7 ನೇ ವೇತನ ಆಯೋಗ: ಈ ರಾಜ್ಯದ ಶಿಕ್ಷಕರಿಗೆ ಸಿಗಲಿದೆ ಡಬಲ್ ಉಡುಗೊರೆ
ಮುಖ್ಯಮಂತ್ರಿ ಡಾ.ರಾಮನ್ ಸಿಂಗ್ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ಎಲ್ಲ ಉದ್ಯೋಗಿಗಳಗೆ 2016 ರಿಂದ ಏಳನೇ ವೇತನ ಮತ್ತು ಅರಿಯರ್ಸ್ ಘೋಷಿಸಿದ್ದಾರೆ.
ರಾಯ್ಪುರ್: ಛತ್ತೀಸ್ಗಡ ಸರ್ಕಾರವು ರಾಜ್ಯ ಶಿಕ್ಷಕರರಿಗೆ ಏಳನೇ ವೇತನವನ್ನು ಉಡುಗೊರೆಯಾಗಿ ನೀಡಿದೆ. ಮುಖ್ಯಮಂತ್ರಿ ಡಾ.ರಾಮನ್ ಸಿಂಗ್ 2016 ರಿಂದ ಏಳನೇ ವೇತನ ಪ್ರಮಾಣ ಮತ್ತು ಅರಿಯರ್ಸ್ ಅನ್ನು ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ಎಲ್ಲ ಉದ್ಯೋಗಿಗಳಿಗೆ ಘೋಷಿಸಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 6 ರಿಂದ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುತ್ತಿದ್ದಾರೆ. ನವೆಂಬರ್ ಕೊನೆಯಲ್ಲಿ ಛತ್ತೀಸ್ಗಡದಲ್ಲಿ ಚುನಾವಣಾ ನಡೆಯಲಿದೆ. ಈ ಹಿನ್ನೆಲೆಯಲಿ ಛತ್ತೀಸ್ಗಡ ಸರ್ಕಾರ ನೂತನ ವೇತನವನ್ನು ಘೋಷಿಸಿದೆ. ಛತ್ತೀಸ್ಗಡ ಸರ್ಕಾರದ ಈ ಘೋಷಣೆಯಿಂದ 2800 ಪ್ರಾಧ್ಯಾಪಕರು ಹೊಸ ವೇತನ ಪ್ರಮಾಣವನ್ನು ಪಡೆಯಬಹುದು.
ಅದೇ ಸಮಯದಲ್ಲಿ, ರಾಜ್ಯ ಸರ್ಕಾರವು ಛತ್ತೀಸ್ಗಢದಲ್ಲಿ ಮಹಿಳಾ ಉದ್ಯೋಗಿಗಳಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ಮಹಿಳಾ ಕಾರ್ಯಕರ್ತರಿಗೆ ಮಗುವಿನ ಆರೈಕೆಗಾಗಿ 730 ದಿನಗಳ ಚೈಲ್ಡ್ ಕೇರ್ ರಜೆಯನ್ನು ಸರ್ಕಾರ ಘೋಷಿಸಿದೆ. ಹಿಂದಿನ, ಛತ್ತೀಸ್ಗಢ ಹೈಕೋರ್ಟ್ ಮಹಿಳೆಯರಿಗೆ ಚೈಲ್ಡ್ ಕೇರ್ ರಜೆ ನೀಡುವ ಬಗ್ಗೆ ರೂಪು ರೇಷೆ ರೂಪಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.
ರಾಜ್ಯದಲ್ಲಿ ಮಗುವಿನ ಆರೈಕೆ ರಜೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಡಾ. ಅರ್ಚನಾ ಸಿಂಗ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದೇ ವೇಳೆಗೆ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿಗೆ ಶಿಕ್ಷಕರಿಂದ ಬಹಳಷ್ಟು ಸಲಹೆ ನೀಡಲಾಯಿತು. ಕಮಲೇಶ್ ಎಂಬ ಶಿಕ್ಷಕ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು. ಉದಾಹರಣೆಗೆ ಮೇಲ್ವಿಚಾರಣೆ ನಡೆಸುವ ಪ್ರಯೋಗಾಲಯಗಳು ಮತ್ತು ಕಂಪ್ಯೂಟರ್ಗಳ ಸಮಿತಿ ರಚಿಸಬೇಕು. ಅದೇ ಸಮಯದಲ್ಲಿ ಮತ್ತೊಬ್ಬ ಶಿಕ್ಷಕ ಹಲವು ಶಾಲೆಗಳಲ್ಲಿ ಅಂತರ್ಜಾಲವನ್ನು ಹೊಂದಿಲ್ಲವೆಂದು ದೂರು ನೀಡಿದರು. ಮಹಿಳಾ ಶಿಕ್ಷಕರು ಒಂದೇ ಸಮಯದಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಒತ್ತಾಯಿಸಿದರು.