ಛತ್ತೀಸ್ ಗಢ: ಕೊರೋನಾ ಸೋಂಕಿನ ಎರಡನೇ ಅಲೆ ಎದ್ದಿದೆ. ಹೊರಗಡೆ ಹೋಗುವಾಗ ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈಗೆ ಸ್ಯಾನಿಟೈಸರ್ ಹಾಕಿಕೊಳ್ಳಿ ಎಂದು ಹೇಳುತ್ತಲೇ ಇರುತ್ತಾರೆ.


COMMERCIAL BREAK
SCROLL TO CONTINUE READING

ಸರ್ಕಾರ ಎಷ್ಟೇ ಹೇಳಿದರೂ ಜನರು ಕ್ಯಾರೇ ಅಂತಿಲ್ಲ. ಕೋವಿಡ್-19(Covid-19) ಇದ್ದರೂ, ಆರ್ಥಿಕತೆ ಕುಸಿದಿದ್ದರೂ ಮದ್ಯ ಸೇವಿಸುವವರ ಸಂಖ್ಯೆಯೂ ಕಡಿಮೆಯಾಗಿಲ್ಲ. ಮಾಸ್ಕ್ ಇಲ್ಲದೆ ಸೀದಾ ಹೋಗಿ ಲಿಕ್ಕರ್ ಶಾಪ್ ನಲ್ಲಿ ಮದ್ಯ ಸೇವಿಸಿ, ಖರೀದಿಸಿ ಬರುತ್ತಾರೆ.


Caste Wise Reservation: ಸರ್ಕಾರ ಖಾಸಗೀಕರಣ ಗೊಳಿಸಿದ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಮೀಸಲಾತಿಗೆ ಬ್ರೇಕ್?


ಇದಕ್ಕಾಗಿ ಛತ್ತೀಸ್ ಗಢ ಸರ್ಕಾರ ಹೊಸ ಕೋವಿಡ್ ಮಾರ್ಗಸೂಚಿ(Covid Guidelines) ತಂದಿದೆ. ರಾಜ್ಯದ ಎಲ್ಲಾ ಕಡೆ ಮದ್ಯದಂಗಡಿಗೆ ಹೋಗುವವರು ಕಡ್ಡಾಯವಾಗಿ ಫೇಸ್ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಹೋಗಬೇಕು. ಇಲ್ಲದಿದ್ದರೆ ಪ್ರವೇಶವಿರುವುದಿಲ್ಲ.


Lockdown Latest News : ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಬೀಳುತ್ತಾ ಲಾಕ್ ಡೌನ್


ಕೋವಿಡ್-19 ಮಾರ್ಗಸೂಚಿ ಪಾಲಿಸಲು ಪ್ರತಿ ಲಿಕ್ಕರ್ ಶಾಪ್(Liquor Shop) ಗೆ ರಾಜ್ಯ ಸರ್ಕಾರ 10 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಸರ್ಕಾರದ ಆದೇಶವನ್ನು ಪಾಲಿಸಲಾಗುತ್ತಿದೆಯೇ, ಸ್ಯಾನಿಟೈಸರ್, ಮಾಸ್ಕ್ ಬಳಸುತ್ತಿದ್ದಾರೆಯೇ, ಮದ್ಯದಂಗಡಿ ಆವರಣದಲ್ಲಿ ಸ್ವಚ್ಛತೆ ಕಾಪಾಡಲಾಗಿದೆಯೇ ಎಂದು ಖಚಿತಪಡಿಸಲು ಪ್ರತಿ ಜಿಲ್ಲೆಯಲ್ಲಿ ತಪಾಸಣಾ ದಳವನ್ನು ನೇಮಿಸಲಾಗುತ್ತದೆ.


CBSE ಯಿಂದ ಇ ಪರೀಕ್ಷಾ ಪೋರ್ಟಲ್ ಲಾಂಚ್; ಪರೀಕ್ಷಾ ತಯಾರಿ ಆಗಲಿದೆ ಇನ್ನಷ್ಟು ಸುಲಭ


ಆಯಾ ಜಿಲ್ಲೆಯಲ್ಲಿ ತಂಡವು ಪ್ರತಿದಿನ ಕನಿಷ್ಠ ಐದು ಬಾರಿ ಪ್ರತಿ ಮದ್ಯದಂಗಡಿಗೆ ಕಡ್ಡಾಯವಾಗಿ ಭೇಟಿ ನೀಡಲಿದೆ, ಹೊಸ ಮಾರ್ಗಸೂಚಿಗಳ ಅನುಸರಣೆ ಕುರಿತು ವರದಿಯನ್ನು ಛತ್ತೀಸ್ ಗಢ ರಾಜ್ಯ ಮಾರುಕಟ್ಟೆ ನಿಗಮ ನಿಯಮಿತದ ಪ್ರಧಾನ ಕಚೇರಿಗೆ ಕಳುಹಿಸುತ್ತದೆ.


ಬಿಜೆಪಿ, ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ, ರಾಜ್ಯಪಾಲರಿಗೆ ಕರೆ ಮಾಡಿದ ದೀದಿ


ಛತ್ತೀಸ್ ಗಢದಲ್ಲಿ ಕೋವಿಡ್-19 ಪ್ರಕರಣ ಹೆಚ್ಚಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ 4,563 ಹೊಸ ಪ್ರಕರಣಗಳು ಮತ್ತು 29 ಸಾವುಗಳು ಸಂಭವಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.