ನವದೆಹಲಿ: Coronavirus Third Wave: ಪ್ರಸ್ತುತ ದೇಶ ಕೊರೊನಾ ಮಹಾಮಾರಿಯ ಎರಡನೇ ಅಲೆ ಉಂಟುಮಾಡಿರುವ ಸವಾಲುಗಳ ವಿರುದ್ಧ ತೀವ್ರ ಹೋರಾಟ ನಡೆಸುತ್ತಿದೆ. ಪ್ರಸ್ತುತ, ಕೊರೊನಾ ತನ್ನ ವೇಗವನ್ನು ಕಡಿಮೆಗೊಳಿಸಿದರೂ ಕೂಡ, ಕೊರೊನಾ ವೈರಸ್ ನ ಮತ್ತೊಂದು ಅಲೆಯ ಕುರಿತು ತಜ್ಞರ ಎಚ್ಚರಿಕೆ ಸರ್ಕಾರ ಹಾಗೂ ಜನರ ಚಿಂತೆಯನ್ನು ಹೆಚ್ಚಿಸಿದೆ. ಈ ನಡುವೆ ಹೇಳಿಕೆಯೊಂದನ್ನು ನೀಡಿರುವ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ಕೆ. ಸುಬ್ರಮಣ್ಯಮ್, (K.V. Subramaniam) ಕೊವಿಡ್-19 (Covid-19) ನ ಮತ್ತೊಂದು ಅಲೆಯ ಸಾಧ್ಯತೆಯನ್ನು ಕಡಿಮೆ ಮಾಡಲು ದೇಶಾದ್ಯಂತ ಲಸಿಕಾಕರಣ ಅಭಿಯಾನಕ್ಕೆ (Covid-19 Vaccination) ಮತ್ತಷ್ಟು ವೇಗ ನೀಡುವ ಅವಶ್ಯಕತೆ ಇದೆ. 


COMMERCIAL BREAK
SCROLL TO CONTINUE READING

ಕೊವಿಡ್-19 ಎರಡನೇ ಅಲೆಯ ಆರ್ಥಿಕ ಪ್ರಭಾವ ಅಷ್ಟೊಂದು ದೊಡ್ಡದಾಗಿರುವುದಿಲ್ಲ ಎಂದು ಹೇಳಿರುವ ಅವರು, ಆರ್ಥಿಕತೆ ಮುಂದೆ ಸಾಗಲು ಹಣಕಾಸಿನ ಮತ್ತು ವಿತ್ತೀಯ ಬೆಂಬಲದ ಪಾತ್ರ ಮುಖ್ಯವಾಗಿರುತ್ತದೆ ಎಂದಿದ್ದಾರೆ. ಸಾಮಾನ್ಯ ಮುಂಗಾರು (Monsoon) ನಿರೀಕ್ಷೆಯೊಂದಿಗೆ, ಧಾನ್ಯ ಉತ್ಪಾದನೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ದಾಖಲೆಯ ಮಟ್ಟದಲ್ಲಿ ಉಳಿಯುವ ನಿರೀಕ್ಷೆಯಿದೆ ಎಂದು ಅವರು ಸಾಧ್ಯತೆಯನ್ನು ವರ್ತಿಸಿದ್ದಾರೆ. 


ಇದನ್ನೂ ಓದಿ-Work From Home ಬಳಿಕ ಇದೀಗ Work From Hotel ಆರಂಭಿಸಿದ ಜನ, ಏನಿದು WFH ಹೊಸ ಫಂಡಾ?


ದೇಶದಲ್ಲಿ 18 ರಿಂದ 44 ನೇ ವಯಸ್ಸಿನ ಜನರ ಕೊರೊನಾ ವ್ಯಾಕ್ಸಿನೆಶನ್ ನಡುವೆ ಲಸಿಕೆಯ ಕೊರತೆ ಎದುರಾಗಿರುವ ಈ ಸಮಯದಲ್ಲಿ, ಮೂರನೇ ಅಲೆಯ ಕುರಿತು ಮುಖ್ಯ ಆರ್ಥಿಕ ಸಲಹೆಗಾರರು (Chief Economic Adviser K.V. Subramaniyan) ನೀಡಿರುವ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ. ದೇಶಾದ್ಯಂತ ಉಂಟಾಗಿರುವ ವ್ಯಾಕ್ಸಿನ್ (Vaccine) ಕೊರತೆಯನ್ನು ದೂರಗೊಳಿಸಿ, ಆದಷ್ಟು ಬೇಗ ಜನರಿಗೆ ವ್ಯಾಕ್ಸಿನೆಶನ್ ಗಾಗಿ ವಿದೇಶಿ ವ್ಯಾಕ್ಸಿನ್ ತಯಾರಕ ಕಂಪನಿಗಳ ಜೊತೆಗೆ ಮಾತುಕತೆ ನಡೆಯುತ್ತಿದೆ. ಸ್ಥಳೀಯ ಮಟ್ಟದಲ್ಲಿಯೂ ಕೂಡ ವ್ಯಾಕ್ಸಿನ್ ಉತ್ಪಾದನೆಯನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ.


ಇದನ್ನೂ ಓದಿ- ಕೋವಿಶೀಲ್ಡ್ ನ ಒಂದೇ ಡೋಸ್ ಸಾಕಾ? ಎರಡನೇ ಡೋಸ್ ಅಗತ್ಯವಿಲ್ಲವೇ ?


ಇದಕ್ಕೂ ಮೊದಲು ಮೂರನೆಯ ಅಲೆಯ ಕುರಿತು ಎಚ್ಚರಿಕೆ ನೀಡಿರುವ ತಜ್ಞರು, ದೇಶದಲ್ಲಿ ಕೊರೊನಾ ವೈರಸ್ ನ ಮತ್ತೊಂದು ಅಲೆ ಬರುವ ಸಾಧ್ಯತೆ ಇದ್ದು, ಮಕ್ಕಳ ಮೇಲೆ ಈ ಅಲೆ ಪ್ರಭಾವ ಬೀರುವ ಸಾದ್ಯತೆ ಇದೆ ಎಂದಿದ್ದರು. ಕೇಂದ್ರ ಸರ್ಕಾರದ ಪ್ರಮುಖ ವೈಜ್ಞಾನಿಕ ಸಲಹೆಗಾರ ಕೆ. ವಿಜಯ್ ರಾಘವನ್ (Chief Scientific Adviser K. Vijay Raghavan) ಈ ಎಚ್ಚರಿಗೆ ನೀಡಿದ್ದರು. ಆದರೆ, ಬಳಿಕ ಅವರು ಜನರು ಒಂದು ವೇಳೆ ಎಚ್ಚರಿಕೆಯನ್ನು ವಹಿಸಿದರೆ, ಮೂರನೇ ಅಲೆ ಕೇವಲ ಕೆಲವೇ ಭಾಗಗಳಿಗೆ ಸೀಮಿತವಾಗಲಿದೆ ಅಥವಾ ಬರುವ ಸಾಧ್ಯತೆ ಕೂಡ ಎಲ್ಲ ಎಂದಿದ್ದರು.


ಇದನ್ನೂ ಓದಿ-Paytm ನಲ್ಲಿ Vaccination slot ಸರ್ಚ್ ಮಾಡುವುದು ಹೇಗೆ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