Chief Ministers Salary in India: ನಮ್ಮ ದೇಶದ ಬಹುತೇಕ ಯುವಕರು ರಾಜಕೀಯದತ್ತ ಒಲವು ಹೊಂದಿರುವುದಿಲ್ಲ. ಆದರೆ ಅವರು ರಾಜಕಾರಣಿಗಳ ಸಂಬಳವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿದ್ದಾರೆ. ನಮ್ಮ ಪ್ರದೇಶದ ಮುಖ್ಯಮಂತ್ರಿಗಳ ವೇತನ ಎಷ್ಟು? ಎಂಬ ಪ್ರಶ್ನೆ ಈ ದೇಶದ ಎಲ್ಲಾ ಯುವಕರ ಮನಸ್ಸಿನಲ್ಲಿ ಇದ್ದೆ ಇರುತ್ತದೆ. ಅಷ್ಟೇ ಯಾಕೆ ತಮ್ಮ ಕ್ಷೇತ್ರದ ಸಂಸದರ ವೇತನ ಎಷ್ಟಿದೆ? ಅವರಿಗೆ ಯಾವ ರೀತಿಯ ಸೌಕರ್ಯಗಳನ್ನು ಒದಗಿಸಲಾಗುತ್ತದೆ? ಎಂಬಿತ್ಯಾದಿ ಪ್ರಶ್ನೆಗಳೂ ಕೂಡ ಅವರ ಮನಸ್ಸಿನಲ್ಲಿವೆ. ಹೀಗಿರುವಾಗ ಯುವಕರು ರಾಜಕೀಯ ಮುಖಂಡರ ವೇತನ, ಮುಖ್ಯಮಂತ್ರಿಗಳ ವೇತನ ಅವರಿಗೆ ನೀಡಲಾಗಿರುವ ಸೌಕರ್ಯಗಳ ಕುರಿತು (Knowledge Story) ತಿಳಿಯಲೇಬೇಕು.


COMMERCIAL BREAK
SCROLL TO CONTINUE READING

2022 ವರ್ಷದಲ್ಲಿ, ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಇಂತಹ ಪರಿಸ್ಥಿತಿಯಲ್ಲಿ, ಚುನಾವಣೆಯ ಸಮಯದಲ್ಲಿ, ಜನರ ಮನಸ್ಸಿನಲ್ಲಿ ಸಿಎಂ ಅವರ ಸಂಬಳ ಎಷ್ಟು ಎಂಬ ಪ್ರಶ್ನೆ ಆಗಾಗ ಬರುತಲೇ ಇರುತ್ತದೆ. ಹಾಗಾದರೆ ಬನ್ನಿ ನಿಮ್ಮ ರಾಜ್ಯದ ಮುಖ್ಯಸ್ಥರ ವೇತನ ಎಷ್ಟು ಮತ್ತು ಯಾವ ರಾಜ್ಯದ ಮುಖ್ಯಮಂತ್ರಿ ಅತಿ ಹೆಚ್ಚು ವೇತನ ಪಡೆಯುತ್ತಾರೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.


ಭಾರತದ ಸಂವಿಧಾನದ ಆರ್ಟಿಕಲ್ 164ರ ಪ್ರಕಾರ ರಾಜ್ಯದ ರಾಜ್ಯಪಾಲರು ರಾಜ್ಯದ ಮುಖ್ಯಮಂತ್ರಿಗಳ ನಿಯುಕ್ತಿ ಮಾಡುತ್ತಾರೆ. ಭಾರತದಲ್ಲಿ ಒಟ್ಟು 28 ರಾಜ್ಯಗಳಿದ್ದು, 8 ಕೇಂದ್ರಾಡಳಿತ ಪ್ರದೇಶಗಳಿವೆ. ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳ ವೇತನ ಬೇರೆ ಬೇರೆ ಇರುತ್ತದೆ ಎಂದು ನಿಮಗೆ ಹೇಳಿದರೆ, ನಿಮಗೂ ಆಶ್ಚರ್ಯವಾದೀತು. ಪ್ರತಿ 10 ವರ್ಷಗಳಿಗೊಮ್ಮೆ ಸಿಎಂ ವೇತನವನ್ನು ಪರಿಷ್ಕರಿಸಲಾಗುತ್ತದೆ. ರಾಜ್ಯದ ಶಾಸಕಾಂಗ ಮುಖ್ಯಮಂತ್ರಿಗಳ ವೇತನ ಹಾಗೂ ಭತ್ಯೆಯನ್ನು ನಿಗದಿಪಡಿಸುತ್ತದೆ.


ಇದನ್ನೂ ಓದಿ-Interesting Fact of Beer: ಸಾವಿರಾರು ವರ್ಷಗಳ ಬಳಿಕವೂ ಕೂಡ ಬಿಯರ್ ಬಾಟಲಿ ಬಣ್ಣ ಏಕೆ ಬದಲಾಗಿಲ್ಲ?


