ನವದೆಹಲಿ: ಮೇಡ್ ಇನ್ ಇಂಡಿಯಾ, 'ಚಿಂಗಾರಿ' ಹೆಸರಿನ ಕಿರು ವಿಡಿಯೋ ತಯಾರಿಕಾ ಅಪ್ಲಿಕೇಶನ್ ತನ್ನ ಬಳಕೆದಾರರಿಗಾಗಿ ಮೊದಲ ಡಿಜಿಟಲ್ ಟ್ಯಾಲೆಂಟ್ ಹಂಟ್ ಶೋ ಅನ್ನು ಲಾಂಚ್ ಮಾಡಿದೆ. ಈ ಷೋಗೆ 'ಚಿಂಗರಿ ಸ್ಟಾರ್ಸ್: ಟ್ಯಾಲೆಂಟ್ ಕಾ ಮಹಾಸಂಗ್ರಾಮ್' (Chingari Stars: Talent Ka Mahasangram) ಎಂದು ಹೆಸರಿಸಲಾಗಿದೆ. ಈ ಷೋನಲ್ಲಿ ಗೆಲ್ಲುವ ಬೆಸ್ಟ್ ಕಂಟೆಂಟ್ ಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತಿದೆ. ಈ ಕುರಿತು ಹೇಳಿಕೆ ನೀಡಿರುವ ಈ ಆಪ್ ನ ಸಹ ಸಂಸ್ಥಾಪಕ ಸುಮೀತ್ ಘೋಷ್, ದೇಸಿ ಪ್ರತಿಭೆಗಳಿಗೆ ಒಂದು ವೇದಿಕೆ ಒದಗಿಸುವುದು ಈ ಟ್ಯಾಲೆಂಟ್ ಷೋನ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ 'ಚಿಂಗಾರಿ' ಭಾರತದಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ. ಅದರಲ್ಲೂ ವಿಶೇಷವಾಗಿ ಚೀನಾ ಮೂಲಕ ಟಿಕ್ ಟಾಕ್ ಆಪ್ ಬ್ಯಾನ್ ಆದ ಬಳಿಕ ಈ ಆಪ್ ಗೆ ಭಾರಿ ಜನಮನ್ನಣೆ ದೊರೆಯುತ್ತಿದೆ. ಗಂಟೆಗೆ ಲಕ್ಷಾಂತರ ಜನರು ಈ ಆಪ್ ಅನ್ನು ಡೌನ್ಲೋಡ್ ಮಾಡುತ್ತಿದ್ದಾರೆ. ಇದುವರೆಗೆ ಒಂದು ಕೋಟಿಗೂ ಅಧಿಕ ಜನರು ಡೌನ್ ಲೋಡ್ ಮಾಡಿದ್ದಾರೆ.


ಡಿಜಿಟಲ್ ಟ್ಯಾಲೆಂಟ್ ಹಂಟ್ ಷೋ ನಲ್ಲಿ ಎನಿರಲಿದೆ?
ಈ ಷೋ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ. ಈ ಷೋನಲ್ಲಿ ಬಳಕೆದಾರರು ಡಾನ್ಸ್, ಸಿಂಗಿಂಗ್, ಆಕ್ಟಿಂಗ್, ಮಿಮಿಕ್ರಿ, ಕಾಮೆಡಿ ಹಾಗೂ ಇನ್ನೋವೇಷನ್ ಕೆಟಗರಿಗಳ ಅಡಿ ತಮ್ಮ ಟ್ಯಾಲೆಂಟ್ ಪ್ರಸ್ತುತಪಡಿಸಬೇಕಾಗಲಿದೆ. ಜೊತೆಗೆ ತಮ್ಮ ಟ್ಯಾಲೆಂಟ್ ನ ವಿಡಿಯೋ ಕೂಡ ಅಪ್ಲೋಡ್ ಮಾಡಬೇಕು. ಈ ಷೋನಲ್ಲಿ ದೇಶದ ಯಾವುದೇ ಭಾಗದಿಂದ ನಾಗರಿಕರು ಭಾಗವಹಿಸಬಹುದಾಗಿದೆ. 


ಈ ಕಾಂಟೆಸ್ಟ್ ನಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಟ್ಯಾಲೆಂಟ್ ನ 15 ರಿಂದ 60 ಸೆಕೆಂಡ್ ಗಳ ವಿಡಿಯೋ ತಯಾರಿಸಿ ಅಪ್ಲೋಡ್ ಮಾಡಬೇಕು. ಅಭ್ಯರ್ಥಿಗಳ ಪೆರ್ಫಾರ್ಮೆನ್ಸ್ ಆಧಾರದ ಮೇಲೆ  ಶಾರ್ಟ್ ಲಿಸ್ಟಿಂಗ್ ಮಾಡಲಾಗುವುದು. ಈ ಸ್ಪರ್ಧೆಯ ವಿಶೇಷತೆ ಎಂದರೆ ಆಪ್ ಪ್ಲಾಟ್ಫಾರ್ಮ್ ಮೇಲೆಯೇ ಅಭ್ಯರ್ಥಿಗಳ ವಿಡಿಯೋಗಳಿಗೆ ಲೈವ್ ನಡೆಸಲಾಗುತ್ತಿದೆ. 


