ಮೆಟ್ರೊ ನಿಲ್ದಾಣದ ಬಳಿ ಚಿರತೆ..! ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್
Cheetah spotted in miyapur : ಕಾಡು ಪ್ರಾಣಿಗಳು ನಾಡಿಗೆ ಕಾಲಿಡುತ್ತಿವೆ.. ಈ ಪೈಕಿ ಹೈದರಾಬಾದ್ ನಗರದ ಹೃದಯಭಾಗದಲ್ಲಿ ಚಿರತೆ ಚಲನವಲನ ವೈರಲ್ ಆಗಿದೆ. ಈ ಘಟನೆ ನಡೆದದ್ದು, ಯಾವುದೇ ಹಳ್ಳಿಯ ಕೊನೆ ಭಾಗದಲ್ಲಿ ಅಥವಾ ನಗರದ ಹೊರವಲಯದಲ್ಲಿ ಅಲ್ಲ, ಯಾವಾಗಲೂ ಸಾವಿರಾರು ಜನರು ಒಟ್ಟಿಗೆ ಚಲಿಸುವ ಮಿಯಾಪುರದಲ್ಲಿ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
Cheetah in Miyapura : ಮೆಟ್ರೋ ನಿಲ್ದಾಣದ ಬಳಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ಬರಹದೊಂದಿಗೆ ಈ ವಿಡಿಯೋವನ್ನು ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ದೃಶ್ಯಗಳು ವೈರಲ್ ಆಗುತ್ತಿವೆ. ಮಿಯಾಪುರ ಮೆಟ್ರೋ ನಿಲ್ದಾಣದ ಹಿಂದೆ ಕಟ್ಟಡ ಕಾರ್ಮಿಕರು ಚಿರತೆಯನ್ನು ನೋಡಿ ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದೀಗ ಚಿರತೆಯನ್ನು ಬೇಟೆಯಾಡಲು ಆರಂಭಿಸಿದ್ದಾರೆ. ಸ್ಥಳೀಯರಿಗೂ ಎಚ್ಚರಿಕೆ ನೀಡಲಾಗಿದೆ. ವಿಶೇಷವಾಗಿ ರಾತ್ರಿಯಲ್ಲಿ ಒಬ್ಬಂಟಿಯಾಗಿ ಹೊರಗೆ ಹೋಗದಂತೆ ಸೂಚನೆ ನೀಡಿದ್ದಾರೆ..
ಮಿಯಾಪುರ ಮೆಟ್ರೋ ನಿಲ್ದಾಣದ ಹಿಂದೆ ನಿರ್ಮಾಣದ ಭಾಗವಾಗಿ ತೆಗ್ಗು ಅಗೆಯಲಾಗಿದ್ದು, ಮಣ್ಣಿನ ಗುಡ್ಡೆಯ ಮೇಲೆ ಚಿರತೆಯೊಂದು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.. ಆದರೆ ಅದು ಕಾಡುಬೇಕ್ಕು ಅಂತ ಹೇಳಲಾಗುತ್ತಿದೆ.. ಈ ಕುರಿತು ಸ್ಪಷ್ಟಣೆ ಅರಣ್ಯ ಅಧಿಕಾರಿಗಳು ನೀಡಬೇಕಿದೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