ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಹುದ್ದೆಗೆ ಕೃಷ್ಣಮೂರ್ತಿ ವೆಂಕಟ ಸುಬ್ರಮಣಿಯನ್ ರಾಜೀನಾಮೆ
ಭಾರತದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೃಷ್ಣಮೂರ್ತಿ ವೆಂಕಟ ಸುಬ್ರಮಣಿಯನ್ ಶುಕ್ರವಾರ (ಅಕ್ಟೋಬರ್ 8), ತಮ್ಮ ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ರಾಜೀನಾಮೆ ನೀಡುವುದಾಗಿ ಘೋಷಿಸಿದರು.
ನವದೆಹಲಿ: ಭಾರತದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೃಷ್ಣಮೂರ್ತಿ ವೆಂಕಟ ಸುಬ್ರಮಣಿಯನ್ ಶುಕ್ರವಾರ (ಅಕ್ಟೋಬರ್ 8), ತಮ್ಮ ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ರಾಜೀನಾಮೆ ನೀಡುವುದಾಗಿ ಘೋಷಿಸಿದರು.
ಅವರು ತಮ್ಮ ಅಧಿಕೃತ ಹೇಳಿಕೆಯಲ್ಲಿ, ಅವರು ಅಕಾಡೆಮಿಕ್ ಗೆ ಮರಳಲು ನಿರ್ಧರಿಸಿದ್ದಾರೆ ಎಂದು ಘೋಷಿಸಿದರು.'ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನನ್ನ 3 ವರ್ಷಗಳ ಪೂರೈಸಿದ ಅವಧಿಯನ್ನು ಪೂರ್ಣಗೊಳಿಸಿದ ನಂತರ ನಾನು ಅಕಾಡೆಮಿಕ್ ಗೆ ಮರಳಲು ನಿರ್ಧರಿಸಿದ್ದೇನೆ" ಎಂದು ಅವರು ಹೇಳಿದರು.
PM Kisan FPO Yojana: ರೈತರಿಗೆ ಸರ್ಕಾರ ನೀಡುತ್ತಿದೆ 15 ಲಕ್ಷ ರೂ. ಗಳ ನೆರವು , ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ
ತಮ್ಮ ಕರ್ತ್ಯವ್ಯದ ವೇಳೆ ಅವರಿಗೆ ಅದ್ಬುತ ಬೆಂಬಲ ಮತ್ತು ಪ್ರೋತ್ಸಾಹ ದೊರೆತಿದೆ ಎಂದು ಅವರು ಹೇಳಿದರು.ಡಿಸೆಂಬರ್ 7, 2018 ರಂದು ಸಿಇಎ ಆಗಿ ನೇಮಕಗೊಂಡ ಸುಬ್ರಮಣಿಯನ್ ಅವರ ಉತ್ತರಾಧಿಕಾರಿಯನ್ನು ಇನ್ನೂ ಕೇಂದ್ರ ಸರ್ಕಾರ ನೇಮಿಸಿಲ್ಲ.ಈ ಹಿಂದೆ, ಸಿಇಎ ಕೆವಿ ಸುಬ್ರಮಣಿಯನ್ ಅವರು ಹಲವಾರು ರಫ್ತು ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಬಂಧನ್ ಬ್ಯಾಂಕ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದರು.
ಅರವಿಂದ್ ಸುಬ್ರಮಣಿಯನ್ ಅವರು ಸಿಇಎ ಉದ್ಯೋಗವನ್ನು ತೊರೆದ ಐದು ತಿಂಗಳ ನಂತರ ಅವರ ನೇಮಕಾತಿಯು ಬಂದಿತು.
ಇದನ್ನೂ ಓದಿ-"ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡಕ್ಕೆ ಪೂರ್ಣಾವಧಿ ಕೋಚ್ ಆಗಬಾರದು"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.