ನವದೆಹಲಿ: ಕೇಂದ್ರದ ಮೋದಿ ನೇತೃತ್ವದ ಸರ್ಕಾರ (Modi Government) ಶೀಘ್ರದಲ್ಲೇ ಅಪರಾಧ ಶ್ರೇಣಿಯಿಂದ ಚೆಕ್ ಬೌನ್ಸ್ ಅನ್ನು ತೆಗೆದುಹಾಕುವ ಸಾಧ್ಯತೆ ಇದೆ. ಕೇಂದ್ರ ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಹಣಕಾಸು ಸೇವೆಗಳ ಇಲಾಖೆ ಈ ನಿಟ್ಟಿನಲ್ಲಿ ಕ್ಯಾಬಿನೆಟ್ ಸಚಿವಾಲಯಕ್ಕೆ ಪತ್ರ ಬರೆದಿದೆ. ಆದರೂ ಕೂಡ ಈ ವಿನಾಯಿತಿಯನ್ನು ತಾತ್ಕಾಲಿಕವಾಗಿ ಮಾತ್ರ ನೀಡಲಾಗುವುದು, ಏಕೆಂದರೆ ಕರೋನಾ ವೈರಸ್ ಅನೇಕ ಜನರ ವ್ಯವಹಾರ ಮತ್ತು ಉದ್ಯೋಗದ ಮೇಲೆ ಪರಿಣಾಮ ಬೀರಿದೆ.


COMMERCIAL BREAK
SCROLL TO CONTINUE READING

ನಮ್ಮ ಅಂಗಸಂಸ್ಥೆ ಹಾಗೂ ಚಾನೆಲ್ ಝೀ ಬಿಸಿನೆಸ್ ಗೆ ದೊರೆತ ವಿಶೇಷ ಮಾಹಿತಿಯ ಪ್ರಕಾರ, ಕರೋನಾ ಬಿಕ್ಕಟ್ಟಿನಲ್ಲಿರುವ ಜನರಿಗೆ ಪರಿಹಾರ ನೀಡುವ ಉದ್ದೇಶದಿಂದ ಚೆಕ್ ಅಥವಾ EMIಬೌನ್ಸ್‌ನಂತಹ ಪ್ರಕರಣಗಳನ್ನು ಅಪರಾಧದ ವರ್ಗದಿಂದ ತೆಗೆದುಹಾಕಲು ಸರ್ಕಾರ ಸಿದ್ಧತೆ ನಡೆಸಿದೆ. ಇದರರ್ಥ ಚೆಕ್ ಅಥವಾ ಕಂತು ಬೌನ್ಸ್ ಪ್ರಕರಣ ಇನ್ನು ಮುಂದೆ ಶಿಕ್ಷಾರ್ಹ ಅಪರಾಧವಾಗಿರುವುದಿಲ್ಲ. ಚೆಕ್ ಬೌನ್ಸ್, ಅಥವಾ ಸಾಲದ ಕಂತು ಪಾವತಿಸದಿರುವುದು ಸೇರಿದಂತೆ 19 ಕಾನೂನುಗಳ ಅಡಿಯಲ್ಲಿ ಸೌಮ್ಯ ಅಪರಾಧಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.


ಈ ಕಾನೂನುಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ
ಕೆಲವು ಕಾನೂನುಗಳಲ್ಲಿನ ಬದಲಾವಣೆಗಳಿಗೆ ಸರ್ಕಾರವು ಈಗಾಗಲೇ ಸಲಹೆಗಳನ್ನು ಸ್ವೀಕರಿಸಿದೆ. ವಿಮಾ ಕಾಯ್ದೆ, ನಬಾರ್ಡ್ ಕಾಯ್ದೆ, ರಾಜ್ಯ ಹಣಕಾಸು ನಿಗಮ ಕಾಯ್ದೆ, ಸಾಲ ಮಾಹಿತಿ ಕಂಪನಿಗಳ (ನಿಯಂತ್ರಣ) ಕಾಯ್ದೆ ಮತ್ತು ಅಪವರ್ತನ ನಿಯಂತ್ರಣ ಕಾಯ್ದೆ ಇವುಗಳಲ್ಲಿ ಶಾಮೀಲಾಗಿವೆ. ಈ ಕಾನೂನುಗಳಲ್ಲಿ ಅನೇಕ ನಿಯಮಗಳಿವೆ ಎಂದು ತಜ್ಞರು ಹೇಳುತ್ತಾರೆ, ಇದರಲ್ಲಿ ಸಣ್ಣ ಉಲ್ಲಂಘನೆಗಳನ್ನು ಸಹ ಅಪರಾಧವೆಂದು ಪರಿಗಣಿಸಲಾಗಿದೆ.


ಈ ಬಗ್ಗೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕಳೆದ ತಿಂಗಳು ಮಾಹಿತಿ ನೀಡಿದ್ದರು. ವ್ಯವಹಾರಕ್ಕೆ ಸಂಬಂಧಿಸಿದ ಕಾನೂನನ್ನು ಈಸ್ ಆಫ್ ಡೂಯಿಂಗ್ ಬಿಸಿನೆಸ್ ಅಡಿಯಲಿ ಬದಲಾಯಿಸಲಾಗುವುದು ಎಂದು ಅವರು ಹೇಳಿದ್ದಾರೆ. ಕಂಪೆನಿ ಕಾಯ್ದೆಯಡಿ ಸರ್ಕಾರ ಈಗಾಗಲೇ ಇಂತಹ ಕ್ರಮಗಳನ್ನು ಕೈಗೊಂಡಿದೆ. ಕಂಪನಿಯ ಕಾನೂನಿನಡಿಯಲ್ಲಿ ಅನೇಕ ಉಲ್ಲಂಘನೆಗಳನ್ನು ಅಪರಾಧದಿಂದ ತೆಗೆದುಹಾಕಲಾಗಿದೆ.


ಇದು ವ್ಯವಹಾರ ಹೆಚ್ಚಿಸಲು ಉತ್ತೇಜನ ನೀಡುವುದರ ಜೊತೆಗೆ ಜನರ ಅನಗತ್ಯ ಸಮಸ್ಯೆಗಳನ್ನು ತಪ್ಪಿಸಲಿವೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಪ್ರಸ್ತಾವನೆಯ ಪ್ರಕಾರ, ಇದು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್ ಉದ್ದೇಶದಿಂದ ಸರ್ಕಾರ ಕೈಗೊಂಡ ಹೆಜ್ಜೆಯಾಗಿದೆ ಎನ್ನಲಾಗಿದೆ.