ಸರ್ಕಾರಿ ಬಂಗಲೆಯಿಂದ ಚಿರಾಗ್ ಪಾಸ್ವಾನ್ ಎತ್ತಂಗಡಿ... !
ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಮತ್ತು ಲೋಕಸಭಾ ಸಂಸದ ಚಿರಾಗ್ ಪಾಸ್ವಾನ್ ಅವರನ್ನು ಅವರ ತಂದೆಗೆ ನೀಡಲಾದ ಬಂಗಲೆಯಿಂದ ಹೊರಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಮತ್ತು ಲೋಕಸಭಾ ಸಂಸದ ಚಿರಾಗ್ ಪಾಸ್ವಾನ್ ಅವರನ್ನು ಅವರ ತಂದೆಗೆ ನೀಡಲಾದ ಬಂಗಲೆಯಿಂದ ಹೊರಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
12 ಜನಪಥ್ ರಸ್ತೆಯಲ್ಲಿರುವ ಆವರಣಕ್ಕೆ ಸರ್ಕಾರ ತಂಡವನ್ನು ಕಳುಹಿಸಿದ್ದು, ಚಿರಾಗ್ ಪಾಸ್ವಾನ್ ಅವರ ವಸ್ತುಗಳನ್ನು ತೆರವುಗೊಳಿಸಲಾಗುತ್ತಿದೆ.ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ನಿವಾಸದ ಹತ್ತಿರದಲಿರುವ ಬಂಗಲೆಯನ್ನು ಕೇಂದ್ರ ಸಚಿವರ ಬಳಕೆಗೆ ಮೀಸಲಿಡಲಾಗಿದೆ.ರಾಮ್ ವಿಲಾಸ್ ಪಾಸ್ವಾನ್ (Ram Vilas Paswan) ಅವರ ಮರಣದ ನಂತರ ಸುಮಾರು ಒಂದು ವರ್ಷದ ನಂತರ - ಕಳೆದ ವರ್ಷ ಆವರಣವನ್ನು ಖಾಲಿ ಮಾಡಲು ಚಿರಾಗ್ ಪಾಸ್ವಾನ್ (Chirag Paswan) ಅವರಿಗೆ ಕೋರಲಾಗಿತ್ತು.
ಇದನ್ನೂ ಓದಿ: 'ಒನ್ ನೇಷನ್ ಒನ್ ಕಾರ್ಡ್'ನ ಸಾಲಿನಲ್ಲಿ ಈಗ 'ಒನ್ ನೇಷನ್ ಒನ್ ಸ್ಟ್ಯಾಂಡರ್ಡ್', ಇದರ ಲಾಭ ತಿಳಿಯಿರಿ
ಈ ಮನೆಯು ದೆಹಲಿಯ ಲೋಕ ಜನಶಕ್ತಿ ಪಕ್ಷದ ಅಧಿಕೃತ ವಿಳಾಸವಾಗಿದೆ ಮತ್ತು ಪಕ್ಷದ ಎಲ್ಲಾ ಅಧಿಕೃತ ಕಾರ್ಯಕ್ರಮಗಳು ಮತ್ತು ಸಾಂಸ್ಥಿಕ ಸಭೆಗಳಿಗೆ ಇದನ್ನು ಬಳಸಲಾಗುತ್ತಿತ್ತು.ಅವರ ಮರಣದ ನಂತರ, ಪಕ್ಷವು ಕಾನೂನುಬಾಹಿರವಾಗಿ ಬಂಗಲೆಯನ್ನು ಸ್ಮಾರಕವಾಗಿ ಪರಿವರ್ತಿಸಿತು, ಹುಲ್ಲುಹಾಸಿನಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಿತು. 2000ರಲ್ಲಿ, ಕೇಂದ್ರವು ಲುಟ್ಯೆನ್ಸ್ ಬಂಗಲೆಗಳನ್ನು ಸ್ಮಾರಕಗಳಾಗಿ ಪರಿವರ್ತಿಸುವುದನ್ನು ನಿಷೇಧಿಸಿತು.
ಇದನ್ನೂ ಓದಿ: ಭಾರತೀಯ ರಾಜಕಾರಣದ ಹವಾಮಾನ ತಜ್ಞ ರಾಮ್ ವಿಲಾಸ್ ಪಾಸ್ವಾನ್
ಇಂದು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಎಸ್ಟೇಟ್‌ಗಳ ನಿರ್ದೇಶನಾಲಯವು ಹೊರಹಾಕುವ ಆದೇಶವನ್ನು ಕಾರ್ಯಗತಗೊಳಿಸಲು ನಗರದ ಹೃದಯಭಾಗದಲ್ಲಿರುವ ಬಂಗಲೆಗೆ ತಂಡವನ್ನು ಕಳುಹಿಸಿದೆ.ರಾಮ್ ವಿಲಾಸ್ ಪಾಸ್ವಾನ್ ಅವರ ಮರಣದ ನಂತರ, ಅವರ ಪುತ್ರ ಮತ್ತು ಸಹೋದರ ಪಶುಪತಿ ಕುಮಾರ್ ಪರಸ್ ಅವರ ಪರಂಪರೆ ಮತ್ತು ಪಕ್ಷದ ನಾಯಕತ್ವದ ಬಗ್ಗೆ ಭಿನ್ನಾಭಿಪ್ರಾಯಗಳು ಉದ್ಭವಿಸಿದ್ದರಿಂದ ಅವರು ಸ್ಥಾಪಿಸಿದ ಪಕ್ಷವೂ ವಿಭಜನೆಯಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಆಹಾರ ಸಚಿವರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ 2020 ರ ಅಕ್ಟೋಬರ್‌ನಲ್ಲಿ ಹೃದಯ ಶಸ್ತ್ರಚಿಕಿತ್ಸೆಯ ಕೆಲವು ದಿನಗಳ ನಂತರ ಮೃತಪಟ್ಟಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.