ಶಾಲೆಯಲ್ಲಿ ಅಡುಗೆ ಮಾಡುತ್ತಿದ್ದವನ ಪುತ್ರನಿಂದ ಜೆಇಇ ಪರೀಕ್ಷೆಯಲ್ಲಿ ಶೇ 90 ಅಂಕ
ನವದೆಹಲಿ: ತೀವ್ರ ಬಡತನದಲ್ಲಿ ಜನಿಸಿದರೂ,ಛತ್ತೀಸಘಢದ ಜಶ್ಪುರ್ ಜಿಲ್ಲೆಯ ಬಾಲಮುಕುಂದ್ ಎನ್ನುವ ವಿದ್ಯಾರ್ಥಿಯೊಬ್ಬ ಜೆಇಇ ಪರೀಕ್ಷೆಯಲ್ಲಿ 90 ಪ್ರತಿ ಅಂಕ ಗಳಿಸಿದ್ದಾನೆ.
ಸರ್ಕಾರಿ ಶಾಲೆಯೊಂದರಲ್ಲಿ ದಿನಕ್ಕೆ 40 ರೂಗಳನ್ನು ದುಡಿಯುವ ಅಡುಗೆಯವನ ಮಗನಾಗಿರುವ ಈ ವಿದ್ಯಾರ್ಥಿಯು ಸರ್ಕಾರವು ನಡೆಸುತ್ತಿರುವ ಉಚಿತ ಕೋಚಿಂಗ್ ಸೆಂಟರ್-ಸಂಕಲ್ಪ ಶಿಕ್ಷನ್ ಸಂಸ್ಥಾನ ನಲ್ಲಿ ಅಧ್ಯಯನ ಮಾಡಿದ್ದಾನೆ.
ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಮುಕುಂದ್ ಪೈಕ್ರಾ ಇಲ್ಲಿರುವ ಶಿಕ್ಷಕರು ತುಂಬಾ ಒಳ್ಳೆಯವರು ಇವರಿಂದ ನನಗೆ ಬಹಳಷ್ಟು ಕಲಿಯಲು ಸಾಧ್ಯಯಿತು.ನನ್ನ ಕನಸು ಈಗೇನಿದ್ದರೂ ಎಂಜಿನಿಯರ್ ಆಗುವುದು ಎಂದು ತಿಳಿಸಿದರು ಅಲ್ಲದೆ ಎಲ್ಲರೂ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಹಾರೈಸಿದರು.
ತಂದೆ ಕೂಡ ಮಗನ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಲ್ಲದೆ ಮಗನನ್ನು ಬಾಲ್ಯದಿಂದಲೂ ಕೂಲಿ ಮಾಡಿ ಬೆಳಸಿರುವ ತಮ್ಮ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. ಏತನ್ಮಧ್ಯೆ, ಸರ್ಕಾರ ತರಬೇತಿ ಕೇಂದ್ರದಲ್ಲಿ ಶಿಕ್ಷಕರಾಗಿರುವ ಮುಖೇಶ್ ವರ್ಮಾ ಅವರು ಅಧ್ಯಯನದ ವಿಷಯಕ್ಕೆ ಬಂದಾಗ ವಿದ್ಯಾರ್ಥಿಗಳು ಪ್ರಾಮಾಣಿಕರಾಗಿದ್ದಾರೆ ಎಂದು ತಿಳಿಸಿದರು. ಇದೇ ಕೋಚಿಂಗ್ ಸೆಂಟರ್ನನಲ್ಲಿ ರೈತನ ಮಗ ಯುವರಾಜ್ ಪೈಕ್ರಾ ಎನ್ನುವವರು ಅವರು ಜೆಇಇ ನಲ್ಲಿ 94 ಅಂಕ ಗಳಿಸಿದ್ದಾರೆ.