ನಾಗ್ಪುರ: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ಅಂದಿನ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ತಿಳಿದಿತ್ತು. ಕಾಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಈ ಒಪ್ಪಂದವನ್ನು ತನಿಖೆಗೆ ಮಾಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಗುರುವಾರ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಮೋದಿ ಬದಲಾಯಿಸಿದ್ದೇ ಬೆಲೆ ಹೆಚ್ಚಳಕ್ಕೆ ಕಾರಣವಾಯಿತು ಎಂದು ಆರೋಪಿಸಿದರು. 


"ಚುನಾವಣೆ ಬಳಿಕ ರಫೇಲ್ ಒಪ್ಪಂದದ ತನಿಖೆ ನಡೆಯಲಿದೆ. ಚೌಕಿದಾರ್ ಜೈಲಿಗೆ ಹೋಗುತ್ತಾರೆ" ಎಂದು ಹೇಳುವ ಮೂಲಕ ಪ್ರತಿಯೊಬ್ಬರಿಗೂ "ಚೌಕಿದಾರ್" ಆಗಬೇಕೆಂಬ ಪ್ರಧಾನಿ ಪ್ರಸ್ತಾಪವನ್ನು ಟೀಕಿಸಿದರು.



ನರೇಂದ್ರ ಮೋದಿ ಅವರು ರಫೇಲ್(ಮೂಲ ಒಪ್ಪಂದ) ಒಪ್ಪಂದವನ್ನು ಬದಲಾಯಿಸಿದ್ದು, ಪ್ರತಿ ಜೆಟ್'ಗೆ 1,600 ಕೋಟಿ ರೂ. ನೀಡಿ ಖರೀದಿಸಿರುವುದಾಗಿ ರಕ್ಷಣಾ ಸಚಿವಾಲಯದ ದಾಖಲೆ ತಿಳಿಸಿದೆ. ಚೌಕಿದಾರ್ ದರೋಡೆ ಮಾಡಿದ್ದಾರೆ. ಈ ಹಿಂದೆ ಮಾಧ್ಯಮದವರು ಅಂದಿನ ರಕ್ಷಣಾ ಸಚಿವ ಪರಿಕ್ಕರ್ ಅವರನ್ನು ಪ್ರಶ್ನಿಸಿದಾಗ ನನಗೆ ಹೊಸ ಒಪ್ಪಂದದ ಬಗ್ಗೆ ಗೊತ್ತಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಪ್ರಶ್ನಿಸಿ ಎಂದು ಹೇಳಿದ್ದರು. ಏಕೆಂದರೆ ಪರಿಕ್ಕರ್ ಅವರಿಗೆ ಬ್ರಷ್ಟಾಚಾರ ನಡೆದಿರುವ ಬಗ್ಗೆ ಅರಿವಿತ್ತು" ಎಂದಿದ್ದಾರೆ.