ಸಾಮಾನ್ಯವಾಗಿ ದೇಶದ ರಾಷ್ಟ್ರಪತಿಗಳ ವೇತನ (President Of India Salary) ಹೆಚ್ಚು ಮತ್ತು ಅವರ ಬಳಿಕ ಪ್ರಧಾನಿಗಳ (Prime Minister Of India Salary) ವೇತನ ಅತಿ ಹೆಚ್ಚು ಎಂದು ಹೆಲಾಗುತ್ತದೆ. ಆದರೆ, ಕೆಲ ರಾಜ್ಯಗಳ ಮುಖ್ಯಮಂತ್ರಿಗಳ ವೇತನ ಪ್ರಧಾನಿಗಿಂತ ಜಾಸ್ತಿಯಾಗಿದೆ ಎಂದರೆ ನಿಮಗೂ ಕೂಡ ಆಶ್ಚರ್ಯವಾದೀತು. ಮಾಧ್ಯಮ ವರದಿಗಳ ಪ್ರಕಾರ ಭಾರತದಲ್ಲಿ ತೆಲಂಗಾಣದ ಮುಖ್ಯಮಂತ್ರಿ (CM With Highest Salary) ವೇತನ ಎಲ್ಲಕ್ಕಿಂತ ಜಾಸ್ತಿಯಾಗಿದೆ. ಇದಾದ ಬಳಿಕ ಎರಡನೇ ಸ್ಥಾನದಲ್ಲಿ ದೆಹಲಿ ಹಾಗೂ ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ವೇತನ ಇದೆ. ತ್ರಿಪುರಾ ರಾಜ್ಯದ ಮುಖ್ಯಮಂತ್ರಿಗಳ (CM With Lowest Salary) ವೇತನ ಎಲ್ಲಕ್ಕಿಂತ ಕಡಿಮೆಯಾಗಿದೆ. 


ಇದನ್ನೂ ಓದಿ-Facts Of China: ಈ ದೇಶದ ಸೇನೆಯಲ್ಲಿ ಕೋತಿ, ಹಂಸ-ಪಾರಿವಾಳಗಳ ಭರ್ತಿ ನಡೆಯುತ್ತದೆ, ಮರಣದಂಡನೆಗೂ ಕೂಡ ಮೊಬೈಲ್ ಎಕ್ಸಿಕ್ಯೂಶನ್ ವ್ಯವಸ್ಥೆ


ಯಾವ ರಾಜ್ಯಗಳ ಮುಖ್ಯಮಂತ್ರಿಗಳ ವೇತನ ಎಷ್ಟು? 


    ರಾಜ್ಯ                 ವೇತನ 
ತೆಲಂಗಾಣ  4,10,000 ರೂ
ದೆಹಲಿ  3,90,000 ರೂ
 ಉತ್ತರ ಪ್ರದೇಶ 3,65,000 ರೂ
ಮಹಾರಾಷ್ಟ್ರ      3,40,000 ರೂ
ಆಂಧ್ರಪ್ರದೇಶ      3,35,000 ರೂ
ಗುಜರಾತ್      3,21,000 ರೂ
ಹಿಮಾಚಲ ಪ್ರದೇಶ    3,10,000 ರೂ
ಹರಿಯಾಣ      2,88,000 ರೂ
ಜಾರ್ಖಂಡ್      2,55,000 ರೂ
ಮಧ್ಯಪ್ರದೇಶ  2,30,000 ರೂ
ಛತ್ತೀಸಗಡ 2,30,000 ರೂ
ಪಂಜಾಬ್ 2,30,000 ರೂ
ಗೋವಾ 2,20,000 ರೂ
ಬಿಹಾರ 2,15,000 ರೂ
ಪಶ್ಚಿಮ ಬಂಗಾಳ   2,10,000 ರೂ
ತಮಿಳುನಾಡು 2,05,000 ರೂ
ಕರ್ನಾಟಕ 2,00,000 ರೂ
ಸಿಕ್ಕಿಂ  1,90,000 ರೂ
ಕೇರಳ  1,85,000 ರೂ
ರಾಜಸ್ಥಾನ  1,75,000 ರೂ
ಉತ್ತರಾಖಂಡ್ 1,75,000 ರೂ
ಒರಿಸ್ಸಾ 1,60,000 ರೂ
ಮೇಘಾಲಯ 1,50,000 ರೂ
ಅರುಣಾಚಲ ಪ್ರದೇಶ 1,33,000 ರೂ
 ಅಸ್ಸಾಂ 1,25,000 ರೂ
 ಮಣಿಪುರ 1,20,000 ರೂ
 ನಾಗಾಲ್ಯಾಂಡ್ 1,10,000 ರೂ
ತ್ರಿಪುರ 1,05,500 ರೂ

ಇದನ್ನೂ ಓದಿ-ಚಹಾಗೆ ಸಂಬಂಧಿಸಿದ ಈ General Knowledge ನಿಮಗೆ ತಿಳಿದಿದೆಯಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