ನವದೆಹಲಿ:ಇಂಗ್ಲಿಷ್ ಲೇಖಕ ಚೇತನ್ ಭಗತ್ ಅವರು ಪತ್ರಕರ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಆರೋಪಿಸಲಾಗಿದೆ.


COMMERCIAL BREAK
SCROLL TO CONTINUE READING

ಶೀನಾ ಎನ್ನುವ ಪತ್ರಕರ್ತೆಯು ದೇಶದಲ್ಲಿ ನಡೆಯುತ್ತಿರುವ #MeToo(ಮೀಟೂ) ಚಳುವಳಿಯ ಭಾಗವಾಗಿ ಈ ಹಿಂದೆ ಲೇಖಕ ಚೇತನ್ ಭಗತ್ ಅವರು ವಾಟ್ಸಪ್ ನಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಅವರು  ಕಳುಸಿರುವ ಸಂದೇಶಗಳನ್ನು ಈಗ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹಬ್ಬಿದ್ದ ತಕ್ಷಣ ತಮ್ಮ ತಪ್ಪನ್ನು ಒಪ್ಪಿಕೊಂಡಿರುವ ಚೇತನ್ ಭಗತ್ ಅದಕ್ಕೆ ಕ್ಷಮೆಯಾಚನೆ ಕೋರಿದ್ದಾರೆ. 




ವಿಶೇಷವೆಂದರೆ ಬಾಲಿವುಡ್ ನಲ್ಲಿ ಪ್ರಮುಖ ನಟ ನಾನಾ ಪಟೇಕರ್ ಮೇಲೆ ತನುಶ್ರೀ ದತ್ತಾ ಲೈಂಗಿಕ ಕಿರುಕುಳದ ಆರೋಪ ಮಾಡಿದಾಗ ಚೇತನ್ ಭಗತ್ ಸಹ ದತ್ತಾ ಅವರಿಗೆ  ಬೆಂಬಲ ವ್ಯಕ್ತಪಡಿಸಿದ್ದರು.ಈಗ ಸಾಮಾಜಿಕ ಜಾಲತಾಣಗಳಲ್ಲಿ ಚೇತನ್ ಭಗತ್ ಅವರಿಗೆ ಪರ ವಿರೋಧವನ್ನು  ವ್ಯಕ್ತಪಡಿಸಿದ್ದಾರೆ.