ಜೋಹಾನ್ಸ್ಬರ್ಗ್ : ವಿವಿಧ ಫ್ಲೇವರ್ ಚಾಕೊಲೇಟ್ಗಳು, ಡ್ರೈ ಫ್ರೂಟ್ಸ್ ಸೇರಿದಂತೆ ಇತರ ತರಾವರಿ ಖಾದ್ಯಗಳನ್ನೂ ಮೀರಿಸಿ ನಮ್ಮ ದೇಶದ ಜನರ ನೆಚ್ಚಿನ ತಿನಿಸಾದ ಕಾಶ್ಮೀರಿ ಚಿಲ್ಲಿ ಚಿಕನ್ ಸಮೋಸ ದಕ್ಷಿಣ ಆಫ್ರಿಕಾದಲ್ಲಿ ನಡೆದ ಖಾದ್ಯಗಳ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದೆ. 


COMMERCIAL BREAK
SCROLL TO CONTINUE READING

ಈ ಸ್ಪರ್ಧೆಯನ್ನು ಅತಿದೊಡ್ಡ ರಾಷ್ಟ್ರೀಯ ದಿನಪತ್ರಿಕೆಯು ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯ ಸಮುದಾಯಕ್ಕೆ ಆಯೋಜಿಸಿತ್ತು. 


ಸ್ಪರ್ಧೆಯಲ್ಲಿ ವಿವಿಧ ಮಾದರಿಯ ಚಾಕೋಲೇಟ್ನಿಂದ ಚಿಮುಕಿಸಿ ಬಾದಾಮಿ ಮತ್ತು ಗೋಡಂಬಿಗಳನ್ನು ಒಳಗೊಂಡಿರುವ ಸಮೋಸಾಗಳು; ಖಾದ್ಯ ಹೊಳಪನ್ನು ಒಳಗೊಂಡಿರುವ ಚಾಕೊಲೇಟ್; ಮಾರ್ಗರಿಟಾ ಪಿಜ್ಜಾ ಫಿಲ್ಲಿಂಗ್ ಮತ್ತು ಚಿಕನ್ ಜಲಪೆನೊ ಮೊದಲಾದವುಗಳು ಪಟ್ಟಿಯಲ್ಲಿದ್ದವು. 


ಆದರೆ ದಕ್ಷಿಣ ಆಫ್ರಿಕಾದ ಭಾರತೀಯ ವಿಶಿಷ್ಟ ಸಮೋಸಾ(ಸ್ಯಾಮೋಸಾ ಎಂದೂ ಸಹ ಕರೆಯಲಾಗುತ್ತದೆ) ಸಾಂಪ್ರದಾಯಿಕ ಪಂಜಾಬಿ ಸ್ನ್ಯಾಕ್ಸ್ ನಲ್ಲಿ ಡೀಪ್ ಫ್ರೈ ಮಾಡಿದ ಗರಿಗರಿ ತಿನಿಸೂ ಹೌದು.


ಈ ಸ್ಪರ್ಧೆಯಲ್ಲಿ ಸಾಲ್ಮಾ ಅಗಜಿ ಅವರು ಬಹುಮಾನ ಗಳಿಸಿದರು. "ಈ ರೆಸಿಪಿ ನನ್ನದೇ ಪ್ರಯತ್ನವಾಗಿದೆ. ಮೊದಲು ಚಿಕನ್ ಸ್ಯಾಂಡ್ವಿಚ್ ತಯಾರಿಸುತ್ತಿದ್ದೆ. ಆದರೆ ಸಮೊಸದೊಳಗೆ ಚಿಲ್ಲಿ ಚಿಕನ್ ತುಂಬಿ ಹೊಸ ರುಚಿ ಏಕೆ ತಯಾರಿಸಬಾರದು ಎಂದು ಆಲೋಚಿಸಿ ತಯಾರಿಸಿದೆ. ಮೊದಲಿಗೆ ಕೋಳಿಗೆ ಕಾಶ್ಮೀರಿ ಮೆಣಸಿನ ಪುಡಿ ಹಾಕಿ ಬೇಯಿಸಿಕೊಂಡು. ನಂತರ ನಾನು ಎರಡು ವಿಧದ ಚೀಸ್, ಮೊಝ್ಝಾರೆಲ್ಲಾ ಮತ್ತು ಗೌದಾ ಮತ್ತು ಮೇಯನೇಸ್ ಅನ್ನು ಸೇರಿಸಿದೆ" ಎಂದು ಅವರು ಹೇಳಿದರು.


ಈ ಸ್ಪರ್ಧೆಯ ಮತ್ತೆರಡು ವಿಭಾಗಗಳು ಡರ್ಬನ್ ಸಾರ್ವಜನಿಕ ಉತ್ಸವದಲ್ಲಿ ನಡೆದವು. 


ಡರ್ಬನ್ನ ಸಾರ್ವಜನಿಕ ಉತ್ಸವದಲ್ಲಿ ನಡೆಯುತ್ತಿದ್ದ ಸ್ಪರ್ಧೆಯ ಎರಡು ವಿಭಾಗಗಳು ಸಹ ಇದ್ದವು. ದಶಕಗಳಿಂದ ಸಮೋಸಾ ತಯಾರಿಕೆಯನ್ನೇ ಉದ್ಯೋಗವಾಗಿಸಿಕೊಂಡಿರುವ ಅಜ್ಜಿ ರೋಕ್ಸಾನಾ ನಸೀಮ್ 63, 60 ಸೆಕೆಂಡುಗಳೊಳಗೆ 10 ಸಮೋಸಾಗಳನ್ನು ಅಚ್ಚುಕಟ್ಟಾದ ಸ್ಟಾಕ್ನಲ್ಲಿ ತುಂಬಿಸುವುದರ ಮೂಲಕ ತಮ್ಮ ಕೌಶಲ್ಯವನ್ನು ತೋರಿಸಿದರು.


ಸ್ಪರ್ಧೆಯಲ್ಲಿ ಮೂರನೇ ವಿಭಾಗದಲ್ಲಿ, ಇಬ್ರಾಹಿಂ ಬುಕ್ಸ್(18), ಒಂದು ನಿಮಿಷದಲ್ಲಿ 10 ಸಮೋಸಾಗಳನ್ನು ತಿಂದು 'ವೇಗದ ಸಮೋಸಾ ಭಕ್ಷಕ' ಪ್ರಶಸ್ತಿಯನ್ನು ಪಡೆದರು.