ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಗಡಿವಿವಾದಕ್ಕೆ ಸಂಬಂಧಿಸಿದಂತೆ ದೊಡ್ಡ ಮಾಹಿತಿಯೊಂದು ಇದೀಗ ಬಹಿರಂಗಗೊಂಡಿದೆ. ಹೌದು, ಭಾರತ ಮತ್ತು ಚೀನಾ ದೇಶಗಳ ನಡುವೆ ಗಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತೀಯ ಜವಾನರು ಚೀನಾ ಸೈನಿಕರನ್ನು ಸೆರೆಹಿಡಿದಿದ್ದರು. ಲಡಾಕ್ ನಲ್ಲಿ ಭಾರತೀಯ ಸೈನಿಕರು ಚೀನಾ ಸೇನೆಯ ಓರ್ವ ಕರ್ನಲ್ ನನ್ನು ಜೀವಂತ ಸೆರೆಹಿಡಿದಿದ್ದರು.  ಭಾರತೀಯ ಸೇನೆಯ 3ನೇ ಮೀಡಿಯಂ ರೆಜಿಮೆಂಟ್ ನ ಜವಾನರು ಚೀನಾ ಸೇನೆಯ ಓರ್ವ ಕರ್ನಲ್ ನನ್ನು ಜೀವಂತ ಸೆರೆಹಿಡಿದಿದ್ದರು. ಈ ಘರ್ಷಣೆಯಲ್ಲಿ ಸುಮಾರು 45-50 ಚೀನಾ ಸೈನಿಕರು ಹತ್ಯೆಗೀಡಾಗಿದ್ದಾರೆ ಎಂದು ಮೂಲಗಳು ಹೇಳಿವೆ.


COMMERCIAL BREAK
SCROLL TO CONTINUE READING

ಗಲ್ವಾನ್ ಘರ್ಷಣೆಯ ಸಂಪೂರ್ಣ ಸತ್ಯ ಇದು
LAC ಬಳಿ ಸೋಮವಾರ ರಾತ್ರಿ ಚೀನಾ ಕೈಗೊಂಡ ನಿರ್ಮಾಣ ಕಾರ್ಯದ ಹಿನ್ನೆಲೆ ಹಿಂಸಾತ್ಮಕ ಘರ್ಷಣೆ ಸಂಭವಿಸಿತ್ತು. LAC ಬಳಿ ಚೀನಾ ಕೈಗೊಂಡ ನಿರ್ಮಾಣ ಕಾರ್ಯಕ್ಕೆ ತಡೆ ಒಡ್ಡುವುದರಲ್ಲಿ ಭಾರತೀಯ ಸೈನಿಕರು ಯಶಸ್ವಿಯಾಗಿದ್ದಾರೆ. ಭಾರತೀಯ ಸೈನಿಕರ ಶೌರ್ಯದ ಕಾರಣ ಚೀನಾ ಸೈನಿಕರು ಭಾರತದ ಗಡಿಯೊಳಗೆ ನುಸುಳಲು ವಿಫಲರಾಗಿದ್ದಾರೆ. LAC ಬಳಿ ಯಾವುದೇ ರೀತಿಯ ಒಳನುಸುಳುವಿಕೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಸೇನೆ ಹೇಳಿದೆ. ಕಳೆದ 60 ವರ್ಷಗಳಲ್ಲಿ ಚೀನಾ ಭಾರತದ 43 ಸಾವಿರ ಸ್ಕ್ವೆಯರ್ ಕಿ.ಮೀ ಭೂಭಾಗವನ್ನು ಕಬಳಿಸಿದೆ. ಸದ್ಯ ಚೀನಾ ಅನಾವಶ್ಯಕ ವಿವಾದದಿಂದ ಭಾರತೀಯ ಸೈನಿಕರ ಮನೋಬಲವನ್ನು ಕುಗ್ಗಿಸುವ ಕೆಲಸದಲ್ಲಿ ನಿರತವಾಗಿದೆ.


