ಮಣ್ಣಲ್ಲಿ ಮಣ್ಣಾದ ಧೀಮಂತ ನಾಯಕ ಜಾಫರ್ ಷರೀಫ್
ಮುಸ್ಲಿಂ ಸಂಪ್ರದಾಯದಂತೆ ಜಾಫರ್ ಷರೀಫ್ ಅವರ ಅಂತ್ಯಸಂಸ್ಕಾರ ನೆರವೇರಿತು.
ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ (85) ಅವರ ಅಂತ್ಯ ಕ್ರಿಯೆ ಜಯಮಹಲ್ ಖುದ್ದುಸ್ ಸಾಹೇಬ್ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ನೆರವೇರಿತು. ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಮುಸ್ಲಿಂ ಸಮಾಜದ ಮುಖಂಡರು, ಎಐಸಿಸಿ ಮುಖಂಡ ಗುಲಾಂ ನಬೀ ಆಜಾದ್, ಸಚಿವ ಯುಟಿ ಖಾದರ್, ಸಚಿವ ಜಮೀರ್ ಅಹಮದ್, ರಿಜ್ವಾನ್ ಅರ್ಷದ್, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಸೇರಿದಂತೆ ಹಲವು ಷರೀಫ್ ಅಭಿಮಾನಿಗಳು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ನ ಹಿರಿಯ ನಾಯಕರು ಷರೀಫ್ ಪಾರ್ಥಿವ ಶರೀರದ ದರ್ಶನ ಮಾಡಿ ಅಗಲಿದ ನಾಯಕನಿಗೆ ಸಂತಾಪ ಸಲ್ಲಿಸಿದ್ದರು.