ಬೆಂಗಳೂರು: ಬಜಾಜ್ ಅಂತಿಮವಾಗಿ ತನ್ನ ಅತ್ಯಂತ ಪ್ರಸಿದ್ಧ ಬ್ರ್ಯಾಂಡ್ ಚೇತಕ್ ಅನ್ನು 14 ವರ್ಷಗಳ ನಂತರ  ಮತ್ತೆ ಪ್ರಾರಂಭಿಸಲು ನಿರ್ಧರಿಸಿದೆ. ಬಜಾಜ್ ಶೀಘ್ರದಲ್ಲೇ ತನ್ನ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ದೇಶದ ಮಾರುಕಟ್ಟೆಗೆ ತರಲಿದೆ. ಇತ್ತೀಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಬೈಕ್‌ನ ವಿಶೇಷವೆಂದರೆ ಕೇವಲ ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ ಅದರಲ್ಲಿ  95 ಕಿ.ಮೀ ಪ್ರಯಾಣಿಸಬಹುದಾಗಿದೆ. ಈ ಹೊಸ ಬೈಕನ್ನು 2020 ರಲ್ಲಿ ಪುಣೆ ಮತ್ತು ಬೆಂಗಳೂರಿನಿಂದ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

IP 67 ರೆಡ್ ಲಿಥಿಯಂ-ಐಯಾನ್ ಬ್ಯಾಟರಿ ಬಳಕೆ:
ಎಲೆಕ್ಟ್ರಿಕ್ ಬೈಕ್‌ಗೆ ಅತ್ಯುತ್ತಮ ಕಾರ್ಯಕ್ಷಮತೆ ನೀಡಲು ಕಂಪನಿಯು 4 kW ಎಲೆಕ್ಟ್ರಿಕ್ ಮೋಟರ್ ಅನ್ನು ಸ್ಥಾಪಿಸಿದೆ. ಅಲ್ಲದೆ, ವೇಗವಾಗಿ ಚಾರ್ಜಿಂಗ್ ಮಾಡಲು ಮತ್ತು ಹೆಚ್ಚು ದೂರ ಓಡಿಸಲು ಅನುಕೂಲವಾಗುವಂತೆ IP  67 ರೆಡ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು  ಬಳಸಲಾಗುತ್ತದೆ. ಈ ಬ್ಯಾಟರಿಯನ್ನು ಬೈಕ್‌ಗೆ ಲಗತ್ತಿಸಲಾಗುವುದು ಮತ್ತು ಅದನ್ನು ತೆಗೆದುಹಾಕಲಾಗುವುದಿಲ್ಲ. ಒಂದೇ ಚಾರ್ಜ್‌ನಲ್ಲಿ 95 ಕಿ.ಮೀ ದೂರವನ್ನು ಕ್ರಮಿಸಲು ಇದು ಸೂಕ್ತವಾದ ಸಂಯೋಜನೆಯಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.


ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ ಚೇತಕ್:
1 ಲಕ್ಷದಿಂದ 1.20 ಲಕ್ಷದವರೆಗೆ ಬೆಲೆಯಿರುವ ಈ ಬೈಕ್‌ನ ವಿಶೇಷ ಲಕ್ಷಣವೆಂದರೆ ಇದನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡದರೆ ಸುಮಾರು 95 ಕಿ.ಮೀ. ಚಲಿಸುತ್ತದೆ. ಇದರೊಂದಿಗೆ ಬೈಕ್‌ನಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಬೈಕ್‌ನಲ್ಲಿ ಡಿಜಿಟಲ್ ಮೀಟರ್, ಶುದ್ಧ ರೆಟ್ರೊ ಥೀಮ್ ಮತ್ತು ಎಲ್ಇಡಿ ಟರ್ನ್ ಇಂಡಿಕೇಟರ್ ಅಳವಡಿಸಲಾಗಿದೆ. ಅಲ್ಲದೆ, ಬೈಕ್‌ನಲ್ಲಿ ಅಲಾಯ್ ವೀಲ್‌ಗಳನ್ನು ಅಳವಡಿಸಲಾಗಿದೆ. ಮೊದಲ ಬಾರಿಗೆ ಇದು ರಿವರ್ಸ್ ಡ್ರೈವಿಂಗ್ ವೈಶಿಷ್ಟ್ಯವನ್ನು ಸಹ ಒಳಗೊಂಡಿರುತ್ತದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.


ಡಿಜಿಟಲ್ ಡಿಸ್ಪ್ಲೇನಲ್ಲಿ ಎಲ್ಲಾ ಮಾಹಿತಿ: 
ಬಜಾಜ್ ತನ್ನ ಹೊಸ ಬೈಕ್ ಅನ್ನು ಡಿಜಿಟಲ್ ಡಿಸ್ಪ್ಲೇಯೊಂದಿಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಇದರಲ್ಲಿ, ವೇಗ, ಬ್ಯಾಟರಿ ಮಟ್ಟ, ಸವಾರಿ ಮೋಡ್, ಸಮಯ, ವ್ಯಾಪ್ತಿಯಂತಹ ಪ್ರಮುಖ ಮಾಹಿತಿಯನ್ನು ನೀವು ನೋಡಲು ಸಾಧ್ಯವಾಗುತ್ತದೆ ಎಂದು ಅದು ತಿಳಿಸಿದೆ.