Cheque Bounce - ರಾಮ ಮಂದಿರ ದೇಣಿಗೆ ಸಂಗ್ರಹ, ಬೌನ್ಸ್ ಆದ 15000 ಚೆಕ್ ಗಳು
Cheque Bounce - ಇತ್ತೀಚೆಗಷ್ಟೇ ರಾಮ ಮಂದಿರ ನಿರ್ಮಾಣಕ್ಕಾಗಿ ವಿಶ್ವಹಿಂದೂ ಪರಿಷತ್ ದೇಣಿಗೆ ಸಂಗ್ರಹ ಅಭಿಯಾನ ನಡೆಸಿತ್ತು. ಈ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಪಡೆಯಲಾಗಿದ್ದ ಸುಮಾರು 22 ಕೋಟಿ ರೂ. ಮೌಲ್ಯದ 15000 ಚೆಕ್ ಗಳು ಬೌನ್ಸ್ ಆಗಿವೆ.
ನವದೆಹಲಿ: Cheque Bounce - ಇತ್ತೀಚೆಗಷ್ಟೇ ರಾಮ ಮಂದಿರ (Ram Mandir) ನಿರ್ಮಾಣಕ್ಕಾಗಿ ವಿಶ್ವಹಿಂದೂ ಪರಿಷತ್ ದೇಣಿಗೆ ಸಂಗ್ರಹ ಅಭಿಯಾನ ನಡೆಸಿತ್ತು. ಈ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಪಡೆಯಲಾಗಿದ್ದ ಸುಮಾರು 22 ಕೋಟಿ ರೂ. ಮೌಲ್ಯದ 15000 ಚೆಕ್ ಗಳು ಬೌನ್ಸ್ ಆಗಿವೆ. ಭವ್ಯ ರಾಮ ಮಂದಿರಕ್ಕಾಗಿ ಕೇಂದ್ರ ಸರ್ಕಾರ ನಿರ್ಮಿಸಿರುವ ಶ್ರೀ ರಾಮ ಜನ್ಮ ಭೂಮಿ ತೀರ್ಥ್ ಕ್ಷೇತ್ರದ ನಡೆಸಿರುವ ಒಂದು ಆಡಿಟ್ ರಿಪೋರ್ಟ್ ಪ್ರಕಾರ ನೀಡಲಾಗಿರುವ ಚೆಕ್ ಗೆ ಸಂಬಂಧಿಸಿದ ಖಾತೆಗಳಲ್ಲಿ ಕಡಿಮೆ ಮೊತ್ತ ಇದ್ದ ಕಾರಣ ಅಥವಾ ತಾಂತ್ರಿಕ ದೋಷದ ಕಾರಣ ಈ ಚೆಕ್ ಗಳು ಬೌನ್ಸ್ ಆಗಿವೆ ಎಂದು ಹೇಳಿದೆ. ಈ ವರ್ಷದ ಮಕರ ಸಂಕ್ರಾಂತಿಯ ಬಳಿಕ ವಿಶ್ವ ಹಿಂದೂ ಪರಿಷತ್ ರಾಮ ಮಂದಿರ(Ram Temple) ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನ ಹಮ್ಮಿಕೊಂಡಿತ್ತು. ಈ ಅಭಿಯಾನದ ಮೂಲಕ ದೇಶಾದ್ಯಂತ ಕೋಟ್ಯಂತರ ರೂ. ದೇಣಿಗೆ ಸಂಗ್ರಹ ನಡೆಸಲಾಗಿದೆ.
ಇದನ್ನೂ ಓದಿ-Ram Mandir Trust: ರಾಮಮಂದಿರ ನಿರ್ಮಾಣಕ್ಕೆ ಮೂರೇ ದಿನದಲ್ಲಿ ₹ 100 ಕೋಟಿ ದೇಣಿಗೆ..!
ಈ ಕುರಿತು ಮಾಹಿತಿ ನೀಡಿರುವ ಟ್ರಸ್ಟ್ ನ ಸದಸ್ಯರಾಗಿರುವ ಡಾ. ಅನೀಲ್ ಮಿಶ್ರಾ, ತಾಂತ್ರಿಕ ದೋಷಗಳ ನಿವಾರಣೆಗಾಗಿ ಬ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಜನರಿಗೆ ತಮ್ಮ ಖಾತೆಗಳಲ್ಲಿ ಹಣ ಜಮೆ ಮಾಡಲು ಮತ್ತು ದೇಣಿಗೆ ನೀಡಲು ಸೂಚಿಸುತ್ತಿವೆ ಎಂದು ಹೇಳಿದ್ದಾರೆ. ಈ ಚೆಕ್ ಗಳಲ್ಲಿ ಸುಮಾರು 2000 ಚೆಕ್ ಗಳು ಅಯೋಧ್ಯೆಯ (Ayodhya)ಮೂಲದ ಚೆಕ್ ಗಳಾಗಿವೆ.
ಇದನ್ನೂ ಓದಿ-ಅಯೋಧ್ಯೆಯ ರಾಮ್ ಮಂದಿರ ಟ್ರಸ್ಟ್ ಖಾತೆಯಿಂದ 6 ಲಕ್ಷ ರೂ. ವಂಚನೆ
ಈ ವರ್ಷದ ಜನವರಿ 15ರಿಂದ ಫೆಬ್ರವರಿ 17ರವರೆಗೆ ವಿಹೆಚ್ ಪಿ(VHP) ನಡೆಸಿರುವ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ ಈ ಚೆಕ್ (Bank Cheque) ಗಳನ್ನು ಸಂಗ್ರಹಿಸಲಾಗಿದೆ. ಈ ಅಭಿಯಾನದ ಅಡಿ ಒಟ್ಟು 5000 ಕೋಟಿ ರೂ.ಹಣ ಸಂಗ್ರಹಣೆ ಮಾಡಲಾಗಿದೆ. ಆದರೆ, ಇದುವರೆಗೆ ಟ್ರಸ್ಟ್ ಈ ಅಭಿಯಾನದಲ್ಲಿ ಸಂಗ್ರಹಗೊಂಡ ಒಟ್ಟು ಹಣದ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
ಇದನ್ನೂ ಓದಿ-ರಾಮ್ ಮಂದಿರ ಟ್ರಸ್ಟ್‌ನ ಬ್ಯಾಂಕ್ ಖಾತೆ ಸಕ್ರಿಯ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.