'ಚಿಂಗಾರಿ ಸ್ಟಾರ್ಸ್-ಟ್ಯಾಲೆಂಟ್ ಕಾ ಮಹಾಸಂಗ್ರಾಮ್' ಅಡಿ ಉತ್ತಮ ಕಂಟೆಂಟ್ ರಚಿಸುವವರಿಗೆ ಒಂದು ಕೋಟಿ ರೂ. ಬಹುಮಾನ ನೀಡಲಾಗುತ್ತಿದೆ. ಜೊತೆಗೆ ದೇಶದ ಪ್ರತಿಯೊಂದು ರಾಜ್ಯದ ಬೆಸ್ಟ್ ಕಂಟೆಂಟ್ ಕ್ರಿಯೇಟರ್ಸ್ ಗಳಿಗೆ ತಲಾ 5 ಲಕ್ಷ ರೂ. ಬಹುಮಾನ ನೀಡಲಾಗುವುದು.


ಹೇಗೆ ಪಾಲ್ಗೊಳ್ಳಬೇಕು?
- ಮೊದಲು ಗೂಗಲ್ ಪ್ಲೇ ಸ್ಟೋರ್ ಅಥವಾ iOS ಸ್ಟೋರ್ ಗೆ ಭೇಟಿ ನೀಡಿ ಚಿಂಗಾರಿ ಆಪ್ ಡೌನ್ಲೋಡ್ ಮಾಡಿ, ಪ್ಲಾಟ್ಫಾರ್ಮ್ ನಲ್ಲಿ ನಿಮ್ಮ ಪ್ರೊಫೈಲ್ ರಚಿಸಿ.
- ಬಳಿಕ ನಿಮ್ಮ ನೆಚ್ಚಿನ ಕೆಟಗರಿಯನ್ನು ಆಯ್ಕೆ ಮಾಡಿ. ಇದಕ್ಕಾಗಿ ಚಿಂಗಾರಿ ಆಪ್ ನಲ್ಲಿ ಡಾನ್ಸ್, ಮ್ಯೂಸಿಕ್, ಆಕ್ಟಿಂಗ್, ಮಿಮಿಕ್ರಿ, ಸ್ಟಾಂಡ್-ಅಪ್ ಕಾಮಿಡಿ, ಇನ್ನೋವೇಷನ್ ಇತ್ಯಾದಿ ಕೆಟಗರಿಗಳನ್ನು ನಿರ್ಮಿಸಲಾಗಿದೆ.
- ನಂತರ ನಿಮ್ಮ ಟ್ಯಾಲೆಂಟ್ ಗೆ ಸಂಬಂಧಿಸಿದ 15 ರಿಂದ 60 ಸೆಕೆಂಡ್ ಅವಧಿಯ ವಿಡಿಯೋ ಅಪ್ಲೋಡ್ ಮಾಡಿ. 
- ಬಳಿಕ ನೀವು ತಯಾರಿಸುವ ವಿಡಿಯೋ ಅನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ, ಅವರಿಗೂ ಕೂಡ ಚಿಂಗಾರಿ ಆಪ್ ಡೌನ್ ಲೋಡ್ ಮಾಡಲು ಸೂಚಿಸಿ.
- ಅವರಿಗೂ ಕೂಡ ನಿಮ್ಮ ವಿಡಿಯೋಗೆ ವೋಟ್ ಮಾಡಲು, ಲೈಕ್ ಹಾಗೂ ಫಾಲೋ ಮಾಡಲು ಹೇಳಿ. 
- ಪ್ರತಿಯೊಂದು ರಾಜ್ಯದಿಂದ 10 ಜನರನ್ನು ಶಾರ್ಟ್ ಲಿಸ್ಟ್ ಮಾಡಲಾಗುವುದು ಹಾಗೂ ಅವರಿಗೆ 5-5 ಲಕ್ಷ ರೂ. ಬಹುಮಾನ ನೀಡಲಾಗುವುದು. 
- ಈ 10 ಜನರಲ್ಲಿ ಅತಿ ಹೆಚ್ಚು ಚಿಂಗಾರಿ ಹೊಂದಿದ ಮತ್ತು 5 ಲಕ್ಷ ರೂ. ಬಹುಮಾನ ಗೆದ್ದ ಸ್ಪರ್ಧಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ನೀಡಲಾಗುವುದು. ಇಲ್ಲಿ ಪ್ರತ್ಯೇಕ ರಾಜ್ಯದ ವಿಜೇತರು ಮೂರು ಪ್ರತ್ಯೇಕ ವಿಡಿಯೋಗಳನ್ನು ಅಪ್ಲೋಡ್ ಮಾಡಬೇಕು ಮತ್ತು ವೋಟ್ ಗಾಗಿ ಜನರಿಗೆ ಮನವಿ ಮಾಡಬೇಕು. 
- ಅವರು ಮನವಿ ಮಾಡಿರುವ ವಿಡಿಯೋ ಅನ್ನು ರಾಷ್ಟ್ರೀಯ ಮಟ್ಟು ರಾಜ್ಯಮಟ್ಟದ ನ್ಯೂಸ್ ಚಾನೆಲ್ ಗಳಲ್ಲಿ ಬಿತ್ತರಿಸಲಾಗುವುದು.
- ಈ ಷೋ ಕುರಿತು ಅಧಿಕ ಮಾಹಿತಿಗಾಗಿ ಕಂಪನಿಯ ಅಧಿಕೃತ ವೆಬ್ಸೈಟ್ ಆಗಿರುವ https://chingari.io/starಗೆ ಭೇಟಿ ನೀಡಿ.