ತಿರುವನಂತಪುರಂ: ಚೆನ್ನೈ-ಮಂಗಳೂರು ಎಕ್ಸ್‌ಪ್ರೆಸ್‌ ರೈಲಿನ ಎರಡು ಕೋಚ್‌ ಗಳು ಕೇರಳದ ಶೋರನೂರು ರೈಲು ನಿಲ್ದಾಣದ ಬಳಿ ಇಂದು ಮುಂಜಾನೆ ಹಳಿತಪ್ಪಿವೆ. 


COMMERCIAL BREAK
SCROLL TO CONTINUE READING

ಬೆಳಗ್ಗೆ 6.30ರ ಸುಮಾರಿಗೆ ಕೇರಳದ ಶೋರನೂರು ರೈಲು ನಿಲ್ದಾಣದ ಬಳಿ ಚೆನ್ನೈ-ಮಂಗಳೂರು ಎಕ್ಸ್‌ಪ್ರೆಸ್‌ ರೈಲಿನ ಲಗ್ಗೇಜ್‌ ಕಮ್‌ ಬ್ರೇಕ್‌ ವ್ಯಾನ್‌ ಮತ್ತು ಪಾರ್ಸೆಲ್‌ ವ್ಯಾನ್‌ ಹಳಿತಪ್ಪಿವೆ. ಘಟನೆಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 



ಘಟನೆ ಹಿನ್ನೆಲೆಯಲ್ಲಿ ತಿರುವನಂತಪುರ, ಮಂಗಳೂರು ಮತು ಪಾಲಕ್ಕಾಡ್‌ ಮಾರ್ಗಗಳಲ್ಲಿನ ರೈಲು ಸಂಚಾರ ಸ್ಥಗಿತಗೊಂಡಿದೆ. ಶೀಘ್ರದಲ್ಲೇ ರೈಲು ಸಂಚಾರ ಯತಾಸ್ಥಿತಿಗೆ ಮರಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಮಂಗಳೂರು ಎಕ್ಸ್ಪ್ರೆಸ್ ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಕಾರ್ಯಾಚರಣೆಯಲ್ಲಿರುತ್ತದೆ. ಪ್ರತಿದಿನ ಸಂಜೆ 5 ಗಂಟೆಗೆ ಚೆನ್ನೈನಿಂದ ಹೊರಡುವ ರೈಲು ಬೆಳಗ್ಗೆ 9:05ಕ್ಕೆ ಮಂಗಳೂರನ್ನು ತಲುಪುತ್ತದೆ.