ಗಡಿ ವಿವಾದ ಕುರಿತಂತೆ ಪ್ರಧಾನಿ ಮೋದಿ ಹೇಳಿದ್ದೇನು?
ಘರ್ಷಣೆಯ ಬಳಿಕೆ ಸರ್ವಪಕ್ಷ ಸಭೆ ನಡೆಸಿರುವ ಪ್ರಧಾನಿ ಮೋದಿ, ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅವರು, ಚೀನಾ ವತಿಯಿಂದ  ಯಾವುದೇ ರೀತಿಯ ಒಳನುಸುಳುವಿಕೆ ಯಶಸ್ವಿಯಾಗಿಲ್ಲ ಹಾಗೂ ಇದರಲ್ಲಿ ಭಾರತದ ಯಾವುದೇ ಪೋಸ್ಟ್ ಅನ್ನು ಚೀನಾ ಕಬಳಿಸಿಲ್ಲ ಎಂದು ಹೇಳಿದ್ದರು. ಜೊತೆಗೆ ಭಾರತೀಯ ಸೇನೆಯ 20 ವಿರ ಯೋಧರು ಶತ್ರು ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಚೀನಾಗೆ ಇದಕ್ಕಾಗಿ ಭಾರಿ ಬೆಲೆಯನ್ನೇ ತೆತ್ತಿದೆ. ಅಷ್ಟೇ ಅಲ್ಲ ಭಾರತೀಯ ಸೈನಿಕರು ಯಾವುದೇ ರೀತಿಯ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಲು ಸಿದ್ಧರಾಗಿದ್ದು, ಕ್ಷಮತೆ ಕೂಡ ಹೊಂದಿದ್ದಾರೆ ಎಂದು ಹೇಳಿದ್ದರು. ಸದ್ಯ ನಾವು ನಮ್ಮ ಸೈನಿಕರಿಗೆ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳಲು ಅನುಮತಿಯನ್ನು ನೀಡಿದ್ದೇವೆ. ಆದರೆ, ವಿವಾದ ಶಾಂತಿಯುತವಾಗಿ ಹಾಗೂ ತಾಂತ್ರಿಕ ಮಟ್ಟದಲ್ಲಿ ಬಗೆ ಹರಿಸಲು ಭಾರತ ಬಯಸುತ್ತದೆ. ದೇಶದ ಸಾರ್ವಭೌಮತ್ವದ ರಕ್ಷಣೆಗೆ ಭಾರತ ಬದ್ಧವಾಗಿದೆ ಹಾಗೂ ಕಳೆದ 5 ವರ್ಷಗಳಲ್ಲಿ ಗಡಿ ಭಾಗದಲ್ಲಿ ಭಾರತ ಸಾಕಷ್ಟು ಬೆಳವಣಿಗೆ ಮಾಡಿದೆ, ಭಾರತದ ಸುಧಾರಿತ ಮೂಲಭೂತ ಸೌಕರ್ಯದ ಕಾರಣ  ಚೀನಾದ ಪ್ರತಿಯೊಂದು ನಡೆಯ ಮೇಲೆ ಗಮನ ಕೇಂದ್ರೀಕರಿಸಲಾಗುತ್ತಿದೆ. ಈ ಮೊದಲು ಕೂಡ ಭಾರತ ಹೊರಗಿನ ಯಾವುದೇ ಒತ್ತಡಕ್ಕೆ ಮಣಿದಿಲ್ಲ ಹಾಗೂ ಮುಂದೆಯೂ ಕೂಡ ಮಣಿಯುವುದಿಲ್ಲ ಎಂದು ಪ್ರಧಾನಿ ಹೇಳಿದ್ದರು. 


ವಾಯುಸೇನಾ ಯೋಧರ ರಜೆ ರದ್ದು
ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾ ವಿರುದ್ಧ ಭಾರತೀಯ ಸೇನೆಗೆ ಮುಕ್ತ ಹಸ್ತ ನೀಡಿರುವುದಾಗಿ ಹೇಳಿದ್ದಾರೆ. ಇದನ್ನು ನೀವು ಚೀನಾ ವಿರುದ್ಧ ಭಾರತದ ನಿರ್ಣಾಯಕ ಸಿದ್ಧತೆ ಅಂತಲೂ ಕೂಡ ಕರೆಯಬಹುದು. ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ವಾಯುಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್. ಕೆ. ಭದೌರಿಯಾ, ಚೀನಾ ವತಿಯಿಂದ ಓಡ್ದಲಾಗುವ ಸವಾಲಿಗೆ ಭಾರತೀಯ ವಾಯುಸೇನೆ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಭಾರತೀಯ ವಾಯುಪಡೆಯ ಸಿಬ್ಬಂದಿಯ ರಜೆಯನ್ನೂ ಕೂಡ ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.