಲ್ಲವೇ ನಮ್ಮ ಅಜ್ಜಿಯರು ಹೇಳಿದ್ದ ಕಥೆಗಳಲ್ಲಿ ಈ ಸಿದ್ಧಾಂತದ ಬಗ್ಗೆ ಉಲ್ಲೇಖಿಸಲಿಲ್ಲ" ಎಂದು ಸಿಂಗ್ ಹೇಳಿದರು. "ಜಬ್ಸ್ ಧರ್ತಿ ಪರ್ ಆದ್ಮಿ ಆಯಾ ಹೈ, ಅಡ್ಮಿ ಹೈ, ಹೈ ಔರ್ ಆದ್ಮಿ ಹೈ ರಾಹೆಗಾ" (ಒಬ್ಬ ವ್ಯಕ್ತಿಯು ಭೂಮಿಯಲ್ಲಿ ಕಾಣಿಸಿಕೊಂಡಿರುವುದರಿಂದ ಅವನು ಮನುಷ್ಯನಾಗಿದ್ದಾನೆ ಮತ್ತು ಮನುಷ್ಯನಾಗಿಯೇ ಉಳಿಯುತ್ತಾನೆ).ಎಂದು ಅಭಿಪ್ರಾಯಪಟ್ಟಿದ್ದಾರೆ.



35 ವರ್ಷಗಳ ಹಿಂದೆ ಡಾರ್ವಿನ್ನ ಸಿದ್ಧಾಂತವು (ಮಾನವರ ವಿಕಸನ) ವೈಜ್ಞಾನಿಕವಾಗಿ ತಪ್ಪಾಗಿದೆ ಎಂದು ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ವಿಜ್ಞಾನಿಗಳು ಹೇಳಿದ್ದರು. ಆದ್ದರಿಂದ, ಶಾಲೆಗಳು ಮತ್ತು ಕಾಲೇಜುಗಳ ಪಠ್ಯಕ್ರಮದಲ್ಲಿ ಬದಲಾವಣೆ ಮಾಡುವ ಮೂಲಕ ತಪ್ಪು ಸರಿಪಡಿಸಬೇಕಾಗಿದೆ ಎಂದು ಸಚಿವರು ಹೇಳಿದರು.