ನವದೆಹಲಿ: ಅಪ್ರಾಪ್ತೆಯ ಕತ್ತರಿಸಿದ ದೇಹದ ತುಂಡುಗಳು ಎರಡು ಚೀಲಗಳಲ್ಲಿ ಬಾರಾಪುಲ್ಲ ಫ್ಲೈಓವರ್‌ ಅಡಿಯ ಚರಂಡಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಮಂಗಳವಾರ ನಡೆದಿದೆ. 


COMMERCIAL BREAK
SCROLL TO CONTINUE READING

ಆರೋಪಿಯನ್ನು ಆಕೆಯ ಬಾಯ್ ಫ್ರೆಂಡ್ ರಿಜ್ವಾನ್‌ ಖಾನ್‌(20) ಎಂದು ಗುರುತಿಸಲಾಗಿದ್ದು, ನಿಜಾಮುದ್ದೀನ್‌ ಪ್ರದೇಶದ ನಿಜಾಮ್‌ ನಗರದ ನಿವಾಸಿ ಎಂದು ತಿಳಿದುಬಂದಿದೆ. ಈತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. 


ಮೊದಲಿಗೆ ಸಂತ್ರಸ್ತೆಯನ್ನು ಚಾಕುವಿನಿಂದ ಕೊಂದಿರುವ ಆರೋಪಿ, ನಂತರ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎರಡು ಬ್ಯಾಗುಗಳಲ್ಲಿ ತುಂಬಿ ಚರಂಡಿ ಬಳಿ ಬಿಸಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.


ಮೃತ ಅಪ್ರಾಪ್ತೆಯೊಂದಿಗೆ ಆರೋಪಿಯು ಕಳೆದ 11 ತಿಂಗಳಿಂದ ಸಂಬಂಧದಲ್ಲಿದ್ದುದಾಗಿಯೂ, ಆದರೆ ಕಳೆದ ಕೆಲ ದಿನಗಳಿಂದ ಆಕೆ ಮತ್ತೊಬ್ಬನೊಂದಿಗೆ ಸ್ನೇಹ ಬೆಳೆಸಿದ್ದಳು. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳವಾಗಿದ್ದು, ನಂತರ ಆಕೆಯನ್ನು ಕೊಂದಿದ್ದಾಗಿ ಆರೋಪಿಯು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.